Connect with us

Districts

ಎಕ್ಸಾಂ ಹಾಲ್‍ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಸೂಪರ್ ಸ್ಮಾರ್ಟ್ ನಕಲು

Published

on

ಉಡುಪಿ: ಸ್ಮಾರ್ಟ್ ವಿದ್ಯಾರ್ಥಿಯೊಬ್ಬ ಸ್ಮಾರ್ಟ್ ಆಗಿ ನಕಲು ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ.

ಎಂಐಟಿ ಕಾಲೇಜು ಎಂಜಿನಿಯರ್ ವಿದ್ಯಾರ್ಥಿ ಸ್ಮಾರ್ಟ್ ವಾಚ್ ಕಟ್ಟಿಕೊಂಡು ಹೋಗಿ ಪರೀಕ್ಷೆಯಲ್ಲಿ ನಕಲು ಮಾಡಿದ್ದಾನೆ. ಸ್ಮಾರ್ಟ್ ವಾಚ್ ಕಟ್ಟಿದ್ದ ವಿದ್ಯಾರ್ಥಿಯನ್ನು ಪರೀಕ್ಷೆ ಹಾಲ್ ನಿಂದ ಎಬ್ಬಿಸಿ ಹೊರಗೆ ಕಳುಹಿಸಿದ್ದಾರೆ.

ಈ ಸ್ಮಾರ್ಟ್ ವಾಚ್ ಎಷ್ಟು ತಂತ್ರಜ್ಞಾನದಿಂದ ಕೂಡಿದೆ ಎಂದರೆ ಇಡೀ ಪುಸ್ತಕವನ್ನು ಇದರೊಳಗೆ ಅಪ್ಲೋಡ್ ಮಾಡಬಹುದು. ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಪ್ರೋಗ್ರಾಂಗಳು, ಅದರ ಸೂತ್ರಗಳು, ಕೆಲ ಉತ್ತರಗಳು ಮೆಮೋರಿ ಕಾರ್ಡ್ ಮೂಲಕ ಸ್ಟೋರ್ ಮಾಡಿಕೊಳ್ಳಬಹುದು. ಝೂಮ್ ಮಾಡುವ ಆಪ್ಶನ್ ಕೂಡ ಇದೆ.

ನಕಲು ಮಾಡಿದ ವಿದ್ಯಾರ್ಥಿ ಯಾರು ಎಂಬುದು ಗೌಪ್ಯವಾಗಿ ಇಡಲಾಗಿದೆ. ಸದ್ಯ ವಾಚ್‍ನ ಕಾರ್ಯವೈಖರಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಲೇಜಿನ ಹಳೆ ವಿದ್ಯಾರ್ಥಿ ರಾಜ್ ಶೆಟ್ಟಿ, ಎಕ್ಸಾಂ ಹಾಲ್‍ನಲ್ಲಿ ಸಿಸಿಟಿವಿ ಅಳವಡಿಸಿದ್ದಾರೆ ಎಂಬುದು ಗೊತ್ತಿದೆ. ಆದರೂ ವಿದ್ಯಾರ್ಥಿ ಅತೀ ಬುದ್ಧಿವಂತಿಕೆಯ ಪ್ರದರ್ಶನ ಮಾಡಿದ್ದಾನೆ. ಚೆನ್ನಾಗಿ ವಿದ್ಯಾರ್ಜನೆ ಮಾಡಿ ಆವಿಷ್ಕಾರ ಮಾಡಬೇಕಾದವರು ಇಂತದರಲ್ಲಿ ಸಿಕ್ಕಿಹಾಕಿಕೊಳ್ಳುವ ಬದಲು ಚೆನ್ನಾಗಿ ಕಲಿತು ತಾನೇ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *