ನವದೆಹಲಿ: ಟೀ ಅಂಗಡಿ ಮಾಲೀಕನೊಬ್ಬ 7 ವರ್ಷದ ಬಾಲಕಿಗೆ ಆಹಾರ ಕೊಟ್ಟು ಆಕೆಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ.
ಆರೋಪಿಯು ಉತ್ತರ ದೆಹಲಿಯ ಆದರ್ಶನಗರದ ನಿವಾಸಿಯಾಗಿದ್ದು, ಅಪ್ರಾಪ್ತೆಯ ತಾಯಿಗೆ ಪರಿಚಿತ ವ್ಯಕ್ತಿಯಾಗಿದ್ದಾನೆ. ಶುಕ್ರವಾರ ಆರೋಪಿ ಕೃತ್ಯ ಎಸಗಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Advertisement
Advertisement
ಅಪ್ರಾಪ್ತ ಬಾಲಕಿ ಶುಕ್ರವಾರ ಶಾಲೆಯಿಂದ ಮನೆಗೆ ಹೋಗುತ್ತಿದ್ದಳು. ಈ ವೇಳೆ ಆಕೆಯನ್ನು ಕರೆದ ಟೀ ಅಂಗಡಿ ಮಾಲೀಕ ಆಹಾರ ಕೊಟ್ಟಿದ್ದಾನೆ. ಬಳಿಕ ಅಂಗಡಿಯ ಹಿಂಭಾಗದಲ್ಲಿದ್ದ ತಾತ್ಕಾಲಿಕ ಶೆಡ್ಗೆ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ ಈ ವಿಚಾರವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾನೆ.
Advertisement
ಘಟನೆಯಿಂದಾಗಿ ಬಾಲಕಿಯು ನಡೆಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಳು. ಆದರೂ ನಿಧಾನವಾಗಿ ನಡೆದುಕೊಂಡು ತಾಯಿ ನಿತ್ಯವೂ ಕೂಲಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ತಲುಪಿದ್ದಳು. ಮಗಳ ಸ್ಥಿತಿ ಕಂಡು ಗಾಬರಿಗೊಂಡ ತಾಯಿಯು ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ದಿದ್ದಳು. ತಪಾಸಣೆ ನಡೆಸಿದ ವೈದ್ಯರು, ಯಾರೋ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ರಿಪೋರ್ಟ್ ನೀಡಿದ್ದಾರೆ.
Advertisement
ಅಪ್ರಾಪ್ತೆ ಚೇತರಿಸಿಕೊಂಡ ಬಳಿಕ ವಿಚಾರಿಸಿದಾಗ ಘಟನೆಯನ್ನು ವಿವರಿಸಿದ್ದಾಳೆ. ಈ ಸಂಬಂಧ ಬಾಲಕಿಯ ತಾಯಿಯು ಸಮೀಪದ ಪೊಲೀಸ್ ಠಾಣೆಯಲ್ಲಿ ಆರೋಪಿ ಟೀ ಅಂಗಡಿ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ. ಆರೋಪಿಯನ್ನು ಆತನ ಅಂಗಡಿಯಲ್ಲಿ ಬಂಧಿಸಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ. ಟೀ ಅಂಗಡಿ ಮಾಲೀಕನ ವಿರುದ್ಧ ಪೊಕ್ಸೊ ಕಾಯ್ದೆ ಹಾಗೂ ವಿವಿಧ ಐಪಿಸಿ ಸೆಕ್ಷನ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.