ಹೊಸ ಪ್ರತಿಭೆಗಳಿಗೆ ಅಂತಲೇ ತೆರೆದುಕೊಂಡಿರುವ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ (ಜೆನ್) ಸಂಸ್ಥೆಯು ‘ದ ಪ್ರಸೆಂಟ್’ (The Present Film) ಸಿನಿಮಾವನ್ನು ಮೊದಲ ಹೆಜ್ಜೆಯಾಗಿ ನಿರ್ಮಾಣ ಮಾಡುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಮುಹೂರ್ತ ನಡೆಯಿತು. ಮಾಜಿ ಸಂಸದ ಎಲ್.ಶಿವರಾಮೇಗೌಡ ಅಳಿಯ ರಾಜೀವ್ ರಾಥೋಡ್ (Rajiv Rathod) ನಾಯಕನಾಗಿ ನಟಿಸುತ್ತಿರುವುದರಿಂದ, ಸಮಾರಂಭಕ್ಕೆ ಆಗಮಿಸಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ ತುಮಕೂರು ಜಿಲ್ಲೆಯ ಯುವ ರೈತ ರಮೇಶ್ ಕ್ಯಾಮೆರಾ ಆನ್ ಮಾಡಿದರು. ಹಾಗೂ ಕ್ರೈಂ ಬ್ರಾಂಚ್‌ನ ಡೈನಮಿಕ್ ಪೋಲೀಸ್ ಅಧಿಕಾರಿ ಆರ್.ನವೀನ್‌ಕುಮಾರ್ ಅತಿಥಿಯಾಗಿ ಉಪಸ್ತಿತರಿದ್ದರು. ಇದನ್ನೂ ಓದಿ:ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಬೇಡಿಕೆ- ಟಿಕೆಟ್ ರೇಟ್ ಡಬಲ್
Advertisement
ಇದೇ ಸಂದರ್ಭದಲ್ಲಿ ಮಾತನಾಡಿದ ಜೆನ್ ಮಾಲೀಕ ಮತ್ತು ನಿರ್ದೇಶಕ ಶಿವಪೂರ್ಣ, ಇದೊಂದು ಮೈಥಲಾಜಿಕಲ್ ವಿಷಯಗಳನ್ನು ಒಳಗೊಂಡಿರುತ್ತದೆ. ಚಿತ್ರಕಥೆ ಸಿದ್ದಪಡಿಸಲು ಒಂದು ವರ್ಷ ಸಮಯ ತೆಗೆದುಕೊಂಡಿದೆ. ಒಂದು ಆತ್ಮದ 3 ಜನ್ಮದ ಕಥೆ ಒಳಗೊಂಡಿರುತ್ತದೆ. ಪ್ರಸೆಂಟ್, ಪಾಸ್ಟ್ ಹಾಗೂ ಫ್ಯೂಚರ್ ಎಂದು ಮೂರು ಭಾಗಗಳಲ್ಲಿ ಬರಲಿದೆ. ಭಾಗ-1 ಪ್ರಸೆಂಟ್‌ನಲ್ಲಿ ನಡೆಯಲಿರುವ ಅಂಶಗಳನ್ನು ಹೇಳಲಾಗುತ್ತಿದೆ. ನಂತರ ಪಾಸ್ಟ್, ಫ್ಯೂಚರ್ ಟೇಕ್ ಆಫ್ ಆಗುತ್ತದೆ. ಕಾಲ್ಪನಿಕ ಆದರೂ ನೋಡುಗರಿಗೆ ಹೊಸತನ ಕೊಡಬೇಕೆಂದು ಯೋಜನೆ ಹಾಕಲಾಗಿದೆ. ಯುವ ರೈತ ಬಂದಿದ್ದು ಖುಷಿ ತರಿಸಿದೆ. ಕಥೆಯಲ್ಲಿ ರೈತರ ಮಕ್ಕಳು ಪೋಷಕರನ್ನು ಯಾವ ರೀತಿ ಅಸಡ್ಡೆಯಿಂದ ಕಾಣುತ್ತಾರೆ ಎಂಬುದು ಬರುತ್ತದೆ. ಹೆಚ್ಚು ಭಾಗ ಬೆಂಗಳೂರು, ಉಳಿದಂತೆ ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಶೇಕಡ 10ರಷ್ಟು ಗ್ರಾಫಿಕ್ಸ್ ಇರುತ್ತದೆ. ಸಿದ್ದಿ ಸಂಗೀತ, ಟಾಲಿವುಡ್‌ದಲ್ಲಿ ಹೆಸರು ಮಾಡಿರುವ ಹಿರಿಯ ಛಾಯಾಗ್ರಾಹಕ ಪ್ರಸಾದ್ ಪುಲಿಚರ್ಲ ನಮ್ಮ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಕ್ರಿಸ್‌ಮೇಸ್ ವೇಳೆಗೆ ಜನರಿಗೆ ತೋರಿಸುವ ಇರಾದೆ ಇದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳಂ ಭಾಷೆ ಹೀಗೆ ಪ್ಯಾನ್ ಇಂಡಿಯ ಮಟ್ಟದಲ್ಲಿ ಬರಲಿದೆ.
Advertisement
Advertisement
ಜೆನ್ ಮೂಲಕ ಹಲವು ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಸುತ್ತಿದ್ದು, ವರ್ಷಕ್ಕೆ ಹತ್ತು ಚಿತ್ರಗಳನ್ನು ತಯಾರು ಮಾಡುತ್ತಿದ್ದು, ಇಂತಹವರಿಗೆ ಅವಕಾಶ ಮಾಡಿ ಕೊಡಲಾಗುವುದು. ಮುಂದಿನ ದಿನಗಳಲ್ಲಿ ಸ್ಯಾಟಲೈಟ್ ಚಾನಲ್, ಫ್ಯಾಷನ್ ಶೋ, ಡಿಜಿಟಲ್ ಸೇವೆ ಶುರು ಮಾಡಲಾಗುವುದು. ಹೊಸಬರು ಜೆನ್ ವೆಬ್‌ಸೈಟ್ ಮೂಲಕ ವೇದಿಕೆಯನ್ನು ಸೃಷ್ಟಿಸಿಕೊಳ್ಳಬಹುದು. ನಮ್ಮ ಸಂಸ್ಥೆಯಲ್ಲಿ ಗುರುತಿಸಿಕೊಂಡಿರುವ ಕೀರ್ತಿ ಅವರಿಗೆ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಮಾಧ್ಯಮದ ಸಹಕಾರಬೇಕೆಂದು ಕೋರಿದರು.
Advertisement
ಸುಪ್ರಿಂ ಸ್ಟಾರ್ ರಾಜೀವ್‌ರಾಥೋಡ್ ನಾಯಕ. ದಿಯಾ, ಮಾನಸ ಗೌಡ ನಾಯಕಿಯರು. ಬೇಬಿ ಆರಾಧ್ಯ. ಇವರೆಲ್ಲರೂ ಪಾತ್ರದ ಪರಿಚಯ ಮಾಡಿಕೊಂಡರು. ಖಳನಾಗಿ ರಾಬರ್ಟ್ ಉಳಿದಂತೆ ಅವಿನಾಶ್, ಶ್ರೀಧರ್, ದುಬೈ ರಫೀಕ್, ಮಂಜೇಶ್‌ಗೌಡ, ಸಹನ, ಭುವನ, ಮಾಧುರಿರೆಡ್ಡಿ, ಆಶಾ, ಭಾವನಾ, ಸಮೃದ್ದಿ, ಶೌರ್ಯ,ಅರುಣ್, ಮಮತ ಮುಂತಾದವರು ನಟಿಸುತ್ತಿದ್ದಾರೆ.
ನಂತರ ರಾತ್ರಿ ನಡೆದ ರ‍್ಯಾಂಪ್ ವಾಕ್‌ದಲ್ಲಿ ಸಂಸ್ಥೆಯ ಪ್ರೊಮೋ, ಟೈಟಲ್ ಅನಾವರಣಗೊಂಡಿತು. ತರುವಾಯ ಸಿನಿಮಾದ ಕಲಾವಿದೆಯರು,ಮಾಡೆಲ್‌ಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಇಂತಹುದೆ ಕಾರ್ಯಕ್ರಮಗಳನ್ನು ಮುಂದೆಯೂ ಹಮ್ಮಿಕೊಳ್ಳಲಾಗುವುದೆಂದು ಶಿವಪೂರ್ಣರವರು ಮಾಹಿತಿ ಹಂಚಿಕೊಂಡರು.