ಲಂಡನ್: ಪವಿತ್ರ ಗಂಗಾನದಿ (Ganga River) ತೀರದಲ್ಲಿ ನಡೆಯುವ `ಗಂಗಾರತಿ’ಯ ವೈಭವ ಹಾಗೂ ಅದರ ಆಧ್ಯಾತ್ಮಿಕ ಪರಿಮಳ ಈಗ ಭಾರತದ (India) ಗಡಿಯನ್ನೂ ದಾಟಿ ವಿದೇಶದಲ್ಲೂ ಮೊಳಗಿದೆ. ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾಗಿರುವ ಈ ಆಚರಣೆಯನ್ನು ಲಂಡನ್ನ (London) ಥೇಮ್ಸ್ ನದಿಯಲ್ಲಿ ವೈಭೋಗದಿಂದ ನಡೆಸಲಾಗಿದೆ.
ಭಾನುವಾರ (ಸೆ.13) ಲಂಡನ್ನ ಗ್ರೀನ್ವಿಚ್ನಲ್ಲಿರುವ (Greenwich) ಥೇಮ್ಸ್ ನದಿ (Thames River) ತೀರದಲ್ಲಿ ಸಾವಿರಾರು ಜನರು ಸೇರಿ ಮೊದಲ ಬಾರಿಗೆ `ಗಂಗಾರತಿ’ಯನ್ನು ನೆರವೇರಿಸಿದ್ದಾರೆ. ಚಿನ್ಮಯ ಮಿಷನ್ನ 75ನೇ ವಾರ್ಷಿಕೋತ್ಸವದ ಅಂಗವಾಗಿ ಹಾಗೂ `ಟೋಟಲಿ ಥೇಮ್ಸ್’ ಉತ್ಸವದ ಸಹಯೋಗದೊಂದಿಗೆ ಚಿನ್ಮಯ ಮಿಷನ್ ಯುಕೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದನ್ನೂ ಓದಿ: ಸಿದ್ದರಾಮಯ್ಯ ಶಾಶ್ವತ ಮುಖ್ಯಮಂತ್ರಿ – ಅಭಿಮಾನಿಗಳಿಂದ ಘೋಷಣೆ
ʻಥೇಮ್ಸ್ನಲ್ಲಿ ಗಂಗಾರತಿ: ಬೆಳಕಿನ ಸಮರ್ಪಣೆ’ ಎಂಬ ಶೀರ್ಷಿಕೆಯಡಿ ನಡೆದ ಈ ಕಾರ್ಯಕ್ರಮವು ಆಧ್ಯಾತ್ಮಿಕ ಕೃತಜ್ಞತೆ, ಪರಿಸರದ ಕಾಳಜಿ ಮತ್ತು ಏಕತೆಯ ಸಂದೇಶವನ್ನು ಸಾರಿತು. ಈ ಅಪರೂಪದ ಹಾಗೂ ಸಡಗರ ಸಂಭ್ರಮದಿಂದ ಜನರು ಭಾಗಿಯಾದ ಈ ಕಾರ್ಯಕ್ರಮವು ಮುಂದಿನ ದಿನಗಳಲ್ಲಿ ವಾರ್ಷಿಕವಾಗಿ ಮುಂದುವರೆಯುವ ಸಾಧ್ಯತೆಯಿದೆ.
UK में Thames नदी पर पहली बार गंगा आरती हुई
रविवार को #लंदन में Thames नदी के किनारे हज़ारों लोग पहली बार हुई गंगा आरती के लिए इकट्ठा हुए।
रोशनी का एक समारोह’ का आयोजन चिन्मय मिशन UK ने सालाना ‘टोटली टेम्स’ फेस्टिवल के साथ मिलकर किया था। यह आयोजन संस्था के 75 साल पूरे होने के… pic.twitter.com/4B5p8DD6HN
— SansadTV (@sansad_tv) September 14, 2026
ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್ನ ಜಾಗತಿಕ ಮುಖ್ಯಸ್ಥರಾದ ಸ್ವಾಮಿ ಸ್ವರೂಪಾನಂದ ಅವರು ಮಾತನಾಡಿ, ಲಂಡನ್ನ ಹೃದಯಭಾಗದಲ್ಲಿ ಎಲ್ಲರನ್ನು ಒಂದು ಆಧ್ಯಾತ್ಮಿಕ ವೇದಿಕೆಯಲ್ಲಿ ಒಟ್ಟುಗೂಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು. ತಾಯಿ ಗಂಗೆಯ ಸ್ಫೂರ್ತಿ, ಸಂಪ್ರದಾಯ, ಸಂಸ್ಕೃತಿ ಮತ್ತು ಜ್ಞಾನದ ಧಾರೆಯನ್ನು ಲಂಡನ್ನಲ್ಲಿ ನೆನಪಿಸಿಕೊಳ್ಳುತ್ತಾ, ಥೇಮ್ಸ್ ನದಿಯಲ್ಲಿ ತಾಯಿ ಗಂಗೆಯನ್ನು ಆವಾಹಿಸಿ ಆಕೆಯ ದಿವ್ಯತೆ ಹಾಗೂ ಸೌಂದರ್ಯವನ್ನು ಸ್ಮರಿಸುವುದು ಇದರ ಕಲ್ಪನೆಯಾಗಿತ್ತು ಎಂದರು.ಇದನ್ನೂ ಓದಿ: ಪ್ರಜ್ವಲ್ ಮುಗಿಸಿ ಮಗನನ್ನ ಪ್ರತಿಷ್ಠಾಪಿಸಲು ಹೆಚ್ಡಿಕೆ ಯತ್ನ: ಬಾಲಕೃಷ್ಣ ತಿರುಗೇಟು
ಗಂಗಾರತಿ ವೇಳೆ ನದಿಗೆ ಯಾವುದೇ ವಸ್ತುವನ್ನು ಹಾಕಿಲ್ಲ. ಜೊತೆಗೆ ದೀಪಗಳನ್ನು ನೀರಿನಲ್ಲಿ ತೇಲಿ ಬಿಡುವ ಬದಲು ಅದನ್ನು ದಡದಲ್ಲಿಯೇ ಇರಿಸಲಾಯಿತು. ಈ ಮೂಲಕ ಥೇಮ್ಸ್ ನದಿಯ ಶುಚಿತ್ವಕ್ಕೆ ಯಾವುದೇ ಹಾನಿ ಮಾಡದಂತೆ ಗಂಗಾರತಿ ನೆರವೇರಿಸಲಾಗಿದೆ.
ಏನಿದು ಚಿನ್ಮಯ ಮಿಷನ್?
1951ರಲ್ಲಿ ಸ್ಥಾಪನೆಯಾದ ಚಿನ್ಮಯ ಮಿಷನ್ (Chinmaya Mission) ಸ್ವಾಮಿ ಚಿನ್ಮಯಾನಂದರಿಂದ ಪ್ರೇರಿತವಾದ ಜಾಗತಿಕ ಸಂಸ್ಥೆಯಾಗಿದೆ. ಇದು ಇಂದು ವಿಶ್ವದಾದ್ಯಂತ 350ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದ್ದು, ಆಧ್ಯಾತ್ಮಿಕ, ಸಾಂಪ್ರದಾಯಿಕ, ಶೈಕ್ಷಣಿಕ ಮತ್ತು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಯುಕೆಯಲ್ಲಿ ಇದು ಮಕ್ಕಳು, ಯುವಜನರು, ಕುಟುಂಬಗಳು ಮತ್ತು ಹಿರಿಯ ನಾಗರಿಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತದೆ. 1997ರಿಂದ ಟ್ರಸ್ಟ್ ಒಂದರಿಂದ ನಡೆಸಲ್ಪಡುತ್ತಿರುವ `ಟೋಟಲಿ ಥೇಮ್ಸ್’ ಉತ್ಸವವು ಕಲೆ, ಪರಿಸರ, ಪರಂಪರೆ ಮತ್ತು ಶಿಕ್ಷಣ ಕಾರ್ಯಕ್ರಮಗಳ ಮೂಲಕ ಥೇಮ್ಸ್ ನದಿಯನ್ನು ಸಂಭ್ರಮಿಸುತ್ತದೆ. ಭಾನುವಾರ ನಡೆದ ಕಾರ್ಯಕ್ರಮವು ಈ ಎಲ್ಲಾ ಆಯಾಮಗಳನ್ನು ಒಟ್ಟುಗೂಡಿಸಿ ಥೇಮ್ಸ್ ನದಿಯಲ್ಲಿ ಮೊದಲ ಬಾರಿಗೆ ಗಂಗಾರತಿಯನ್ನು ಯಶಸ್ವಿಯಾಗಿ ಪೂರೈಸಿದೆ.ಇದನ್ನೂ ಓದಿ: ದೇವಸ್ಥಾನದ ಹುಂಡಿ ಕಳವು ಕೇಸ್ – ಇಬ್ಬರು ಆರೋಪಿಗಳ ಬಂಧನ

