ಕಲಬುರಗಿ: ಹಬ್ಬಕ್ಕೆ (Festival) ತಂದೆ ಬಟ್ಟೆ ಕೊಡಿಸದಿದ್ದಕ್ಕೆ ಮನನೊಂದು ಇಬ್ಬರು ಅಪ್ರಾಪ್ತ ವಯಸ್ಸಿನ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಕಲಬುರಗಿ (Kalaburagi) ಜಿಲ್ಲೆಯ ಶಹಬಾದ್ (Shahabad) ಪಟ್ಟಣದ ಶಾಂತನಗರದಲ್ಲಿ ನಡೆದಿದೆ.

ಪಿಯುಸಿ ದ್ವಿತೀಯ ವರ್ಷದ ಪೂಜಾ (17) ಹಾಗು ಹಣಮಂತಿ ಮೃತ ಬಾಲಕಿಯರಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ವೇಲ್‌ನಿಂದ ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಡ್ರೈವಿಂಗ್ ಅಭ್ಯಾಸದ ವೇಳೆ ಕೆರೆಗೆ ಬಿದ್ದ ಕಾರು – 42 ವರ್ಷದ ಮಹಿಳೆ ಸಾವು
ಹತ್ತು ವರ್ಷಗಳ ಹಿಂದೆ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಸಹೋದರ ಹೈದರಾಬಾದ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಇನ್ನು ತಂದೆ ಸೇನೆಯಿಂದ ನಿವೃತ್ತಿಯಾಗಿ ಶಹಬಾದ್‌ನಲ್ಲೇ ವಾಸವಾಗಿದ್ದರು. ತಂದೆ ಕುಡಿತದ ಚಟಕ್ಕೆ ದಾಸನಾಗಿದ್ದ. ತಂದೆಗೆ ಹಬ್ಬಕ್ಕೆ ಬಟ್ಟೆ ಕೊಡಿಸುವಂತೆ ಸಹೋದರಿಯರು ಕೇಳಿದ್ದರು. ತಂದೆ ಬಟ್ಟೆ ಕೊಡಿಸದ ಹಿನ್ನಲೆ ಮಾನಸಿಕವಾಗಿ ಸಹೋದರಿಯರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಯಾವಾಗ?
