ಜಾಗತಿಕವಾಗಿ ಈಗಾಗಲೇ ಅನೇಕ ದಾಖಲೆಗಳನ್ನು ಮಾಡಿರುವ ಆರ್‍ಆರ್‍ಆರ್ ಸಿನಿಮಾ ನಿರೀಕ್ಷೆಯಂತೆ 1000 ಕೋಟಿ ಕ್ಲಬ್ ಸೇರಿದಂತೆ. ಈ ಮೂಲಕ 1000 ಕೋಟಿ ಕ್ಲಬ್ ದಾಟಿದ ಕೆಲವೇ ಕೆಲವು ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಇದು ಕೂಡ ಸೇರ್ಪಡೆ ಆಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್‍ಆರ್‍ಆರ್’ ಸಿನಿಮಾ ಬಿಡುಗಡೆ ಆಗಿ ಇವತ್ತಿಗೆ 16 ದಿನಗಳು ಕಳೆದಿವೆ. ಆದರೂ ಈ ಚಿತ್ರದ ಕ್ರೇಜ್ ನಿಂತಿಲ್ಲ. ಕಾರಣ ಚಿತ್ರದಲ್ಲಿರುವ ಇಬ್ಬರು ಸೂಪರ್ ಸ್ಟಾರ್‌ಗಳಾದ ರಾಮ್‍ಚರಣ್ ಮತ್ತು ಜ್ಯೂನಿಯರ್ ಎನ್‍ಟಿಆರ್ ಅವರ ಅದ್ಭುತ ನಟನೆ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದೆ. ಅದರಲ್ಲೂ ಚಿತ್ರದಲ್ಲಿ ಬಳಸಿರುವ ಅಡ್ವಾನ್ಸ್ ಲೆವೆಲ್ ವಿಎಫ್‍ಎಕ್ಸ್, ಎಡಿಟಿಂಗ್ಸ್ ನೋಡಿದರೆ ಎಂಥವರಿಗೂ ಒಂದು ಕ್ಷಣ ಮೈ ಜುಮ್ಮೆನಿಸುತ್ತದೆ.
ಚಿತ್ರವು ಜಾಗತಿಕ ಮಟ್ಟದಲ್ಲಿ ಈಗಾಗಲೇ ಕೋಟಿ ಹೃದಯಗಳನ್ನು ಗೆದ್ದಿದ್ದು, ಚಿತ್ರವು ರೀಲಿಸ್ ಆದ ಮೊದಲನೇ ದಿನದಿಂದ ಈವರೆಗೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಲೇ ಬಂದಿದೆ. ಆದರೆ ಇದೆಲ್ಲದರ ನಡುವೇ ಚಿತ್ರಕ್ಕೆ ಕೊಂಚ ಹೊಡೆತ ಬಿದ್ದಿದ್ದೆಂದರೆ ಅದು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ. ಆದಾಗ್ಯೂ ಚಿತ್ರವು ಇವತ್ತಿಗೆ ವಿಶ್ವದಾದ್ಯಂತ ಬರೋಬ್ಬರಿ ಅಂದಾಜು 1000 ಕೋಟಿ ರೂ. ಗಳನ್ನು ಬಾಚಿ ಯಶಸ್ವಿ 16ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಹಿಂದೆ ಜಾಗತಿಕವಾಗಿ ವಿಶ್ವದಾದ್ಯಂತ 1000 ಕೋಟಿ ರೂ. ದಾಟಿದ ಚಿತ್ರಗಳೆಂದರೆ ‘ದಂಗಲ್’ ಮತ್ತು ‘ಬಾಹುಬಲಿ 2’ ಆಗಿದ್ದವು. ಇದೀಗ ಆ ಪಟ್ಟಿಗೆ ‘ಆರ್‍ಆರ್‍ಆರ್’ ಚಿತ್ರವೂ ಸೇರಿದೆ.
Advertisement
View this post on Instagram
Advertisement
ವಿಶ್ವಾದ್ಯಂತ ಅತೀ ಹೆಚ್ಚು ಗಳಿಕೆ ಮಾಡಿದ ಹತ್ತು ಭಾರತೀಯ ಚಿತ್ರಗಳು
ದಂಗಲ್ – ರೂ. 2008.30 ಕೋಟಿ
ಬಾಹುಬಲಿ 2 – ರೂ. 1754.50 ಕೋಟಿ
ಆರ್‍ಆರ್‍ಆರ್ – ರೂ. 1000 ಕೋಟಿ ಅಂದಾಜು 16 ದಿನಗಳು ಇನ್ನೂ ಎಣಿಸಲಾಗುತ್ತಿದೆ
ಭಜರಂಗಿ ಭಾಯಿಜಾನ್ – ರೂ. 902.80 ಕೋಟಿ
ಸೀಕ್ರೆಟ್ ಸೂಪರ್‍ಸ್ಟಾರ್ – ರೂ. 895.50 ಕೋಟಿ
ಪಿಕೆ – ರೂ. 762 ಕೋಟಿ
2.0 – ರೂ. 666.30 ಕೋಟಿ
ಸುಲ್ತಾನ್ – ರೂ. 616.60 ಕೋಟಿ
ಸಂಜು – ರೂ. 588.30 ಕೋಟಿ
ಬಾಹುಬಲಿ: ದಿ ಬಿಗಿನಿಂಗ್ – ರೂ. 581 ಕೋಟಿ
Advertisement
View this post on Instagram
Advertisement
ಈಗಾಗಲೇ ಈ ಸಿನಿಮಾ ಹಲವು ದಾಖಲೆಗಳನ್ನೂ ಬರೆದಿದೆ. ಡಾಲ್ಬಿ ತಂತ್ರಜ್ಞಾನದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಸಿನಿಮಾ ಇದಾಗಿದೆ. ತೆಲುಗು ಭಾಷೆಯ ಅವಧಿಯ ಆ್ಯಕ್ಷನ್ ಡ್ರಾಮಾ ಚಲನಚಿತ್ರವನ್ನು ಡಿವಿವಿ ಎಂಟರ್‌ಟೈನ್‌ಮೆಂಟ್‌ನ ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ. ಚಿತ್ರವನ್ನು 2022ರ ಮಾರ್ಚ್ 25 ರಂದು ಬಿಡುಗಡೆ ಮಾಡಲಾಗಿದೆ.