ಮೈಸೂರು: ಈ ಬಾರಿಯ ದಸರಾ ಮೆರವಣಿಗೆಯಲ್ಲಿ (Dasara Procession) ಕನ್ನಡ ಚಲನಚಿತ್ರ ರಂಗದ ನಟ ನಟಿಯರು (Sandalwood Stars) ಭಾಗಿಯಾಗಲಿದ್ದಾರೆ. ಸಿಎಂ ಆಶಯದಂತೆ ಈ ಬಾರಿ ಮೆರವಣಿಗೆಯಲ್ಲಿ ನಟ ನಟಿಯರು ಸಾಗಲಿದ್ದಾರೆ.
ಜಂಬೂ ಸವಾರಿಯ ದಿನ ಅಂಬಾರಿ ಬಸ್‌ನಲ್ಲಿ ಅರಮನೆ ಆವರಣದಿಂದ ಕೆಆರ್ ಸರ್ಕಲ್‌ವರೆಗೆ ಮೆರವಣಿಗೆ ಮೂಲಕ ನಟ ನಟಿಯರು ಸಾಗಲಿದ್ದಾರೆ. ನಂತರ ಕಲಾವಿದರನ್ನು ಕೆಆರ್ ಸರ್ಕಲ್‌ನಿಂದ ಕರೆದುಕೊಂಡು ಬಂದು ಅರಮನೆ ಗ್ಯಾಲರಿಯಲ್ಲಿ ಬಿಡಲಾಗುವುದು ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ: `ದೃಢ ಕರ್ನಾಟಕದ ಸಂಕಲ್ಪ’: ಸರ್ಕಾರದ 100 ದಿನಗಳ ಯಶಸ್ವಿ ಆಡಳಿತ; ವಿಧಾನಸೌಧದಲ್ಲಿ `ಶತಕದ ಪಥ, ಪ್ರಗತಿಯ ರಥ’ ವಿಶೇಷ ಕಾರ್ಯಕ್ರಮ
ಆನೆಗಳ ತಾಲೀಮು ನೋಡಲು ದಿನವೂ ಜನಸಾಗರ:
ಮೈಸೂರು ದಸರಾ ಹಿನ್ನೆಲೆ ಗಜಪಡೆ ವೀಕ್ಷಣೆಗೆ ಜನಸಾಗರವೇ ಸೇರುತ್ತಿದೆ. ಗಜಪಡೆ ತಾಲೀಮು ನೋಡಲು ದಿನ ದಿನಕ್ಕೂ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಆನೆಗಳ ಬಳಿ ಸೆಲ್ಫಿ, ವೀಡಿಯೋ ಮಾಡುವ ಹುಚ್ಚಾಟವು ನಡೆದಿದೆ. ಆನೆಗಳನ್ನು ಕಣ್ಣು ತುಂಬಿಕೊಳ್ಳುವ ಜೊತೆಗೆ ಆನೆಗಳ ಜೊತೆ ಸೆಲ್ಫಿ, ವಿಡಿಯೋಗೆ ಜನ ಮುಗಿ ಬೀಳುತ್ತಿರುವುದು ಆನೆ ಮಾವುತರು ಹಾಗೂ ಕಾವಾಡಿಗಳಿಗೆ ದೊಡ್ಡ ತಲೆ ನೋವಾಗಿದೆ. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದಲ್ಲಿ ದಾಖಲೆ ಮಟ್ಟದ ಕಾಣಿಕೆ ಸಂಗ್ರಹ – 16 ದಿನದಲ್ಲಿ 3.30 ಕೋಟಿ ರೂ. ಕಾಣಿಕೆ ನೀಡಿದ ಭಕ್ತರು
ಜನರನ್ನ ನಿಯಂತ್ರಿಸಲು ಪೊಲೀಸರು ದಿನವೂ ಹರಸಾಹಸ ಪಡುತ್ತಿದ್ದಾರೆ. ಜನರನ್ನು ನಿಯಂತ್ರಣ ಮಾಡಲು ಬ್ಯಾರಿಕೇಡ್ ಕಟ್ಟಿದ್ದರು ಕೂಡ ಬ್ಯಾರಿಕೇಡ್ ದಾಟಿ ಆನೆಗಳ ಸಮೀಪ ಜನರು ಬರುತ್ತಿದ್ದಾರೆ. ಜಂಬೂ ಸವಾರಿ ಮೆರವಣಿಗೆಗೆ ಸೇರುವ ರೀತಿಯಲ್ಲೇ ದಿನವೂ ಜನರು ಜಮಾಯಿಸುತ್ತಿರುವುದು ಆನೆಗಳ ತಾಲೀಮಿಗೆ ತ್ರಾಸದಾಯಕವಾಗಿದೆ. ಇದನ್ನೂ ಓದಿ: ಬಯಲುಸೀಮೆಯ ಬಹುದಿನದ ಕನಸು ನನಸು – ಕೋಟೆ ನಾಡು ಪ್ರವೇಶಿಸಿದ ಭದ್ರಾ ನೀರು
ಇನ್ನು ಮೈಸೂರು ದಸರಾ ಗಜಪಡೆಯ ತಾಲೀಮು ಅನ್ನು ನಟಿ ಅಮೂಲ್ಯ ತಮ್ಮ ಮಕ್ಕಳ ಜೊತೆ ನಿಂತು ವೀಕ್ಷಿಸಿದ್ದಾರೆ. ಜನರ ಗುಂಪಿನ ನಡುವೆಯೂ ತಮ್ಮ ಮಕ್ಕಳನ್ನು ನಿಲ್ಲಿಸಿಕೊಂಡು ಆನೆಗಳ ವೀಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿ ಪಿಜಿ ಕಟ್ಟಡ ದುರಂತದ ಬೆನ್ನಲ್ಲೇ ಎಚ್ಚೆತ್ತ ಪಾಲಿಕೆ – 27 ಕಟ್ಟಡ ತಕ್ಷಣವೇ ಕೆಡವಲು ಆದೇಶ
