ಚೆನ್ನೈ: ತಾಯಿಯ ಸಮಾಧಿಯನ್ನು ಅಗೆದು ಶವವನ್ನು ಮನೆಯಲ್ಲಿಟ್ಟಿದ್ದ ಮಗನನ್ನು ಕುನ್ನಂ ಪೊಲೀಸರು ಬಂಧಿಸಿದ್ದಾರೆ.
Advertisement
ವಿ ಬಾಲಮುರುಗನ್ (38) ಕುನ್ನಂ ಸಮೀಪದ ಪರವೈ ಗ್ರಾಮದ ನಿವಾಸಿಯಾಗಿದ್ದು, ತನ್ನ ತಾಯಿಯ ಸಮಾಧಿಯನ್ನು ರಹಸ್ಯವಾಗಿ ಅಗೆದು ಆಕೆಯ ಶವವನ್ನು ಮನೆಗೆ ತಂದು ರಕ್ಷಿಸಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಾನು ದೊಡ್ಡ ದೊಡ್ಡ ಪೋಲಿ ಆಟವನ್ನು ಆಡಿ ಬಂದವನು: ಹಂಸಲೇಖ
Advertisement
ಬಾಲಮುರುಗನ್ ತಾಯಿ ದೀರ್ಘಕಾಲದ ಅನಾರೋಗ್ಯದಿಂದ ಹತ್ತು ತಿಂಗಳ ಹಿಂದೆ ನಿಧನರಾಗಿದ್ದರೆ ತಂದೆ ಹತ್ತು ವರ್ಷಗಳ ಹಿಂದೆ ನಿಧನರಾಗಿದ್ದರು.
Advertisement
ಮುರುಗನ್ ಅವಿವಾಹಿತ ಮತ್ತು ನಿರುದ್ಯೋಗಿಯಾಗಿರುವುದರಿಂದ ಅವನ ಪೋಷಕರು ಅವನನ್ನು ನೋಡಿಕೊಳ್ಳುತ್ತಿದ್ದರು. ಪೋಷಕರ ನಿಧನದ ನಂತರ ಅವನು ಆಗಾಗ ಗ್ರಾಮದಲ್ಲಿರುವ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಸಮಾಧಿಯೊಂದಿಗೆ ಮಾತನಾಡುತ್ತಿದ್ದನು ಎಂದು ಗ್ರಾಮಸ್ಥರು ಹೇಳಿದ್ದಾರೆ.
Advertisement
ಮಾನಸಿಕವಾಗಿ ಅಸ್ವಸ್ಥನಾಗಿರುವ ಮುರುಗನ್ ಅವನು ಈ ಹಿಂದೆ ತನ್ನ ತಾಯಿಯ ಶವವನ್ನು ಹೊರತೆಗೆಯಲು ಪ್ರಯತ್ನಿಸಿದ್ದ. ಆದರೆ ಸ್ಥಳೀಯರು ಮಧ್ಯಪ್ರವೇಶಿಸಿ ಅವನನ್ನು ಸಮಾಧಿ ಸ್ಥಳದಲ್ಲಿ ತಡೆದಿದ್ದರು. ಇದನ್ನೂ ಓದಿ: ಡಿಸೆಂಬರ್ 31ರ ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲೇ ಬೆಂಬಲ ಇಲ್ಲ: ಅಶೋಕ್ ಚಂದರಗಿ
ಈಗ ಆತನ ಸಂಬಂಧಿಕರೊಬ್ಬರು ರಾತ್ರಿ ಊಟಕ್ಕೆ ಊಟ ಕೊಡಲು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅವನ ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ಸಂಬಂಧಿಕರಿಗೆ ಅನುಮಾನ ಬಂದಿದ್ದು ಕುನ್ನಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾವು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕುನ್ನಂ ಪೊಲೀಸರು ತಿಳಿಸಿದ್ದಾರೆ.