ಪರ್ತ್: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ (South Africa) ತಂಡ ಭಾರತ (India) ವಿರುದ್ಧ 5 ವಿಕೆಟ್‌ಗಳ ಅಂತರದ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
Advertisement
ಭಾರತ ನೀಡಿದ 134 ರನ್‍ಗಳ ಗುರಿ ಬೆನ್ನಟ್ಟಿದ ಆಫ್ರಿಕಾಗೆ ಮಾರ್ಕಮ್ 52 ರನ್ (41 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ಡೇವಿಡ್ ಮಿಲ್ಲರ್ ಅಜೇಯ 56 ರನ್ (46 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿದ ನೆರವಿನಿಂದ 19.4 ಓವರ್‌ಗಳಲ್ಲಿ 137 ರನ್ ಸಿಡಿಸಿ ಇನ್ನೆರಡು ಎಸೆತ ಬಾಕಿ ಇರುವಂತೆ ಆಫ್ರಿಕಾ 5 ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡರೆ, ಇತ್ತ ಪಾಕಿಸ್ತಾನ ಸೆಮಿಫೈನಲ್ ಹಾದಿ ಬಹುತೇಕ ಮುಚ್ಚಿದೆ.
Advertisement
Advertisement
ಅರ್ಷದೀಪ್ ಬ್ರೇಕ್‍ಥ್ರೂ
ಭಾರತ ನೀಡಿದ ಸಾಧರಣ ರನ್ ಬೆನ್ನಟ್ಟಿದ ಆಫ್ರಿಕಾಗೆ ಭಾರತದ ವೇಗಿ ಅರ್ಷದೀಪ್ ಸಿಂಗ್ ಮುಳುವಾದರು. ಆರಂಭದಲ್ಲೇ ಡಿಕಾಕ್ 1 ರನ್ ಮತ್ತು ರಲೀ ರೋಸೌವ್ ಶೂನ್ಯಕ್ಕೆ ನಿಗರ್ಮಸಿದರು. ಇವರಿಬ್ಬರ ವಿಕೆಟ್ ಕಿತ್ತು ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ನಾಯಕ ತೆಂಬ ಬವುಮ ವಿಕೆಟ್ ಪಡೆಯುವುದರಲ್ಲಿ ಶಮಿ ಸಫಲರಾದರು. ಆ ಬಳಿಕ ಜೊತೆಯಾದ ಐಡೆನ್ ಮಾರ್ಕ್ರಾಮ್ ಮತ್ತು ಡೇವಿಡ್ ಮಿಲ್ಲರ್ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಲು ಮುಂದಾದರು. ಈ ಜೋಡಿ 4ನೇ ವಿಕೆಟ್‍ಗೆ 76 ರನ್ (60 ಎಸೆತ) ಚಚ್ಚಿ ಬೇರ್ಪಟ್ಟಿತು. ಮಾರ್ಕ್ರಾಮ್ 52 ರನ್ (41 ಎಸೆತ, 6 ಬೌಂಡರಿ, 1 ಸಿಕ್ಸ್) ಬಾರಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಆ ಬಳಿಕ ಒಂದಾದ ಮಿಲ್ಲರ್ ಮತ್ತು ವೇಯ್ನ್ ಪಾರ್ನೆಲ್ ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಟಿ20 ವಿಶ್ವಕಪ್‍ನಲ್ಲೂ ಕಿಂಗ್ ಕೊಹ್ಲಿ ದಾಖಲೆಯ ಸರದಾರ
Advertisement
ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟ:
ಈ ಮೊದಲು ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಲುಂಗಿ ಎನ್‍ಗಿಡಿ ದಾಳಿಗೆ ನಲುಗಿದ ಭಾರತ ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು. ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಒಂದೊಂದು ಸಿಕ್ಸರ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದರೂ ಲುಂಗಿ ಎನ್‍ಗಿಡಿ ಅಬ್ಬರಿಸಲು ಅವಕಾಶ ನೀಡಲಿಲ್ಲ. ಒಂದೇ ಓವರ್‌ನಲ್ಲಿ ಇವರಿಬ್ಬರನ್ನು ಪೆವಿಲಿಯನ್‍ಗಟ್ಟಿದರು. ರೋಹಿತ್ 15 ರನ್ (14 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ರಾಹುಲ್ 9 ರನ್ (14 ಎಸೆತ, 1 ಸಿಕ್ಸ್) ಬಾರಿಸಿ ಔಟ್ ಆಗಿ ಹೊರನಡೆದರು. ಇದನ್ನೂ ಓದಿ: ನಾನ್ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯಾ ಹುಡುಕಿದ ಗ್ಲೆನ್ ಫಿಲಿಪ್ಸ್
ಬಳಿಕ ಬಂದ ಕೊಹ್ಲಿ 12 ರನ್ (11 ಎಸೆತ, 2 ಬೌಂಡರಿ) ಸಿಡಿಸಿ ಕ್ಯಾಚ್ ನೀಡಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ನಂತರ ಬಂದ ದೀಪಕ್ ಹೂಡಾ ಶೂನ್ಯ ಸುತ್ತಿ ಸಿಕ್ಕ ಅವಕಾಶವನ್ನು ಕೈಚೆಲ್ಲಿದರು. ಈ ವೇಳೆ ಏಕಾಂಗಿಯಾಗಿ ತಂಡವನ್ನು ಆಧರಿಸಿದ ಸೂರ್ಯಕುಮಾರ್ ಯಾದವ್ ನಿಧಾನವಾಗಿ ರನ್ ಹೆಚ್ಚಿಸಲು ಮುಂದಾದರು.
ಒಂದು ಕಡೆ ಪಾಂಡ್ಯ 2, ದಿನೇಶ್ ಕಾರ್ತಿಕ್ 6 ರನ್ ಸಿಡಿಸಿ ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ನೀಡಿ ಹೊರ ನಡೆಯುತ್ತಿದ್ದರೆ, ಸೂರ್ಯ ಮಾತ್ರ ತಮ್ಮ ಎಂದಿನ ಶೈಲಿಯಲ್ಲೇ ಬ್ಯಾಟ್ ಬೀಸತೊಡಗಿದರು. ಈ ವೇಳೆ ಕಾರ್ತಿಕ್ ಜೊತೆ 6ನೇ ವಿಕೆಟ್‍ಗೆ 52 ರನ್ (40 ಎಸೆತ) ಮತ್ತು ಅಶ್ವಿನ್ ಜೊತೆ 7ನೇ ವಿಕೆಟ್‍ಗೆ 23 ರನ್ (18 ಎಸೆತ) ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.
ಆಕರ್ಷಕ ಹೊಡೆತಗಳೊಂದಿಗೆ ಮಿಂಚಿದ ಸೂರ್ಯ ಕಡೆಗೆ 68 ರನ್ (40 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು. ಇತ್ತ ಆಫ್ರಿಕಾ ವೇಗಿಗಳೇ 9 ವಿಕೆಟ್‍ಗಳನ್ನು ಬೇಟೆಯಾಡಿದರು. ಲುಂಗಿ ಎನ್‍ಗಿಡಿ 4 ವಿಕೆಟ್ ಕಿತ್ತರೆ, ಪಾರ್ನೆಲ್ 3 ಮತ್ತು ನಾರ್ಟ್ಜೆ 1 ವಿಕೆಟ್ ಕಬಳಿಸಿ ಅಲ್ಪಮೊತ್ತಕ್ಕೆ ಭಾರತವನ್ನು ಕಟ್ಟಿ ಹಾಕಿದರು.