Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಳಪೆ ಬೌಲಿಂಗ್‌, ಬ್ಯಾಟಿಂಗ್‌ನಿಂದ ಚೆನ್ನೈಗೆ ಸೋಲು – ತವರಿನಲ್ಲಿ ಸನ್‌ ರೈಸರ್ಸ್‌ಗೆ 6 ವಿಕೆಟ್‌ ಜಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಕಳಪೆ ಬೌಲಿಂಗ್‌, ಬ್ಯಾಟಿಂಗ್‌ನಿಂದ ಚೆನ್ನೈಗೆ ಸೋಲು – ತವರಿನಲ್ಲಿ ಸನ್‌ ರೈಸರ್ಸ್‌ಗೆ 6 ವಿಕೆಟ್‌ ಜಯ

Cricket

ಕಳಪೆ ಬೌಲಿಂಗ್‌, ಬ್ಯಾಟಿಂಗ್‌ನಿಂದ ಚೆನ್ನೈಗೆ ಸೋಲು – ತವರಿನಲ್ಲಿ ಸನ್‌ ರೈಸರ್ಸ್‌ಗೆ 6 ವಿಕೆಟ್‌ ಜಯ

Public TV
Last updated: April 5, 2024 11:15 pm
Public TV
Share
2 Min Read
Sunrisers Hyderabad
SHARE

ಹೈದರಾಬಾದ್‌: ಅಗ್ರ ಕ್ರಮಾಂಕದ ಆಟಗಾರರ ಕಳಪೆ ಬ್ಯಾಟಿಂಗ್‌ ಹಾಗೂ ಕಳಪೆ ಬೌಲಿಂಗ್‌ನಿಂದಾಗಿ ಚೆನ್ನೈ ಸೂಪರ್‌‌ ಕಿಂಗ್ಸ್‌ (hennai Super Kings) ಎದುರು ಹೀನಾಯ ಸೋಲು ಅನುಭವಿಸಿದೆ. ಸಂಘಟಿತ ಪ್ರದರ್ಶನ ತೋರಿದ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತವರಿನಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿದೆ.

ಇಲ್ಲಿನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 18.1 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 166 ರನ್‌ ಗಳಿಸಿ ಗೆಲುವು ಸ್ಥಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.

CSK 2

ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ತಂಡದ ಬ್ಯಾಟರ್‌ಗಳು ಆರಂಭದಲ್ಲೇ ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದರು. ಪವರ್‌ ಪ್ಲೇ ನಲ್ಲಿ ಅಭಿಷೇಕ್‌ ಶರ್ಮಾ (Abhishek Sharma), ಏಡನ್‌ ಮಾರ್ಕ್ರಮ್‌ ಹಾಗೂ ಟ್ರಾವಿಸ್‌ ಹೆಡ್‌ ಅವರ ಸ್ಫೋಟಕ ಪ್ರದರ್ಶನ ತಂಡದ ಗೆಲುವಿಗೆ ನೆರವಾಯಿತು. ಮೊದಲ ವಿಕೆಟ್‌ಗೆ ಕೇವಲ 2.4 ಓವರ್‌ಗಳಲ್ಲೇ 46 ರನ್‌ ಸಿಡಿಸಿದ್ದ ಸನ್‌ ರೈಸರ್ಸ್‌, 6 ಓವರ್‌ಗಳಲ್ಲಿ ಬರೋಬ್ಬರಿ 78 ರನ್‌ ಬಾರಿಸಿತ್ತು. ಪವರ್‌ ಪ್ಲೇ ಬಳಿಕ ಸ್ಪಿನ್‌ ಬೌಲರ್‌ಗಳು ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರೂ ಗೆಲುವು ಕೈತಪ್ಪಿತು.

MS DHoni

ಸನ್‌ ರೈಸರ್ಸ್‌ ಪರ 308.33 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮಾ 12 ಎಸೆತಗಳಲ್ಲಿ 37 ರನ್‌ (4 ಸಿಕ್ಸರ್‌, 3 ಬೌಂಡರಿ) ಸಿಡಿಸಿದರು. ಏಡನ್‌ ಮಾರ್ಕ್ರಮ್‌ 50 ರನ್‌ (36 ಎಸೆತ, 1 ಸಿಕ್ಸರ್‌, 4 ಬೌಂಡರಿ), ಟ್ರಾವಿಸ್‌ ಹೆಡ್‌ 31 ರನ್‌, ಶಾಬಾಜ್‌ ಅಹ್ಮದ್‌ 18 ರನ್‌, ಹೆನ್ರಿಕ್‌ ಕ್ಲಾಸೆನ್‌ 10 ರನ್‌, ನಿತಿಶ್‌ ಕುಮಾರ್‌ ರೆಡ್ಡಿ 14 ರನ್‌ ಗಳಿಸಿದರು. ಸಿಎಸ್‌ಕೆ ಪರ ಮೊಯಿನ್‌ ಅಲಿ 2 ವಿಕೆಟ್‌ ಕಿತ್ತರೆ, ದೀಪಕ್‌ ಚಹಾರ್‌ ಮತ್ತು ಮಹೀಶ್‌ ತೀಕ್ಷಣ ತಲಾ ಒಂದೊಂದು ವಿಕೆಟ್‌ ಪಡೆದರು.

ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ರಚಿನ್‌ ರವೀಂದ್ರ 12 ರನ್‌ಗಳಿಗೆ ಔಟಾಗುತ್ತಿದ್ದಂತೆ, ನಾಯಕ ರುತುರಾಜ್‌ ಗಾಯಕ್ವಾಡ್‌ ಸಹ ಶೀಘ್ರವೇ ಪೆವಿಲಿಯನ್‌ಗೆ ಮರಳಿದರು.

Sunrisers Hyderabad 2

ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಹಾಗೂ ಶಿವಂ ದುಬೆ ತಂಡಕ್ಕೆ ಅಗತ್ಯ ರನ್‌ ಕಲೆಹಾಕುವಲ್ಲಿ ಯಶಸ್ವಿಯಾದರು. ಆದ್ರೆ ಡೆತ್‌ ಓವರ್‌ನಲ್ಲಿ ಕಳಪೆ ಬ್ಯಾಟಿಂಗ್‌ ಪ್ರಸರ್ಶನದಿಂದಾಗಿ ಸಿಎಸ್‌ಕೆ 170 ರನ್‌ಗಳ ಗಡಿ ದಾಟುವಲ್ಲಿಯೂ ವಿಫಲವಾಯಿತು. ಸಿಎಸ್‌ಕೆ ಪರ ಶಿವಂ ದುಬೆ 45 ರನ್‌, ರಹಾನೆ 35 ರನ್‌, ಜಡೇಜಾ 31 ರನ್‌, ರುತುರಾಜ್‌ (Ruturaj Gaikwad) 26 ರನ್‌, ರಚಿನ್‌ 12 ರನ್‌, ಡೇರಿಲ್‌ ಮಿಚೆಲ್‌ 13 ರನ್‌, ಎಂ.ಎಸ್‌ ಧೋನಿ (MS Dhoni) 1 ರನ್‌ ಗಳಿಸಿದರು.

ಹೈದರಾಬಾದ್‌ ಪರ ಅಭಿಷೇಕ್‌ ಶರ್ಮಾ, ಭುನೇಶ್ವರ್‌ ಕುಮಾರ್‌, ಟಿ ನಟರಾಜನ್‌, ಪ್ಯಾಟ್‌ ಕಮ್ಮಿನ್ಸ್‌ (Pat Cummins), ಶಹಬಾಜ್‌ ಅಹ್ಮದ್‌ ಹಾಗೂ ಜಯದೇವ್‌ ಉನದ್ಕಟ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

CSK

TAGGED:Abhishek SharmaAjinkya RahaneChennai Super KingsCSK vs SRHms dhoniPat CumminsRuturaj GaikwadShivam dubeSunrisers Hyderabad
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Yogesh Gowda Wife Mallamma
Dharwad

ನಾನು 10 ವರ್ಷ ಪಟ್ಟ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡ್ತೀನಿ: ಯೋಗೀಶ್ ಗೌಡ ಪತ್ನಿ

Public TV
By Public TV
44 minutes ago
Rahul Gandhi 1
Latest

ನನಗೂ, ಮೋದಿಯವರಿಗೂ ʻಹೆಂಡ್ತಿʼ ಚಿಂತೆ ಇಲ್ಲ!, ಆದ್ರಿಂದ ನಮ್ಗೆ ಆ ಮಾಹಿತಿ ಸಿಗಲ್ಲ: ರಾಗಾ ಹಾಸ್ಯ

Public TV
By Public TV
45 minutes ago
DK Shivakumar 11
Latest

ಮುಸ್ಲಿಂ ನಾಯಕರಿಗೆ ಕಾಂಗ್ರೆಸ್‌ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ, ಮಾಡೋದಿಲ್ಲ: ಡಿಕೆಶಿ

Public TV
By Public TV
1 hour ago
DK Shivakumar 1 1
Latest

ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲ ಅಂತ ಭಾವಿಸಿದ್ದೇನೆ: ಡಿಕೆಶಿ

Public TV
By Public TV
1 hour ago
SR Mahesh
Districts

ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಭಯ: ಸಾರಾ ಮಹೇಶ್

Public TV
By Public TV
2 hours ago
Vinay Kulkarni 2
Bengaluru City

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?