ನವದೆಹಲಿ: ಬ್ರ್ಯಾಂಡ್‌ವೊಂದರ ಜಾಹೀರಾತಿನಲ್ಲಿ ಧರಿಸಿದ್ದ ಬಟ್ಟೆಯಿಂದಾಗಿ ನೆಟ್ಟಿಗರ ಟೀಕೆಗೆ ಒಳಗಾಗಿದ್ದ ನಟಿ ಕೃತಿ ಸನೋನ್‌ಗೆ (Kriti Sanon) ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಸಾಥ್ ನೀಡಿದ್ದಾರೆ. ಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ಆಯ್ಕೆ. ಟ್ರೋಲ್ ಮಾಡುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ.
ನಿನ್ನೆ (ಆ.25) ನಟಿ, ಬಿಜೆಪಿ ಸಂಸದಾ ಕಂಗನಾ ರಣಾವತ್ (Kangana Ranaut) ಅವರು ಬಿಕಿನಿಯಲ್ಲಿಯೇ ರಾಖಿ ಕಟ್ಟುವ ಅವಶ್ಯಕತೆಯೆನಿತ್ತು? ಉದ್ದೇಶಪೂರ್ವಕವಾಗಿ ಅಸಹತ್ಯ ಮಾಡಿದಂತಿದೆ ಎಂದು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ನಟಿ ಕೃತಿ ಪ್ರತಿಕ್ರಿಯಿಸಿ, ಸಂಸ್ಕೃತಿ, ಸಂಪ್ರದಾಯ ಎನ್ನುವುದು ಧರಿಸುವ ಬಟ್ಟೆಯಲ್ಲಲ್ಲ. ಬದಲಿಗೆ ಆಕೆಯ ಹೃದಯದಲ್ಲಿದೆ ಎಂದು ಟಾಂಗ್ ನೀಡಿದ್ದರು. ಇದೀಗ ನಟಿ ಕೃತಿಗೆ ರಾಗಾ ಸಾಥ್ ನೀಡಿದ್ದು, ಇನ್‌ಸ್ಟಾದಲ್ಲಿ ಸ್ಟೋರಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ನಿಜವಾದ ಸಂಸ್ಕೃತಿ ಹಾಕುವ ಬಟ್ಟೆಯಲ್ಲಲ್ಲ, ಹೃದಯದಲ್ಲಿದೆ – ಕಂಗನಾ ಕಾಲೆಳೆದ ಕೃತಿ

ಸ್ಟೋರಿಯಲ್ಲಿ ಏನಿದೆ?
ಮಹಿಳೆಯೊಬ್ಬಳು ಏನು ಧರಿಸುತ್ತಾಳೆ, ಏನು ಮಾಡುತ್ತಾಳೆ ಮತ್ತು ಎಲ್ಲಿಗೆ ಹೋಗುತ್ತಾಳೆ ಎಂಬುದು ಆಕೆಯ ಆಯ್ಕೆ. ಆಕೆಯ ಸ್ವಾತಂತ್ರ್ಯವನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ.

ಬಿಕಿನಿ ಧರಿಸಿ ರಾಖಿ ಕಟ್ಟುವ ಅವಶ್ಯಕತೆ ಏನಿತ್ತು ಎಂದಿದ್ದ ಕಂಗನಾ:
ಕೃತಿ ಸನೋನ್ ಇತ್ತೀಚೆಗೆ ಆಭರಣ ಬ್ರ್ಯಾಂಡ್ ಒಂದರ ರಕ್ಷಾ ಬಂಧನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ ಹಬ್ಬವನ್ನು ಆಚರಿಸುವ ವೇಳೆ ನಟಿ ಆಫ್-ವೈಟ್ ಬ್ರಾಲೆಟ್ ಶೈಲಿಯ ಬ್ಲೌಸ್ ಜೊತೆಗೆ ಕೇಪ್ ಮತ್ತು ಡ್ರೇಪ್ಡ್ ಸ್ಕರ್ಟ್ ಧರಿಸಿದ್ದರು. ಅಲ್ಲದೇ ಬಟ್ಟೆಯ ಆಯ್ಕೆಯ ಹೊರತಾಗಿ, ಈ ಜಾಹೀರಾತಿನಲ್ಲಿ ನಾಯಿಗೆ ರಾಖಿ ಕಟ್ಟುತ್ತಿರುವುದಕ್ಕಾಗಿ ಆನ್‌ಲೈನ್‌ನಲ್ಲಿ ಟೀಕೆಗೆ ಗುರಿಯಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಕೂಡ ವಿವಾದದ ಕುರಿತು ಕೆಂಡಕಾರಿದ್ದರು. ಇದನ್ನೂ ಓದಿ: ಬಿಕಿನಿಯಲ್ಲೇ ಯಾಕೆ ರಾಖಿ ಕಟ್ಬೇಕು? – ಉದ್ದೇಶಪೂರ್ವಕವಾಗಿ ಅಸಹ್ಯಗೊಳಿಸಿದಂತಿದೆ: ಕೃತಿ ಜಾಹೀರಾತಿಗೆ ಕಂಗನಾ ಕೆಂಡ

ಕಂಗನಾ ಟೀಕೆಗೆ ಕೃತಿ ಕಿಡಿ:
ಹಬ್ಬದ ನಿಜವಾದ ಅರ್ಥ ನಾವು ಹಾಕುವ ಬಟ್ಟೆಗಳಲ್ಲಿಲ್ಲ, ಬದಲಾಗಿ ಸಂಪ್ರದಾಯಗಳ ಬಗ್ಗೆ ನಾವು ಹೊಂದಿರುವ ಭಾವನೆಗಳಲ್ಲಿದೆ.
ರಕ್ಷಾ ಬಂಧನವೆಂಬುದು ರಕ್ಷಣೆಗಾಗಿರುವ ಒಂದು ಬಂಧ ಎಂದರ್ಥ. ನಾನು ಮತ್ತು ನನ್ನ ಸಹೋದರಿ ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ. ಒಬ್ಬ ಸಹೋದರ ಮಾಡುವುದಕ್ಕಿಂತ ಹೆಚ್ಚಾಗಿ ನಾವು ಒಬ್ಬರನ್ನೊಬ್ಬರು ರಕ್ಷಿಸಬಲ್ಲೆವು. ನಾವಿಬ್ಬರು ಕೂಡ ಪರಸ್ಪರ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ನಮ್ಮ ಈ ಪ್ರಾರ್ಥನೆ ಮತ್ತು ಭರವಸೆ ಕೇವಲ ನಮಗಲ್ಲ, ನಮ್ಮ ನಾಯಿಗಳಿಗೂ ಅನ್ವಯಿಸುತ್ತದೆ. ಯಾಕೆಂದರೆ, ಅವುಗಳು ಕೂಡ ನಮ್ಮ ಕುಟುಂಬದ ಸದಸ್ಯರೇ.

ಮಹಿಳೆಯರು ಏನು ಧರಿಸಬೇಕು ಎಂದು ಹೇಳುವುದನ್ನು ನಾವು ಯಾವಾಗ ನಿಲ್ಲಿಸುತ್ತೇವೆ? ಸಾಂಪ್ರದಾಯಿಕ ಉಡುಪುಗಳ ಶೈಲಿ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದ್ದರೂ, ಇಂದಿಗೂ ಒಬ್ಬ ಮಹಿಳೆಯ ಸಂಸ್ಕೃತಿ ಮತ್ತು ಗೌರವವನ್ನು ಕೇವಲ ಅವಳ ಬಟ್ಟೆಯಿಂದಲೇ ಅಳಿಯುವ ಕೆಟ್ಟ ಮನಸ್ಥಿತಿ ನಮ್ಮ ಸಮಾಜದಲ್ಲಿದೆ. ಆದರೆ ನಿಜವಾದ ಸಂಸ್ಕೃತಿ ಮತ್ತು ಸಂಪ್ರದಾಯ ಇರುವುದು ಕೇವಲ ಬಟ್ಟೆಯಲಲ್ಲ, ಬದಲಿಗೆ ಅವಳ ಹೃದಯದಲ್ಲಿ ಮತ್ತು ಆಚಾರ-ವಿಚಾರಗಳಲ್ಲಿ. ಧರಿಸುವ ಉಡುಪಿನಿಂದ ಯಾರ ವ್ಯಕ್ತಿತ್ವವನ್ನೂ ಅಥವಾ ಸಂಸ್ಕಾರವನ್ನೂ ಅಳೆಯಲು ಸಾಧ್ಯವಿಲ್ಲ.ಇದನ್ನೂ ಓದಿ: ಕಾಸ್ಟ್ಲಿ ‘ಅನಾರ್ಕಲಿ’ಯಲ್ಲಿ ಮಿಂಚಿದ ರಶ್ಮಿಕಾ – ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
