ಆಡಿಲೇಡ್: ಭಾರತದ (India) ಬೌಲರ್‌ಗಳ ಶಿಸ್ತುಬದ್ಧ ದಾಳಿ, ಫೀಲ್ಡರ್‌ಗಳ ಬೆಸ್ಟ್ ಫೀಲ್ಡಿಂಗ್ ಪರಿಣಾಮ ಮಳೆಯ ನಡುವೆಯೂ ಭಾರತ ತಂಡ ಬಾಂಗ್ಲಾ (Bangladesh) ವಿರುದ್ಧ 5 ರನ್‍ಗಳ ರೋಚಕ ಜಯ ಸಾಧಿಸಿದೆ.
Advertisement
1 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಬಾಂಗ್ಲಾ ಮುಂದಿನ 24 ರನ್‌ಗಳ ಅಂತರದಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಪಂದ್ಯವನ್ನು ಕಳೆದುಕೊಂಡಿತು. ಕೊನೆಯ 6 ಎಸೆತಗಳಲ್ಲಿ ಬಾಂಗ್ಲಾ ಗೆಲುವಿಗೆ 20 ರನ್ ಬೇಕಾಯಿತು. ಆದರೆ ಅರ್ಷದೀಪ್ ಸಿಂಗ್ ಎಸೆದ ಕೊನೆಯ ಓವರ್‌ನ ಕೊನೆಯ ಎಸೆತಗಳಲ್ಲಿ 7 ರನ್ ಬೇಕಾಯಿತು. ಕೊನೆಯ ಎಸೆತದಲ್ಲಿ ಕೇವಲ 1 ರನ್ ಬಿಟ್ಟುಕೊಟ್ಟು ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತದ ಸೆಮಿಫೈನಲ್ ಪ್ರವೇಶ ಸುಗಮಗೊಂಡಿದೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಕೊಹ್ಲಿ ಕಿಂಗ್ – ನೂತನ ವಿಶ್ವದಾಖಲೆ
Advertisement
Advertisement
ಭಾರತ ನೀಡಿದ 185 ರನ್‍ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಮಳೆ ಅಡಚಣೆಯಾಯಿತು. ಆ ಬಳಿಕ 16 ಓವರ್‌ಗಳಿಗೆ ಪಂದ್ಯವನ್ನು ಇಳಿಸಲಾಯಿತು. 54 ಎಸೆತಗಳಲ್ಲಿ 85 ರನ್ ಗುರಿ ಪಡೆದ ಬಾಂಗ್ಲಾ, ಭಾರತದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಬೆದರಿತು. ಅಂತಿಮವಾಗಿ 16 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 145 ರನ್ ಸಿಡಿಸಲಷ್ಟೇ ಶಕ್ತವಾಯಿತು.
Advertisement
ಬಾಂಗ್ಲಾದೇಶ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯಿತು. ನಜ್ಮುಲ್ ಹೊಸೈನ್ ಶಾಂತೋ ಮತ್ತು ಲಿಟ್ಟನ್ ದಾಸ್ ಭರ್ಜರಿ ಆರಂಭ ನೀಡಿದರು. ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೊದಲ ವಿಕೆಟ್‍ಗೆ 64 ರನ್ (44 ಎಸೆತ) ಚಚ್ಚಿ ಬಿಸಾಕಿತು. 6ನೇ ಓವರ್ ಮುಕ್ತಾಯದ ವೇಳೆಗೆ ಮಳೆ ಆರಂಭವಾಯಿತು. ಬಳಿಕ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾಗೆ 9 ಓವರ್‌ಗಳಲ್ಲಿ 85 ರನ್ ಗುರಿ ನೀಡಲಾಯಿತು. 7ನೇ ಓವರ್‌ನ ಎರಡನೇ ಎಸೆತದಲ್ಲಿ ಲಿಟ್ಟನ್ ದಾಸ್ 60 ರನ್ (27 ಎಸೆತ, 7 ಬೌಂಡರಿ, 3 ಸಿಕ್ಸ್) ಸಿಡಿಸಿ ರಾಹುಲ್ ಮಾಡಿದ ಉತ್ತಮ ರನೌಟ್‍ಗೆ ಬಲಿಯಾದರು.
ಆ ಬಳಿಕ ಬಾಂಗ್ಲಾದೇಶದ ಕುಸಿತ ಆರಂಭವಾಯಿತು. ಶಕಿಬ್ 13 ರನ್ (12 ಎಸೆತ, 2 ಬೌಂಡರಿ), ಅಫೀಫ್ ಹೊಸೈನ್ 3 ರನ್, ಯಾಸೀರ್ ಅಲಿ 1 ರನ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಬಂದ ನೂರುಲ್ ಹಸನ್ ಮತ್ತು ತಸ್ಕಿನ್ ಅಹ್ಮದ್ ಗೆಲುವಿಗಾಗಿ ಕಡೆಯ ಎಸೆತದವರೆಗೆ ಹೋರಾಡಿದರೂ ಗೆಲುವು ದಕ್ಕಲಿಲ್ಲ.
ಈ ಮೊದಲು ಟಾಸ್ ಗೆದ್ದ ಬಾಂಗ್ಲಾದೇಶ ಭಾರತವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತ್ತು. ಭಾರತದ್ದು ಎಂದಿನಂತೆ ಕಳಪೆ ಆರಂಭ ಇಂದು ಕೂಡ ಮುಂದುವರಿಯಿತು. ತಂಡದ ಮೊತ್ತ 11 ರನ್ ಆಗುವಷ್ಟರಲ್ಲಿ 2 ರನ್‍ಗಳಿಸಿದ ರೋಹಿತ್ ಶರ್ಮಾ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಇದನ್ನೂ ಓದಿ: ರಾಹುಲ್ ಅರ್ಧ ಶತಕದ ಅಬ್ಬರ – ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಕೊಟ್ಟ ಕನ್ನಡಿಗ
ಆ ಬಳಿಕ ಇನ್ನೋರ್ವ ಆರಂಭಿಕ ಆಟಗಾರ ರಾಹುಲ್ ಎಚ್ಚರಿಕೆಯಿಂದ ಬ್ಯಾಟ್‍ಬೀಸಿದರು. ಉತ್ತಮ ಲಯದಲ್ಲಿ ಕಾಣಿಸಿಕೊಂಡ ರಾಹುಲ್ ಜೊತೆ ಸೇರಿಕೊಂಡ ಕೊಹ್ಲಿ ಉತ್ತಮ ಸಾಥ್ ನೀಡಿದರು. ಆರಂಭದಲ್ಲಿ ನಿಧಾನವಾಗಿ ಬ್ಯಾಟ್‍ಬೀಸಿದ ರಾಹುಲ್ ಆ ಬಳಿಕ ವೈಲೆಂಟ್ ಆದರು. ಈ ಮೂಲಕ 2022ರ ಟಿ20 ವಿಶ್ವಕಪ್‍ನಲ್ಲಿ (T20 World Cup) ತನ್ನ ಮೊದಲ ಅರ್ಧಶತಕ 50 ರನ್ (32 ಎಸೆತ, 3 ಬೌಂಡರಿ, 4 ಸಿಕ್ಸ್) ಸಿಡಿಸಿ ಔಟ್ ಆದರು. ಈ ಮೊದಲು 2ನೇ ವಿಕೆಟ್‍ಗೆ ಕೊಹ್ಲಿ ಜೊತೆ 67 ರನ್ (37 ಎಸೆತ) ಜೊತೆಯಾಟವಾಡಿದರು.
ರಾಹುಲ್ ಔಟ್ ಆದ ಬಳಿಕ ಬ್ಯಾಟಿಂಗ್‍ಗೆ ಬಂದ ಸೂರ್ಯಕುಮಾರ್ ಯಾದವ್ ಪಟಪಟನೇ ನಾಲ್ಕು ಬೌಂಡರಿ ಸೇರಿದಂತೆ 30 ರನ್ (16 ಎಸೆತ) ಚಚ್ಚಿ ಶಕಿಬ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ಪಾಂಡ್ಯ ಆಟ 5 ರನ್ (6 ಎಸೆತ) ಸೀಮಿತವಾಯಿತು. ಇದನ್ನೂ ಓದಿ: ರಾಹುಲ್ ಅಬ್ಬರಿಸೋದನ್ನ ನೀವು ನೋಡ್ತೀರಾ – ಕನ್ನಡಿಗನ ಬೆಂಬಲಕ್ಕೆ ನಿಂತ ದ್ರಾವಿಡ್
ಆ ಬಳಿಕ ಒಂದಾದ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸುವ ಸೂಚನೆ ನೀಡಿದರೂ, ಕಾರ್ತಿಕ್ ಕೇವಲ 7 ರನ್ (5 ಎಸೆತ, ಬೌಂಡರಿ) ಸಿಡಿಸಿದ್ದ ವೇಳೆ ರನೌಟ್‍ಗೆ ಬಳಿಯಾದರು. ಇತ್ತ ಕೊಹ್ಲಿ ಅಂತು ಭರ್ಜರಿ ಹೊಡೆತಗಳ ಮೂಲಕ ಮತ್ತೊಮ್ಮೆ ಭಾರತಕ್ಕೆ ಆಸರೆಯಾದರು. ಆರ್ಧಶತಕದೊಂದಿಗೆ ಮಿಂಚಿದ ಕೊಹ್ಲಿ 2022ರ ಟಿ20 ವಿಶ್ವಕಪ್‍ನಲ್ಲಿ ಮೂರನೇ ಅರ್ಧಶತಕ ಸಿಡಿಸಿ ಮೆರೆದಾಡಿದರು. ಇತ್ತ ಅಕ್ಷರ್ ಪಟೇಲ್ ಆಟ ಕೂಡ 7 ರನ್ (6 ಎಸೆತ, 1 ಬೌಂಡರಿ) ಅಂತ್ಯವಾಯಿತು. ಬಳಿಕ ಅಶ್ವಿನ್ ಕೊನೆಯ ಓವರ್‌ನಲ್ಲಿ ಬೌಂಡರಿ, ಸಿಕ್ಸರ್‌ಗಳೊಂದಿಗೆ ಮಿಂಚಿದರು. ಅಂತಿಮವಾಗಿ ಕೊಹ್ಲಿ ಅಜೇಯ 64 ರನ್ (44 ಎಸೆತ, 8 ಬೌಂಡರಿ, 1 ಸಿಕ್ಸ್) ಮತ್ತು ಅಶ್ವಿನ್ 13 ರನ್ (6 ಎಸೆತ, 1 ಬೌಂಡರಿ, 1 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಪೇರಿಸಿತು.