-ಪಾರ್ಟಿ ಮುಗಿಸಿ ಸ್ನೇಹಿತರು ಊಟ ತರಲು ತೆರಳಿದ್ದ ವೇಳೆ ಕೃತ್ಯ
ಬೆಂಗಳೂರು: ನಗರದ ಮಡಿವಾಳ (Madiwala) ಪ್ರದೇಶದಲ್ಲಿ ಕಾಲೇಜು ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ.
ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿರೋ ಯುವತಿ, ಓದಿನ ಜೊತೆಗೆ ಮೋಮೋಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮೋಮೋಸ್ ಅಂಗಡಿ ಮಾಲೀಕರಾದ ಅತುಲ್, ಗೋಷ್ ಎಂಬವರು ಮೇ 11ರಂದು ಯುವತಿಯನ್ನು ಪಾರ್ಟಿಗೆ ಆಹ್ವಾನ ಮಾಡಿದ್ದರು. ಈ ವೇಳೆ ಮೋಮೋಸ್ ಅಂಗಡಿಯನ್ನು ಮಾರಾಟ ಮಾಡಲು ಮುಂದಾಗಿರೋ ವಿಚಾರ ತಿಳಿಸಿ ಹೈನಾಸ್ ಎಂಬ ಮಧ್ಯವರ್ತಿಯನ್ನು ಕರೆದಿದ್ದಾರೆ. ಅಂಗಡಿ ಮಾರಾಟದ ವಿಚಾರ ಚರ್ಚೆ ಮಾಡಿ ನಾಲ್ಕು ಜನ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ಲಾರಿ, ಕಾರು ನಡುವೆ ಭೀಕರ ಅಪಘಾತ – ಓರ್ವ ಸಾವು, ಮೂವರಿಗೆ ಗಂಭೀರ ಗಾಯ
ಪಾರ್ಟಿ ಬಳಿಕ ಗೋಷ್ ಮತ್ತು ಅತುಲ್ ಊಟ ತರಲು ಹೋಗಿದ್ದ ವೇಳೆ, ಹೈನಾಸ್ ಎಂಬ ಮತ್ತೊಬ್ಬ ವ್ಯಕ್ತಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಪೊಲೀಸರು, ಆರೋಪಿಯನ್ನು ಬಂಧಿಸದೇ ಯುವತಿ ಮೇಲೆಯೇ ಅನುಮಾನಪಡುತ್ತಿದ್ದಾರೆ ಎಂದು ಸಂತ್ರಸ್ತ ಯುವತಿ ಪೊಲೀಸರ ಮೇಲೆ ಆರೋಪ ಮಾಡಿದ್ದಾಳೆ. ಇದನ್ನೂ ಓದಿ: ರಾಜ್ಯಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆ ಮುನ್ಸೂಚನೆ – ಬೆಂಗಳೂರಲ್ಲಿ ಇಂದು ಆರೆಂಜ್ ಅಲರ್ಟ್
ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ವಿಜಯಪುರ| ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಜೀವಂತ ಸಮಾಧಿ
