- ತೆರೆಮೇಲೆ ಅಬ್ಬರಿಸುವ ಯಶ್ ನಿಜ ಜೀವನದಲ್ಲಿ ವಿನಮ್ರ
- ಟಾಕ್ಸಿಕ್ ಹೊಸ ಛಾಪು ಮೂಡಿಸಲಿ
ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರು ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿಯಾಗಿ ʻಟಾಕ್ಸಿಕ್ʼ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಯಶ್ ಸಿನಿ ಪಯಣವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಯಶ್ ಭೇಟಿಯಾಗಿದ್ದಕ್ಕೆ ನನಗೆ ಖುಷಿಯಾಗಿದೆ. ಅವರು ‘ಕೆಜಿಎಫ್’ ಸರಣಿಯ ಮೂಲಕ ರಾಕಿ ಭಾಯ್ ಪಾತ್ರಕ್ಕೆ ಯಶ್ ಜೀವ ತುಂಬಿದ್ದಾರೆ. ಅವರ ಈ ಸಿನಿ ಪ್ರಯಾಣ ನನಗೆ ತುಂಬಾ ಇಷ್ಟವಾಗಿದೆ. ನಾವು ವಿಭಿನ್ನ ತಲೆಮಾರುಗಳಿಗೆ ಸೇರಿದವರಾಗಿರಬಹುದು, ಆದರೆ ನಮ್ಮ ಕನಸುಗಳು ಒಂದೇ ಭಾಷೆಯನ್ನು ಮಾತನಾಡುತ್ತವೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಸದಾ ಗಡ್ಡ ಬಿಡೋದೇಕೆ? ರಹಸ್ಯ ಬಿಚ್ಚಿಟ್ಟ ಯಶ್
MEETING YASH WAS A TOTAL JOY!❤️It was a great joy to meet the phenomenon called Yash! I have loved his journey in KGF: Chapter 1 and KGF: Chapter 2. He didn’t just play Rocky! He gave the character a soul, a swagger and an unforgettable place in Indian cinema.😎❤️
Behind that… pic.twitter.com/lkvWDKj1tk— Anupam Kher (@AnupamPKher) August 24, 2026
ತೆರೆಮೇಲೆ ಸಕತ್ ಪವರ್‌ಫುಲ್ ಆಗಿ ಅಬ್ಬರಿಸುವ ಯಶ್ ನಿಜ ಜೀವನದಲ್ಲಿ ಅತ್ಯಂತ ವಿನಮ್ರ ವ್ಯಕ್ತಿಯಾಗಿದ್ದಾರೆ. ಅಲ್ಲದೇ ಇಂತಹ ಪ್ರತಿಭಾವಂತ ನಟರ ಉತ್ಸಾಹ ಮತ್ತು ಶ್ರಮ ತಮಗೂ ಹೊಸ ಶಕ್ತಿ ನೀಡುತ್ತದೆ ಎಂದು ಎಂದು ಹಾಡಿಹೊಗಳಿದ್ದಾರೆ.
ಇಬ್ಬರೂ ನಟರು ತಮ್ಮ ಸಿನಿಮಾ, ಜೀವನ, ಹೆತ್ತವರು, ಕುಟುಂಬ ಹಾಗೂ ಭವಿಷ್ಯದ ಕನಸುಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಬಳಿಕ ಟಾಕ್ಸಿಕ್ ತನ್ನದೇ ಆದ ಛಾಪು ಮೂಡಿಸಲಿ, ಚಿತ್ರ ಯಶಸ್ಸನ್ನು ಪಡೆಯಲಿ ಎಂದು ಅವರು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ನಾನು ರಾತ್ರೋರಾತ್ರಿ ಸ್ಟಾರ್ ಆದವ್ನಲ್ಲ – ಕಷ್ಟದ ದಿನಗಳ ನೆನೆದ ಯಶ್
