ಮುಂಬೈ: ಬಾಲಿವುಡ್ನ ಸ್ಟಾರ್ ಕಪಲ್ ಆಗಿರುವ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಪುತ್ರನಾಗಿರುವ ತೈಮೂರ್ಗೆ ಇಂದು 5ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಕರೀನಾ ಕಪೂರ್ ಮಗನ ಮುದ್ದಾದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Advertisement
ತೈಮೂರ್ ಮೊದಲು ಅಂಬೆಗಾಲಿಡುವ ವೀಡಿಯೋವನ್ನು ಕರೀನಾ ಕಪೂರ್ ಹಂಚಿಕೊಂಡಿದ್ದಾರೆ. ಇದು ನಿನ್ನ ಮೊದಲ ಹೆಜ್ಜೆಗಳು, ನಾನು ತುಂಬಾ ಹೆಮ್ಮೆಯಿಂದ ಅದನ್ನು ರೆಕಾರ್ಡ್ ಮಾಡಿದ್ದೇನೆ. ನನ್ನ ಮಗನ ಕುರಿತಾಗಿ ನನಗೆ ಒಂದು ವಿಷಯ ಖಚಿತವಾಗಿ ತಿಳಿದಿದೆ. ಇವನು ಯಾವಾಗಲೂ ದೊಡ್ಡ ಹೆಜ್ಜೆ ಇಡುತ್ತಾನೆ ಮತ್ತು ತಲೆ ಎತ್ತಿಕೊಂಡು ನಡೆಯುತ್ತಾನೆ. ಕಾರಣ ಇವನು ನನ್ನ ಹುಲಿ ಎಂದು ಕರೀನಾ ಕಪೂರ್ ಬರೆದುಕೊಂಡಿದ್ದಾರೆ. ಈ ವೀಡಿಯೋ ನೋಡಿದ ಅನೇಕ ಸೆಲೆಬ್ರಿಟಿಗಳು ಕೂಡ ಟೈಗರ್ ತೈಮೂರ್ ಅಲಿ ಖಾನ್ಗೆ ವಿಶ್ ಮಾಡುತ್ತಿದ್ದಾರೆ. ಇನ್ನೂ ಅವರ ಅಭಿಮಾನಿಗಳು ಕೂಡ ಈ ವೀಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ತೈಮೂರ್ ಅಲಿ ಖಾನ್ಗೆ ಶುಭಾಶಯಗಳ ಮಹಪೂರವೇಹರಿದು ಬರುತ್ತಿದೆ.
Advertisement
View this post on Instagram
Advertisement
ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿರುವ ಹಿನ್ನೆಲೆಯಲ್ಲಿ ಸ್ವಯಂ ಪ್ರತ್ಯೇಕವಾಸದಲ್ಲಿದ್ದ ಕರೀನಾ ಕಪೂರ್ ಖಾನ್, ಇದೀಗ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರ ಬೆನ್ನಿಗೇ ಅವರು ತನ್ನ ಮುದ್ದು ಮಕ್ಕಳಾದ ತೈಮೂರ್ ಮತ್ತು ಜೇಯನ್ನು ಮಿಸ್ ಮಾಡಿಕೊಂಡ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದರು. ಇದನ್ನೂ ಓದಿ: ಪತ್ನಿ ನೆರವಿನಿಂದ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ- ಸಂತ್ರಸ್ತೆ ವಿದೇಶಕ್ಕೆ ಹೋದ್ರೂ ಬಿಟ್ಟಿಲ್ಲ ಆತನ ಕಾಮದಾಟ
Advertisement
ಕೊರೊನಾ ನಾನು ನಿನ್ನನ್ನು ದ್ವೇಷಿಸುತ್ತೇನೆ. ನಾನು ನನ್ನ ಮಕ್ಕಳನ್ನು ಮಿಸ್ ಮಾಡಿಕೊಳ್ಳಬೇಕಾಯಿತು ಎಂದು ಹೃದಯ ಒಡೆದು ಹೋಗಿರುವ ಎಮೋಜಿಯೊಂದಿಗೆ ಸಿಟ್ಟು ವ್ಯಕ್ತಪಡಿಸಿದ್ದರು. ಇದೀಗ ಕೊರೊನಾ ದಿಂದ ಚೇತರಿಸಿಕೊಂಡು ಮಗನ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ