ಬೆಂಗಳೂರು: ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಕನಿಷ್ಠ 750 ರೂ. ಆದರೂ ಬೆಲೆ ಕೊಡಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ಆಗ್ರಹಿಸಿದ್ದಾರೆ.
ಜೆಪಿ ಭವನದಲ್ಲಿ(JP Bhavan) ಮಾತಾಡಿದ ಅವರು, ಈ ಸರ್ಕಾರದವರು 2500 ರೂ. ಕೊಡೋಕೆ 18 ಷರತ್ತು ಹಾಕಿದ್ದಾರೆ. ಇದಕ್ಕೆ ಇವರಿಗೆ ಪೆನ್ನು ಪೇಪರ್ ಕೊಡಬೇಕಾ? ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು. ರೈತರು, ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ ನಿದ್ದೆ ಕೆಟ್ಟು ಮಾಡಿದ್ರು. ರಿಸಲ್ಟ್ ಶೂನ್ಯ. ರೈತರ ಬಗ್ಗೆ ಕನಿಕರ ಇದ್ದರೆ ಕೇಂದ್ರದ ಮೇಲೆ ಹೇಳಬೇಡಿ. ತಮಿಳುನಾಡಿನಲ್ಲಿ (Tamilnadu) ಸರ್ಕಾರ ಟನ್ಗೆ 700 ರೂ. ಕೊಡ್ತಿದೆ. ರಾಜ್ಯ ಸರ್ಕಾರ ಕನಿಷ್ಠ ಟನ್ 750 ರೂ ಕೊಡಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅರಾಜಕತೆ ಸೃಷ್ಟಿಸಿದ್ರೆ ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನ ತುಂಡು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ
ಕಬ್ಬು ಬೆಳಗಾರರು (Sugarcane Farmers) ಪ್ರತಿಭಟನೆ ಮಾಡ್ತಾ ಇದ್ದಾರೆ. ರೈತರ ಜೊತೆ ಮಾತಾಡೋಕೆ ಸ್ಪೀಡ್ನಲ್ಲಿ ಸಿಎಂ ಹೋದರು, ಆದ್ರೆ ಹಣ ಇಲ್ಲ ಸರ್ಕಾರದ ಬಳಿ ಅಂದರು. ನಾನು ಸಿಎಂ ಆಗಿದ್ದಾಗ ಹೊಲದಲ್ಲಿ ಕಬ್ಬು ಒಣಗಿ ಹೋಗಿತ್ತು. ಆಗ ಸಹಾಯ ಧನ 25 ಸಾವಿರ ರೂ. ನೀಡಿದ್ದೆ. ಯಾರು ರೈತರ ಪರ ಅಂತ ರೈತರು ಅರ್ಥ ಮಾಡಿಕೊಳ್ಳಬೇಕು. ಕಬ್ಬು ಬೆಳೆಗಾರರಿಗೆ ಹಣ ಬಿಡುಗಡೆ ಮಾಡಿದೆ. ರೈತರ ಸಾಲಮನ್ನಾ ಮಾಡಿದೆ. ರಾಜ್ಯದ ಬಜೆಟ್ ಕಡಿಮೆ ಇದ್ದರೂ ಸಾಲಮನ್ನಾ ಮಾಡಿದ್ದೆ ಅಂತ ತಿಳಿಸಿದ್ದಾರೆ.
ರೈತರು 1 ಸಾವಿರ ರೂ. ಕೇಳ್ತಾ ಇದ್ದಾರೆ. 750 ರೂ. ಕೊಡಿಸಬೇಕು. ಕಾರ್ಖಾನೆ ಮಾಲೀಕರು ಪ್ರತಿ ವರ್ಷ ಹೆಲಿಕ್ಯಾಪ್ಟರ್ಗೆ ತೆಗೆದುಕೊಳ್ಳುತ್ತಾರೆ. ಸರ್ಕಾರ 750 ರೂ. ಆದರೂ ಕೊಡಲಿ. ಕಾರ್ಖಾನೆ ಮಾಲೀಕರಿಂದಾದ್ರೂ ಕೊಡಿಸಲಿ ಎಂದು ಹೇಳಿದ್ದಾರೆ.ಇದನ್ನೂ ಓದಿ: ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆ; ಭಾರತ ಹ್ಯಾಟ್ರಿಕ್ ಸಾಧನೆ
