CricketLatestLeading NewsMain PostSports

ಬಾಂಗ್ಲಾ ಸೋತ ಬಳಿಕ ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ

ಆಡಿಲೇಡ್: ಭಾರತ (India) ಹಾಗೂ ಬಾಂಗ್ಲಾದೇಶ (Bangladesh) ವಿರುದ್ಧದ ಪಂದ್ಯದಲ್ಲಿ ಭಾರತ 5 ರನ್‍ಗಳ ರೋಚಕ ಜಯ ಸಾಧಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ವಿರುದ್ಧ ನಕಲಿ ಫೀಲ್ಡಿಂಗ್ (Fake Fielding) ಆರೋಪವನ್ನು ಬಾಂಗ್ಲಾ ಬ್ಯಾಟ್ಸ್‌ಮ್ಯಾನ್‌ ನೂರಲ್ ಹಸನ್ (Nurul Hasan) ಹೊರಿಸಿದ್ದಾರೆ.

ಭಾರತ ವಿರುದ್ಧ ಕಡೆಯವರೆಗೆ ಹೋರಾಡಿ ಸೋತ ಬಾಂಗ್ಲಾ ತಂಡ ನಿರಾಸೆ ಅನುಭವಿಸಿದೆ. ಈ ಬೆನ್ನಲ್ಲೇ ನೂರಲ್ ಹಸನ್ ಕೊಹ್ಲಿ ಮೇಲೆ ಮುಗಿಬಿದ್ದಿದ್ದಾರೆ. ಭಾರತ ನೀಡಿದ 185 ರನ್‍ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಲು ಮುಂದಾದ ಬಾಂಗ್ಲಾ ಉತ್ತಮ ಆರಂಭ ಪಡೆಯಿತು. ನಜ್ಮುಲ್ ಹೊಸೈನ್ ಶಾಂತೋ ಮತ್ತು ಲಿಟ್ಟನ್ ದಾಸ್ ಭರ್ಜರಿ ಆರಂಭ ನೀಡಿದರು. ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೊದಲ ವಿಕೆಟ್‍ಗೆ 64 ರನ್ (44 ಎಸೆತ) ಚಚ್ಚಿ ಬಿಸಾಕಿತು. 6ನೇ ಓವರ್ ಮುಕ್ತಾಯದ ವೇಳೆಗೆ ಮಳೆ ಆರಂಭವಾಯಿತು. ಬಳಿಕ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾಗೆ 9 ಓವರ್‌ಗಳಲ್ಲಿ 85 ರನ್ ಗುರಿ ನೀಡಲಾಯಿತು. ಇದನ್ನೂ ಓದಿ: ಭಾರತಕ್ಕೆ 5 ರನ್‍ಗಳ ರೋಚಕ ಗೆಲುವು – ಹರ್ಷ ತಂದ ಅರ್ಷದೀಪ್

7ನೇ ಓವರ್ ಎಸೆಯಲು ಬಂದ ಅಕ್ಷರ್ ಪಟೇಲ್ ಅವರ ಎಸೆತವನ್ನು ಲಿಟ್ಟನ್ ದಾಸ್ ಡೀಪ್ ಆಫ್ ಕಡೆಗೆ ಆಡಿದರು. ಈ ವೇಳೆ ತನ್ನತ್ತ ಬಂದ ಬಾಲನ್ನು ಹಿಡಿದು ವಿಕೆಟ್ ಕೀಪರ್ ಕಡೆಗೆ ಅರ್ಷದೀಪ್ ಸಿಂಗ್ ಎಸೆದರು. ಆದರೆ ಚೆಂಡು ಕೀಪರ್ ಕೈಗೆ ಸೇರುವ ಮೊದಲು ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪಾಯಿಂಟ್ ಕಡೆಯಿಂದ ಹಾದು ಹೋಯಿತು. ಆಗ ಕೊಹ್ಲಿ ಚೆಂಡನ್ನು ಹಿಡಿದು ಎಸೆದವರಂತೆ ಆಕ್ಷನ್ ಮಾಡಿದರು. ಈ ಬಗ್ಗೆ ಚಕಾರ ಎತ್ತಿರುವ ನೂರುಲ್ ಹಸನ್, ಕೊಹ್ಲಿಯ ಈ ರೀತಿ ಫೇಕ್ ಫೀಲ್ಡಿಂಗ್ ಮಾಡಿದ್ದು, ನಿಯಮ ಬಾಹಿರ ಇದನ್ನು ಅಂಪೈರ್‌ಗಳು ಸರಿಯಾಗಿ ಗಮನಿಸಿದ್ದರೆ ಇದಕ್ಕೆ ದಂಡವಾಗಿ ಎದುರಾಳಿ ತಂಡಕ್ಕೆ 5 ರನ್‍ಗಳನ್ನು ನೀಡುತ್ತಿದ್ದರು ಎಂದಿದ್ದಾರೆ.

ಆದರೆ ಇದೀಗ ಈ ಘಟನೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಈ ಘಟನೆ ಪಂದ್ಯದ ನಡುವೆ ಅಂಪೈರ್‌ಗಳ ಗಮನಕ್ಕೆ ಬರದಿರುವ ಕಾರಣ ಟೀಂ ಇಂಡಿಯಾ ದಂಡದಿಂದ ಪಾರಾಯಿತು. ಈ ಮೊದಲು ನೂರಲ್ ಹಸನ್ ಈ ರೀತಿ ದಂಡ ತೆತ್ತಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ನೂರಲ್ ಹಸನ್ ಫೀಲ್ಡಿಂಗ್ ನಿಯಮ ಬಾಹಿರವೆಂದು ಅಂಪೈರ್ ಜಿಂಬಾಬ್ವೆಗೆ 5 ರನ್ ನೀಡಿದ್ದರು. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಕೊಹ್ಲಿ ಕಿಂಗ್ – ನೂತನ ವಿಶ್ವದಾಖಲೆ

ಐಸಿಸಿ ನಿಯಮವೇನು?
ಐಸಿಸಿ ನಿಯಮ 41.5ರ ಪ್ರಕಾರ ಉದ್ದೇಶಪೂರ್ವಕವಾಗಿ ವಂಚನೆ ಮಾಡುವುದು, ನಕಲಿ ಫೀಲ್ಡಿಂಗ್ ಆಕ್ಷನ್ ಮೂಲಕ ಬ್ಯಾಟ್ಸ್‌ಮ್ಯಾನ್‌ಗಳಿಗೆ ವಂಚನೆ ಮಾಡುವುದನ್ನು ನಿಷೇಧಿಸಿದೆ. ಈ ರೀತಿ ಫೀಲ್ಡರ್‌ಗಳು ಬ್ಯಾಟ್ಸ್‌ಮ್ಯಾನ್‌ಗಳಿಗೆ ವಂಚಿಸಿದರೆ ಆ ಎಸೆತವನ್ನು ಡೆಡ್‍ಬಾಲ್ ಎಂದು ಅಂಪೈರ್ ಘೋಷಿಸಬಹುದು. ಇಲ್ಲದಿದ್ದಲ್ಲಿ ಎದುರಾಳಿ ತಂಡಕ್ಕೆ 5 ರನ್ ನೀಡುವ ಅವಕಾಶ ಅಂಪೈರ್‌ಗೆ ನೀಡಲಾಗಿದೆ.

Live Tv

Leave a Reply

Your email address will not be published. Required fields are marked *

Back to top button