– ಸಿಬ್ಬಂದಿ ವಿರುದ್ಧ ನಿಯಮ ಮೀರಿ ಹಣ ಪಡೆದು ವಾಹನ ಬಿಟ್ಟ ಆರೋಪ
ಚಿಕ್ಕಮಗಳೂರು: ಸಾಲು-ಸಾಲು ರಜೆ ಹಿನ್ನೆಲೆ ಚಿಕ್ಕಮಗಳೂರಿನ (Chikkamagaluru) ಪ್ರವಾಸಿ ತಾಣಗಳಿಗೆ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದಾರೆ.
ಮುಳ್ಳಯ್ಯನಗಿರಿ (Mullayanagiri), ದತ್ತಪೀಠ, ಗಾಳಿಕೆರೆಗೆ ಪ್ರವಾಸಿಗರು ಬಂದಿದ್ದಾರೆ. ಗಿರಿ ಭಾಗಕ್ಕೆ ಏಕಾಏಕಿ ಸಾವಿರಾರು ಕಾರುಗಳು ಬಂದಿದ್ದು, ಟ್ರಾಫಿಕ್‌ನಲ್ಲಿ ಸಿಲುಕಿ ಪ್ರವಾಸಿಗರು ಪರದಾಡಿದ್ದಾರೆ. ಪಂಡರವಳ್ಳಿ – ಸೀತಾಳಯ್ಯನಗಿರಿ ಬಳಿ ಗಿರಿಯ ಕಿರಿದಾದ ರಸ್ತೆಯಲ್ಲಿ ಸಿಲುಕಿ ಗಂಟೆಗಟ್ಟಲೇ ಪ್ರವಾಸಿಗರು ಹೈರಾಣಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಸಿಮೆಂಟ್ ಚೀಲದಲ್ಲಿ ಕೋಟಿ ಕೋಟಿ ಹಣ ಪತ್ತೆ
ಪ್ರವಾಸೋದ್ಯಮ ಇಲಾಖೆಯ ಆನ್‌ಲೈನ್ ಟಿಕೆಟ್ ನಿಯಮ ಗಾಳಿಗೆ ತೂರಲಾಗಿದೆ. ಒಂದು ಕಾರಿಗೆ 1000-1500 ರೂ. ಹಣ ಪಡೆದು ಪ್ರವಾಸಿಗರ ಕಾರನ್ನು ಗಿರಿಭಾಗಕ್ಕೆ ಬಿಡಲಾಗುತ್ತಿದೆ. ಇದರಿಂದಾಗಿ ಟ್ರಾಫಿಕ್ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು, ಚೆಕ್‌ಪೋಸ್ಟ್ ಸಿಬ್ಬಂದಿ ಪರದಾಡಿದ್ದಾರೆ. ಇದನ್ನೂ ಓದಿ: ತ.ನಾಡು | ಹಣ್ಣಿಗಾಗಿ ಸುತ್ತುವರಿದ ಕೋತಿಗಳು – ಹೆದರಿ ಬೆಟ್ಟದಿಂದ ಕಾಲುಜಾರಿ ಬಿದ್ದು ಮಹಿಳೆ ಸಾವು
