ಚೆನ್ನೈ: ಕಳೆದ ವರ್ಷ ತಮಿಳುನಾಡಿನ ( Karur Stampede) ಕರೂರಿನಲ್ಲಿ ನಡೆದ ಟಿವಿಕೆ (TVK) ಸಮಾವೇಶದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ವಿತರಿಸಿ, ಅಂದು ನೀಡಿದ್ದ ಭರವಸೆಯನ್ನು ಸಿಎಂ ಆದ ಬಳಿಕ ವಿಜಯ್ ಈಡೇರಿಸಲು ಮುಂದಾಗಿದ್ದಾರೆ.
ಕರೂರಿಗೆ ನಾಳೆ ಭೇಟಿ ನೀಡಲಿರುವ ಸಿಎಂ ವಿಜಯ್, ಮೃತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಕುಟುಂಬದ ಸದಸ್ಯರ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಇಲಾಖೆಗಳಲ್ಲಿ ಉದ್ಯೋಗ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 27ರಂದು ಟಿವಿಕೆ ಸಮಾವೇಶದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಮೃತಪಟ್ಟಿದ್ದರು. ಈ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಬಳಿಕ ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ವಿಜಯ್ ಭರವಸೆ ನೀಡಿದ್ದರು.ಇದನ್ನೂ ಓದಿ: ನಿರ್ದೇಶಕನ ಜೊತೆ ಹಸೆಮಣೆ ಏರಿದ ಖ್ಯಾತ ನಟಿ ಸ್ವಾತಿ ರೆಡ್ಡಿ
ದುರಂತದಲ್ಲಿ 21 ತಿಂಗಳ ಮಗು ವಿಷ್ಣುವನ್ನು ಕಳೆದುಕೊಂಡ ವಿಮಲ್ ಮಾತನಾಡಿ, ಸಿಎಂ ವಿಜಯ್ ಕೊಟ್ಟ ಮಾತಿನಂತೆ ಈಗ ಬರುತ್ತಿದ್ದಾರೆ. ಸರ್ಕಾರದ ಉದ್ಯೋಗ ನೀಡುವುದು ಒಳ್ಳೆಯ ನಿರ್ಧಾರ ಎಂದು ಹೇಳಿದ್ದಾರೆ. ಇದೇ ವೇಳೆ, ದುರಂತದ ಕುರಿತು ಸಿಬಿಐ ತನಿಖೆ ಇನ್ನೂ ಮುಂದುವರಿದಿದೆ. ಈ ನಡುವೆ ಉದ್ಯೋಗ ನೀಡುವ ನಿರ್ಧಾರ ರಾಜಕೀಯ ಚರ್ಚೆಗೆ ಕಾರಣವಾದರೂ, ಸಂತ್ರಸ್ತ ಕುಟುಂಬಗಳು ಇದನ್ನು ಸ್ವಾಗತಿಸಿವೆ.ಇದನ್ನೂ ಓದಿ: ನಟ ಶ್ರೀನಗರ ಕಿಟ್ಟಿ ಬರ್ತಡೆಗೆ ವೇಷಗಳು ಸಾಂಗ್ ಗಿಫ್ಟ್
