ಪರ್ತ್: ಟೀಂ ಇಂಡಿಯಾದ ಬ್ಯಾಟ್ಸ್‌ಮ್ಯಾನ್ ವಿರಾಟ್ ಕೊಹ್ಲಿ (Virat Kohli) ಟಿ20 ವಿಶ್ವಕಪ್‍ನಲ್ಲಿ (T20 World Cup) ಭಾರತದ (India) ಪರವಾಗಿ ನೂತನ ದಾಖಲೆಯೊಂದನ್ನು ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಪಂದ್ಯದಲ್ಲಿ ಬರೆದಿದ್ದಾರೆ.
Advertisement
ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ 1,000 ರನ್ ಸಿಡಿಸಿದ ಮೊದಲ ಬ್ಯಾಟ್ಸ್‌ಮ್ಯಾನ್ ಎಂಬ ದಾಖಲೆಯ ಒಡೆಯನಾಗಿದ್ದಾರೆ. ಕೊಹ್ಲಿ ಈವರೆಗೆ ಆಡಿರುವ 24 ಟಿ20 ವಿಶ್ವಕಪ್ ಪಂದ್ಯದಲ್ಲಿ ಒಟ್ಟು 1,001 ರನ್ ಕಲೆಹಾಕಿದ್ದಾರೆ. ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೇವಲ 12 ರನ್ ಗಳಿಸಿ ಔಟ್ ಆದರೂ ಕೊಹ್ಲಿ 11 ರನ್ ಸಿಡಿಸಿದ ವೇಳೆ ಟಿ20 ವಿಶ್ವಕಪ್‍ನಲ್ಲಿ ಸಾವಿರ ರನ್ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮ್ಯಾನ್, ವಿಶ್ವದ ಎರಡನೇ ಬ್ಯಾಟ್ಸ್‌ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ನಾನ್ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯಾ ಹುಡುಕಿದ ಗ್ಲೆನ್ ಫಿಲಿಪ್ಸ್
Advertisement
Advertisement
ಟಿ20 ವಿಶ್ವಕಪ್‍ನಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಶ್ರೀಲಂಕಾದ ಮಹೇಲ ಜಯವರ್ಧನೆ 1,016 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಕೊಹ್ಲಿ ಇದ್ದು, ಇನ್ನೂ 15 ರನ್ ಬಾರಿಸಿದರೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್‌ಮ್ಯಾನ್ ಎಂಬ ದಾಖಲೆಯ ಹೊಸ್ತಿಲಲ್ಲಿ ಕೊಹ್ಲಿ ಇದ್ದಾರೆ. ಇದನ್ನೂ ಓದಿ: ಸತತ ಸೋಲಿನ ರುಚಿ – ಭಾರತದ ಗೆಲುವಿಗಾಗಿ ಪಾಕ್ ತಂಡ ಪ್ರಾರ್ಥನೆ
Advertisement
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಲುಂಗಿ ಎನ್‍ಗಿಡಿ ದಾಳಿಗೆ ನಲುಗಿದ ಭಾರತ ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು. ಈ ವೇಳೆ ಏಕಾಂಗಿಯಾಗಿ ತಂಡವನ್ನು ಆಧರಿಸಿದ ಸೂರ್ಯಕುಮಾರ್ ಯಾದವ್ (Suryakumar Yadav) 68 ರನ್ (40 ಎಸೆತ, 6 ಬೌಂಡರಿ, 3 ಸಿಕ್ಸ್) ಚಚ್ಚಿ ಭಾರತದ ರನ್ ಗತಿ ಹೆಚ್ಚಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು. ಆಫ್ರಿಕಾ ಗೆಲುವಿಗೆ 134 ರನ್ ಟಾರ್ಗೆಟ್ ನೀಡಿತು.