– ಫ್ಯಾನ್ಸ್‌ಗೆ ನಟ ನೀಡಿದ ಸಂದೇಶ ಏನು?
ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈ ಹೊತ್ತಲ್ಲೇ ನಟ ಯಶ್ (Yash) ಸಿನಿಮಾ ಕುರಿತು ಸಂದೇಶವೊಂದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಯಶ್ ಪೋಸ್ಟ್‌ನಲ್ಲೇನಿದೆ?
ಟಾಕ್ಸಿಕ್ ಸಿನಿಮಾ ತಂಡದಿಂದ ಒಂದು ಸಂದೇಶ..
Toxic: A Fairy Tale for Grown-Ups ನಮಗೆ ಕೇವಲ ಒಂದು ಸಿನಿಮಾ ಅಲ್ಲ. ನಾವು ವರ್ಷಗಳ ಕಾಲ ನಮ್ಮ ಪ್ರೀತಿಯನ್ನು ಈ ಸಿನಿಮಾದಲ್ಲಿ ತುಂಬಿದ್ದೇವೆ. ಪ್ರತಿಯೊಂದು ಫ್ರೇಮ್, ಪ್ರತಿಯೊಂದು ದೃಶ್ಯ, ಪ್ರತಿಯೊಂದು ನಿರ್ಧಾರದ ಮೂಲಕ ನಾವು ಕಟ್ಟಿದ ಒಂದು ಪ್ರಪಂಚ ಇದು. ಈ ಸಿನಿಮಾದ ನಿರ್ಮಾಣ ಮತ್ತು ಬಿಡುಗಡೆಗೆ ಕೈಜೋಡಿಸಿದ ಪ್ರತಿಯೊಬ್ಬ ತಂತ್ರಜ್ಞ, ಕಲಾವಿದ ಹಾಗೂ ತಂಡದ ಸದಸ್ಯರು, ನೀವು ಕೂಡ ಇದೇ ರೀತಿಯ ಅನುಭವವನ್ನು ಪಡೆಯಬೇಕು ಎಂಬ ಆಶಯ ಹೊಂದಿದ್ದಾರೆ. ಇದು ಎಲ್ಲರೂ ಒಟ್ಟಾಗಿ, ದೊಡ್ಡ ಪರದೆಯ ಮೇಲೆ ಅನುಭವಿಸಬೇಕಾದ ಸಿನಿಮಾ.
The World of Toxic is yours from tomorrow. . pic.twitter.com/NPie3oqqi2
— Yash (@TheNameIsYash) August 25, 2026
ನೀವು ಈಗಾಗಲೇ ತೋರಿಸಿರುವ ಪ್ರೀತಿ, ಉತ್ಸಾಹ ಹಾಗೂ ಮುಂಗಡ ಟಿಕೆಟ್‌ಗಳಿಗಾಗಿ ದೊರೆಯುತ್ತಿರುವ ಭರ್ಜರಿ ಪ್ರತಿಕ್ರಿಯೆ.. ಇವೆಲ್ಲವೂ ನಮಗೆ ಮಾತುಗಳಲ್ಲಿ ಹೇಳಲಾಗದಷ್ಟು ಅಮೂಲ್ಯ. ನಮ್ಮ ಈ ಪಯಣದಲ್ಲಿ ನಿರಂತರವಾಗಿ ಬೆಂಬಲ ನೀಡಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ನಾವು ನಿಮ್ಮಲ್ಲಿ ಒಂದೇ ಒಂದು ಪ್ರಾಮಾಣಿಕ ಮನವಿಯನ್ನು ಮಾಡಿಕೊಳ್ಳುತ್ತೇವೆ. ಈ ಅನುಭವವು ಹೇಗೆ ಇರಬೇಕೆಂದು ನಾವು ಉದ್ದೇಶಿಸಿದ್ದೇವೋ, ಹಾಗೆಯೇ ಅದನ್ನು ಅನುಭವಿಸಲು ಅವಕಾಶ ನೀಡಿ.
ದಯವಿಟ್ಟು ಚಿತ್ರಮಂದಿರದಲ್ಲಿ ಸಿನಿಮಾದ ದೃಶ್ಯಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಕಥೆಯ ಪ್ರಮುಖ ಅಂಶಗಳನ್ನು ಬಹಿರಂಗಪಡಿಸಬೇಡಿ. ಸ್ಪಾಯ್ಲರ್‌ಗಳನ್ನು ನೀಡುವ ಮೂಲಕ ಇತರರ ಅನುಭವವನ್ನು ಹಾಳು ಮಾಡಬೇಡಿ. ನೀವು Toxic ಜಗತ್ತಿಗೆ ಹೇಗೆ ಪ್ರವೇಶಿಸಿದ್ದೀರೋ, ಅದೇ ರೀತಿಯಲ್ಲಿ ಮುಂದಿನ ವ್ಯಕ್ತಿಯೂ ಆ ಜಗತ್ತನ್ನು ಅನುಭವಿಸುವ ಅವಕಾಶವನ್ನು ಅವರಿಗೆ ನೀಡಿ ಎಂದು ಯಶ್ ಮನವಿ ಮಾಡಿಕೊಂಡಿದ್ದಾರೆ.
