ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮಿತ ಬಳಕೆ ಕರೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಮೋದಿಯವರು ಕಳೆದ 10 ವರ್ಷಗಳಲ್ಲಿ ಬೇರೆ ಬೇರೆ ವಿಚಾರಗಳನ್ನು ಹೇಳುತ್ತಾ ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಯೋಗ ಮಾಡೋಕೆ ಹೇಳಿದ್ರು. ಎರಡು ವರ್ಷಗಳಿಂದ ಎಣ್ಣೆ ಬಳಕೆ ಕಡಿಮೆ ಮಾಡಿ ಅಂತ ಹೇಳ್ತಾ ಇದ್ದಾರೆ. ತೈಲದ ವಿಚಾರದಲ್ಲಿ ನಮ್ಮ ದೇಶ ಆತ್ಮನಿರ್ಭರ್ (Aatmanirbhar) ಇಲ್ಲ. ಖಾದ್ಯ ತೈಲದ 70% ಹೊರ ದೇಶದಿಂದ ನಾವು ತರಿಸಿಕೊಳ್ತೀವಿ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿ ಅವರ ಮಿತ ಬಳಕೆ ಮನವಿ ಎಲ್ಲರೂ ಸ್ವಾಗತಿಸಬೇಕು: ಹೆಚ್‌ಡಿಡಿ
ಪಾಮ್ ಆಯಿಲ್ ಇಂಡೋನೇಷ್ಯಾ, ಮಲೆಷ್ಯಾದಿಂದ ತರಿಸಿ ಅದನ್ನ ಖಾದ್ಯ ತೈಲವಾಗಿ ಬಳಸ್ತೀವಿ. ತೈಲ ಒಂದು ಕಡಿಮೆ ಆದರೆ ವಿದೇಶಿ ವಿನಿಮಯ ಕಡಿಮೆ ಆಗುತ್ತದೆ. ಪೆಟ್ರೋಲ್ ಉತ್ಪನ್ನಗಳು ವಾಹನ ಮತ್ತು ರಸಗೊಬ್ಬರ ಉಪಯೋಗ ಆಗುತ್ತದೆ. ಹೀಗಾಗಿ ಪೆಟ್ರೋಲಿಯಂ ಉತ್ಪನ್ನಗಳು ಕಡಿಮೆ ಮಾಡಿದ್ರೆ ವಿದೇಶಿ ವಿನಿಮಯ ಉಳಿಸಬಹುದು. ಪೆಟ್ರೋಲಿಯಂ ಉತ್ಪನ್ನಗಳಲ್ಲಿ ನಾವು ಆತ್ಮನಿರ್ಭರ್ ಇಲ್ಲ. ನಮ್ಮ ದೇಶ ಆತ್ಮನಿರ್ಭರ್ ಆಗಬೇಕಾದ್ರೆ ಹಿತವಾಗಿ-ಮಿತವಾಗಿ ಬಳಕೆ ಮಾಡಬೇಕು. ಇದು ಮೋದಿ ಅವರ ಅಪೇಕ್ಷೆ ಎಂದರು.
ಇದು ದೇಶದ ಅರೋಗ್ಯಕ್ಕೆ ಒಳ್ಳೆಯದು. ನಮ್ಮ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ಗಮನಕೊಡಿ ಎಂದು ಮೋದಿ ಹೇಳ್ತಾರೆ. ದೇಶದ ಕಾಳಜಿ, ದೇಶದ ವಿದೇಶಿ ವಿನಿಮಯ ಉಳಿಸುವ ಬಗ್ಗೆ ಮೋದಿ ಮಾತಾಡಿದ್ದಾರೆ. ಚಿನ್ನದ ರೇಟ್ ಗಗನಕ್ಕೇರುತ್ತಿದೆ. ಜಗತ್ತಿನಲ್ಲಿ ಯುದ್ಧ ನಡೆಯುತ್ತಿದೆ. ಯುದ್ಧ ನಡೆಯೋ ದೇಶಗಳಲ್ಲಿ ಗೊಂದಲ ಇದೆ. ಇಂತಹ ಸಮಯದಲ್ಲಿ ಆದಾಯ ಮಾಡಿಕೊಳ್ಳೋಕೆ ಆ ದೇಶಗಳು ನೋಡುತ್ತವೆ. ನಾವು ಚಿನ್ನದ ಹಿಂದೆ ಬೀಳಬಾರದು. ನಮ್ಮ ಆದ್ಯತಾ ವಲಯ ಯಾವುದು ಅದಕ್ಕೆ ಗಮನ ಕೊಡಬೇಕು ಅನ್ನೋದು ಪ್ರಧಾನಿಗಳ ಅಪೇಕ್ಷೆ ಎಂದು ಮೋದಿ ಮಾತನ್ನು ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಪ್ರಧಾನಿ ಕಾರ್ಯಕ್ರಮದ ಬಳಿ ಜಿಲೆಟಿನ್ ಪತ್ತೆ ಬಗ್ಗೆ NIA ತನಿಖೆ ಆಗಲಿ: ಶೋಭಾ ಕರಂದ್ಲಾಜೆ

