Connect with us

Cinema

ಕಿಚ್ಚ ಸುದೀಪ್ ಈ ಸಿನಿಮಾದಲ್ಲಿ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆ ನಿರ್ದೇಶಕ!

Published

on

ಬೆಂಗಳೂರು: ಕಿಚ್ಚ ಸುದೀಪ್ ಎಂದಿಗೂ ಅಭಿಮಾನಕ್ಕೆ ಸದಾ ಆಭಾರಿ. ತನ್ನ ಅಗತ್ಯ ಅನಿವಾರ್ಯ ಅಲ್ಲಿ ಇದೆ ಎಂದರೆ ಸಾಕು ಅದೆಷ್ಟೇ ಕಮಿಟ್‍ ಮೆಂಟ್ ಇದ್ದರೂ ಸ್ನೇಹ-ಪ್ರೀತಿಗೆ ಅಸಿಸ್ಟೆಂಟ್ ಆಗಿ ಬಿಡುತ್ತಾರೆ.

ಸದ್ಯ ಪ್ರೇಮ್ ಸಾರಥ್ಯದ ದಿ-ವಿಲನ್ ಚಿತ್ರದಲ್ಲಿ ಕಿಚ್ಚ ಬ್ಯುಸಿಯಾಗಿದ್ದಾರೆ. ದಿ-ವಿಲನ್ ಚಿತ್ರದ ನಂತರ ಪೈಲ್ವಾನ್, ಕೋಟಿಗೊಬ್ಬ-3, ರೆಬಲ್ ಸ್ಟಾರ್ ಜೊತೆಗೆ ಅಂಬಿ ನಿಂಗೆ ವಯಸ್ಸಾಯಿತೋದಲ್ಲಿ ಅಭನಯಿಸಲಿದ್ದಾರೆ. ಈ ಮೂರು ಸಿನಿಮಾಗಳು ಮಾಡುತ್ತಿದ್ದು, ಗ್ಯಾಪ್ ನಲ್ಲಿ ಹಾಲಿವುಡ್ `ರೈಸನ್’ ಸಿನಿಮಾ ಕೂಡ ಮಾಡುತ್ತಿದ್ದಾರೆ.

ಈ ಎಲ್ಲಾ ಕಮೀಟ್ ಮೆಂಟ್ ಗಾಗಿ ಸುದೀಪ್ ಮೆಗಾ ಸ್ಟಾರ್ ಚಿರಂಜೀವಿ ನಟನೆಯ `ಸೈರಾ’ ಚಿತ್ರದ ಆಫರ್ ಪಕ್ಕಕ್ಕೆ ಸರಿಸಿಬಿಟ್ಟರು. ಕಿಚ್ಚನ ಈ ನಿರ್ಧಾರದಿಂದ ಕಿಚ್ಚನ ಫ್ಯಾನ್ಸ್ ಕೊಂಚ ಬೇಸರ ತಂದಿತ್ತು.

ಸೈರಾ ಚಿತ್ರವನ್ನು ಸುದೀಪ್ ಬಿಟ್ಟರು ಆ ಸಿನಿಮಾದ ನಿರ್ದೇಶಕರು ಹಾಗೂ ನಿರ್ಮಾಪಕರು ಬಿಡುತ್ತಿಲ್ಲ. ಸರ್ ನೀವು ಈ ಪಾತ್ರವನ್ನು ಮಾಡಲೇ ಬೇಕು. ನೀವು ನಮ್ಮ ಸಿನಿಮಾದಲ್ಲಿದ್ದರೆ ಚೆಂದ. ನೀವು ಬಿಟ್ಟರೇ ಈ ಪಾತ್ರವನ್ನು ಬೇರೆ ಯಾರಿಂದಲೂ ಮಾಡಲು ಸಾದ್ಯವಿಲ್ಲ ಎಂದು `ಸೈರಾ’ ಚಿತ್ರದ ನಿರ್ದೇಶಕ ಸುರೇಂದ್ರ ರೆಡ್ಡಿ ಪಟ್ಟು ಹಿಡಿದಿದ್ದಾರೆ.

ಸೈರಾ ಚಿತ್ರದ ನಿರ್ಮಾಪಕರ ಜೊತೆ ಸ್ವತಃ ಸುರೇಂದ್ರ ರೆಡ್ಡಿಯವರೇ ಸುದೀಪ್ ಮನೆಗೆ ಬಂದು ಆಫರ್ ಮಾಡಿದ್ದಾರಂತೆ. ಪಾತ್ರ ಹಾಗೂ ತನ್ನ ಅಗತ್ಯತೆಯನ್ನು ಮನಗಂಡ ಸುದೀಪ್ ಒಪ್ಪಿಕೊಂಡಿದ್ದಾರೆ. 45 ರಿಂದ 50 ದಿನ ಕಾಲ್‍ ಶೀಟ್ ಕೂಡ ಕೊಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಬುರತ್ತಿದೆ.

ಕಿಚ್ಚ ಸುದೀಪ್ ಅಭಿನಯದ ಹವಾ ಬೇರೆ. ಅದು ಬೇರೆ ಇಂಡಸ್ಟ್ರಿಯ ಮಂದಿಗೂ ಗೊತ್ತು. ಈ ಕಾರಣಕ್ಕೆ ಕಿಚ್ಚನ ಕಾಲ್ ಶೀಟ್ ಗಾಗಿ ಎಲ್ಲೊ ಇದ್ದವರು ಬೆಂಗಳೂರಿನ ಪುಟ್ಟೇನಹಳ್ಳಿಯ ಶ್ರೀನಿಧಿ ನಿಲಯಕ್ಕೆ ಬಂದು ಕಿಚ್ಚನ ಜೊತೆ ಕುಳಿತು ಕಾಫಿ ಕುಡಿಯುತ್ತಾರೆ. ಒಟ್ಟಿನಲ್ಲಿ ಚಿರಂಜೀವಿ ಸಿನಿಮಾದಲ್ಲಿ ಸುದೀಪ್ ನಟಿಸುತ್ತಿರುವುದಂತು ನಿಜಕ್ಕೂ ಕಿಚ್ಚನ ಫ್ಯಾನ್ಸ್ ಗೆ ಸಂತೋಷವಾಗಿದೆ.

ಟಾಲಿವುಡ್ ಮತ್ತು ಬಾಲಿವುಡ್‍ನ ಮೆಗಾ ಸ್ಟಾರ್‍ ಗಳಾದ ಚಿರಂಜೀವಿ ಮತ್ತು ಅಮಿತಾಬ್ ಬಚ್ಚನ್ ಜೊತೆಯಾಗಿ ನಟಿಸುತ್ತಿರುವುದು ಚಿತ್ರದ ವಿಶೇಷವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ನರಸಿಂಹರೆಡ್ಡಿ ಅವರ ಐತಿಹಾಸಿಕ ಕಥೆಯನ್ನು ಹೊಂದಿರುವ ಸೈರಾ ದೊಡ್ಡ ತಾರಾಬಳಗವನ್ನೇ ಹೊಂದಿದೆ. ಸಿಲ್ವರ್ ಸ್ಕ್ರೀನ್ ಕ್ವೀನ್ ನಯನತಾರಾ, ತಮಿಳಿನ ಸ್ಟಾರ್ ವಿಜಯ್ ಸೇಥುಪತಿ, ಟಾಲಿವುಡ್‍ ನ ಡೇರಿಂಗ್ ಸ್ಟಾರ್ ಜಗಪತಿ ಬಾಬು ಒಳಗೊಂಡಂತೆ ಅನುಭವಿ ಕಲಾವಿದರನ್ನೇ ಸಿನಿಮಾ ಆಯ್ಕೆ ಮಾಡಿಕೊಂಡಿದೆ.

ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸಾರಥ್ಯದಲ್ಲಿ ಹಾಡುಗಳು ಮೂಡಿಬರಲಿವೆ. ಸೈರಾ ಗೆ ನಿರ್ದೇಶಕ ಸುರೇಂದ್ರ ರೆಡ್ಡಿ ಆ್ಯಕ್ಷನ್ ಕಟ್ ಹೇಳಲಿದ್ದು, ನಟ ರಾಮ್ ಚರಣ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ತೆಲಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ಬರಲಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಹುಟ್ಟು ಹಾಕಿದೆ.

https://www.youtube.com/watch?v=mdY7MK9jIS8

Click to comment

Leave a Reply

Your email address will not be published. Required fields are marked *