ಟೆಹ್ರಾನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ಗೆ ರಾಜಕೀಯ ಸೋಲಾಗಿದೆ ಎಂದು ಇರಾನ್ ಟಾಂಗ್ ಕೊಟ್ಟಿದೆ.
2026ರ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ ‘ನೀಲಿ ಅಲೆ’ಯ (blue wave) ಮೂಲಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಎರಡರ ಮೇಲೂ ನಿಯಂತ್ರಣ ಸಾಧಿಸಿದೆ. ಟ್ರಂಪ್ಗೆ ಯುದ್ಧಭೂಮಿಯಲ್ಲಿ ಇರಾನ್ ‘ವ್ಯೂಹಾತ್ಮಕ ಸೋಲು’ ನೀಡಿದೆ. ಹಾಗೆಯೇ, ಅಮೆರಿಕದಲ್ಲಿ ರಾಜಕೀಯ ಸೋಲು ಉಂಟುಮಾಡಿದೆ ಎಂದು ಇರಾನ್ನ ಭದ್ರತಾ ಮುಖ್ಯಸ್ಥ ಮೊಹ್ಸೆನ್ ರೆಜಾಯಿ ಚಾಟಿ ಬೀಸಿದ್ದಾರೆ.
ಇರಾನ್ ಯುದ್ಧಭೂಮಿಯಲ್ಲಿ ಹಾಗೂ ಹಾರ್ಮುಜ್ನಲ್ಲಿ ಟ್ರಂಪ್ಗೆ ಒಂದು ವ್ಯೂಹಾತ್ಮಕ ಸೋಲನ್ನು, ಹಾಗೆಯೇ ಅಮೆರಿಕದಲ್ಲಿ ರಾಜಕೀಯ ಸೋಲನ್ನು ಉಂಟುಮಾಡಿದೆ ಎಂದು ರೆಜಾಯಿ ‘ಎಕ್ಸ್’ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು, ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷವು ಸೋಲು ಅನುಭವಿಸಲು ಇರಾನ್ ಯುದ್ಧವೂ ಒಂದು ಕಾರಣ ಎಂದು ಒಪ್ಪಿಕೊಂಡಿದ್ದಾರೆ. ‘ಎಕ್ಸ್’ (X) ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಪೋಸ್ಟ್ನಲ್ಲಿ, ನಾವು ಸೋಲಲು ಕಾರಣವೇ ಈ ಯುದ್ಧ ಎಂದು ಅವರು ಉಲ್ಲೇಖಿಸಿದ್ದಾರೆ. ಏಕೆಂದರೆ, ಮತದಾರರ ಅಸಮಾಧಾನ ಮತ್ತು ಆರ್ಥಿಕ ಪರಿಣಾಮಗಳು ಬೆಂಬಲಿಗರನ್ನು ಡೆಮಾಕ್ರಟಿಕ್ ಪಕ್ಷದತ್ತ ವಾಲುವಂತೆ ಮಾಡಿದವು.
