ತುಮಕೂರು: ಕರ್ನಾಟಕದ ಸಾಂಪ್ರದಾಯಿಕ ಕೃಷಿ ಉತ್ಪನ್ನಗಳು ಮತ್ತು ಕರಕುಶಲ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಮಹತ್ವದ ಪ್ರಯತ್ನಕ್ಕೆ ಹೊಸ ಉತ್ತೇಜನ ಸಿಕ್ಕಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ರಾಜ್ಯದ ನಾಲ್ಕು ವಿಶಿಷ್ಟ ಉತ್ಪನ್ನಗಳಿಗೆ ಭೌಗೋಳಿಕ ಸೂಚನೆ (ಜಿಐ) ನೋಂದಣಿ ಪಡೆಯಲು ಬೆಂಬಲ ನೀಡಿದ್ದು, ಗ್ರಾಮೀಣ ಆರ್ಥಿಕತೆ ಹಾಗೂ ಸ್ಥಳೀಯ ಉತ್ಪಾದಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುವ ನಿರೀಕ್ಷೆ ಮೂಡಿದೆ.
ಜಿಐ ನೋಂದಣಿಗೆ ಗುರುತಿಸಲಾದ ಉತ್ಪನ್ನಗಳಲ್ಲಿ ತಿಪಟೂರು ತೆಂಗಿನಕಾಯಿ, ಹೊಯ್ಸಳ ಶೈಲಿಯ ಕಲ್ಲಿನ ಕಲೆ, ಸಾಣಿಕಟ್ಟೆ ಉಪ್ಪು ಹಾಗೂ ಹವಾಮಾನ ಬದಲಾವಣೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ಕುಂಬಿ ಮುದ್ಲಿ (ಟಾರೋ/ಕೊಲೊಕಾಸಿಯಾ ಕುಟುಂಬದ ಗೆಡ್ಡೆ) ಸೇರಿವೆ. ಈ ಉತ್ಪನ್ನಗಳು ತಮ್ಮ ಭೌಗೋಳಿಕ ಪ್ರದೇಶ, ಸಂಪ್ರದಾಯ ಮತ್ತು ವಿಶಿಷ್ಟ ಗುಣಮಟ್ಟದ ಆಧಾರದ ಮೇಲೆ ದೇಶದ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶ ಪಡೆಯಲಿವೆ. ಇದನ್ನೂ ಓದಿ: ಕಲಬುರಗಿ | ಊಟ ಸೇವನೆಯಿಂದ ಮಕ್ಕಳು ಅಸ್ವಸ್ಥ ಕೇಸ್ – ಶಾಲೆಯ ಪ್ರಭಾರಿ ಪ್ರಾಂಶುಪಾಲ, ವಾರ್ಡನ್ ಅಮಾನತು
ಪ್ರಸ್ತುತ ಭಾರತದಲ್ಲಿ 822 ಜಿಐ ನೋಂದಾಯಿತ ಉತ್ಪನ್ನಗಳಿದ್ದು, ಅವುಗಳಲ್ಲಿ 51 ಉತ್ಪನ್ನಗಳು ಕರ್ನಾಟಕಕ್ಕೆ ಸೇರಿವೆ. ಹೊಸ ನಾಲ್ಕು ಉತ್ಪನ್ನಗಳು ಜಿಐ ಪಟ್ಟಿಗೆ ಸೇರ್ಪಡೆಯಾದರೆ ರಾಜ್ಯದ ಸಾಂಪ್ರದಾಯಿಕ ಉತ್ಪನ್ನಗಳ ಮೌಲ್ಯ ಮತ್ತಷ್ಟು ಹೆಚ್ಚಲಿದೆ.
