ರಕ್ಷಾ ಬಂಧನದ ಜಾಹೀರಾತು ಒಂದರಲ್ಲಿ ಕೃತಿ ಸನೋನ್ ಧರಿಸಿದ್ದ ಬಟ್ಟೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಬಿಕಿನಿ ಧರಿಸಿ ಯಾಕೆ ರಾಖಿ ಕಟ್ಟಬೇಕು? ಉದ್ದೇಶಪೂರ್ವಕವಾಗಿಯೇ ಅಹಸ್ಯಗೊಳಿಸಿದಂತಿದೆ ಎಂದು ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ನಟಿ ಕೃತಿ ಸನೋನ್ (Kriti Sanon) ಟೀಕಿಸಿದ್ದಾರೆ.
ಕೃತಿ ಸನೋನ್ ಇತ್ತೀಚೆಗೆ ಆಭರಣ ಬ್ರ್ಯಾಂಡ್ ಒಂದರ ರಕ್ಷಾ ಬಂಧನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ ಹಬ್ಬವನ್ನು ಆಚರಿಸುವ ವೇಳೆ ನಟಿ ಆಫ್-ವೈಟ್ ಬ್ರಾಲೆಟ್ ಶೈಲಿಯ ಬ್ಲೌಸ್ ಜೊತೆಗೆ ಕೇಪ್ ಮತ್ತು ಡ್ರೇಪ್ಡ್ ಸ್ಕರ್ಟ್ ಧರಿಸಿದ್ದರು. ಅಲ್ಲದೇ ಬಟ್ಟೆಯ ಆಯ್ಕೆಯ ಹೊರತಾಗಿ, ಈ ಜಾಹೀರಾತಿನಲ್ಲಿ ನಾಯಿಗೆ ರಾಖಿ ಕಟ್ಟುತ್ತಿರುವುದಕ್ಕಾಗಿಯೂ ಆನ್‌ಲೈನ್‌ನಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಕಂಗನಾ ರಣಾವತ್ ಈ ವಿವಾದದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಶ್ ಭೇಟಿಯಾಗಿ ʻಟಾಕ್ಸಿಕ್ʼಗೆ ಶುಭ ಹಾರೈಸಿದ ಬಾಲಿವುಡ್ ದಿಗ್ಗಜ ಅನುಪಮ್ ಖೇರ್

ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೃತಿ ಸನೋನ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೇ, ತಮ್ಮ ಇಂಡಸ್ಟ್ರಿಯ ಸಹೋದ್ಯೋಗಿಯೊಬ್ಬರು ಭಾಗಿಯಾಗಿರುವ ಆಭರಣ ಬ್ರ್ಯಾಂಡ್ ಜಾಹೀರಾತಿನ ವಿವಾದದ ಕುರಿತೇ ತಾವು ಕಾಮೆಂಟ್ ಮಾಡುತ್ತಿರುವುದ್ದಾಗಿ ಸ್ಪಷ್ಟಪಡಿಸಿದ್ದಾರೆ.
View this post on Instagram
ಮಹಿಳೆಯರಾಗಲು ಇದು ಒಳ್ಳೆಯ ಕಾಲ, ಯಾಕಂದ್ರೆ ನಮ್ಮ ವಾರ್ಡ್‌ರೋಬ್‌ಗಳು ವಿವಿಧ ರೀತಿಯ ಬಟ್ಟೆಗಳಿಂದ ತುಂಬಿವೆ. ಇಂದಿನ ಜಾಗತಿಕ ಮಹಿಳೆಯರ ಬಳಿ ಕಾಕ್ಟೈಲ್ ಡ್ರೆಸ್‌ನಿಂದ ಲೆಹೆಂಗಾ, ಜೀನ್ಸ್‌ನಿಂದ ಸೀರೆ, ಬಿಕಿನಿಯಿಂದ ಸಲ್ವಾರ್‌ವರೆಗೆ ಹತ್ತು ಹಲವಾರು ಆಯ್ಕೆಗಳಿವೆ. ಇಷ್ಟೆಲ್ಲ ಅವಕಾಶಗಳಿರುವಾಗ, ಸಹೋದರನಿಗೆ ರಾಖಿ ಕಟ್ಟುವಾಗ ಬಿಕಿನಿ ಅಥವಾ ಒಳಉಡುಪು ಧರಿಸುವ ಅವಶ್ಯಕತೆ ಏನಿತ್ತು? ನಿಮ್ಮ ಬಟ್ಟೆಯ ಆಯ್ಕೆಗಳೆಲ್ಲ ಎಲ್ಲಿ ಹೋದವು? ಎಂದು ಕಂಗನಾ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಜಾಹೀರಾತು ಉದ್ದೇಶಪೂರ್ವಕವಾಗಿ ಅಸಹ್ಯ ಹುಟ್ಟಿಸುವಂತಿದೆ ಎಂದಿದ್ದಾರೆ.ಇದನ್ನೂ ಓದಿ:‘ಕೌಂತೇಯ’ದಲ್ಲಿ ರವಿಚಂದ್ರನ್ ಪುತ್ರನ ಹೊಸ ಅವತಾರ – ಕುತೂಹಲ ಮೂಡಿಸುವ ಟೀಸರ್
ಈವರೆಗೆ ಕೃತಿ ಸನೋನ್ ಅವರು ಈ ವಿವಾದದ ಕುರಿತು ಅಥವಾ ಕಂಗನಾ ರಣಾವತ್ ಅವರ ಕಾಮೆಂಟ್‌ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿವಾದದ ನಡುವೆ ತಮ್ಮ ಸಹೋದರಿ ನೂಪುರ್ ಸನೋನ್ ಹಾಗೂ ಇನ್ನಿತರರ ಜೊತೆ ತೆಗೆಸಿಕೊಂಡಿರುವ ಕೆಲವು ಮೋಜಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ಮಂಗಳೂರಿನ ಅಶ್ಮಿತ್‌ಗೆ ʻಸರಿಗಮಪʼ ಲಿಟಲ್ ಚಾಂಪ್ಸ್ ಕಿರೀಟ – 20 ಲಕ್ಷ ಬಹುಮಾನ!
