ಶಿವಮೊಗ್ಗ: ಸೂಪರ್ ಸ್ಟಾರ್ ಇಳಯ ದಳಪತಿ ವಿಜಯ್ ಅಭಿನಯದ ‘ದಳಪತಿ 64’ ತಮಿಳು ಚಲನಚಿತ್ರದ ಚಿತ್ರೀಕರಣ ಶಿವಮೊಗ್ಗದ ಹಳೆ ಜೈಲು ಆವರಣದಲ್ಲಿ ನಡೆಯುತ್ತಿದೆ.
ಕಳೆದ 3 ದಿನಗಳಿಂದ ಜೈಲು ಆವರಣದಲ್ಲಿ ನಿರ್ಮಿಸಲಾದ ವಿಶೇಷ ಸೆಟ್ ಗಳಲ್ಲಿ ಚಿತ್ರೀಕರಣ ನಡೆದಿದ್ದು, ತಮಿಳು ನಟ ಸೂಪರ್ ಸ್ಟಾರ್ ವಿಜಯ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದಾರೆ. ಶೂಟಿಂಗ್ ಗಾಗಿ ವಿಜಯ್ ಆಗಮಿಸಿದ್ದ ಸುದ್ದಿ ತಿಳಿದು ಭಾರೀ ಸಂಖ್ಯೆಯ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
- Advertisement 2
- Advertisement 3
ಶಿವಮೊಗ್ಗದ ಖಾಸಗಿ ಹೋಟೆಲ್ ನಲ್ಲಿ ವಿಜಯ್ ತಂಗಿದ್ದು ತಡರಾತ್ರಿ ಅವರು ಶಿವಮೊಗ್ಗಕ್ಕೆ ಆಗಮಿಸುವ ಮಾಹಿತಿ ತಿಳಿದ ಭಾರೀ ಸಂಖ್ಯೆಯ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು. ಬಳಿಕ ಭಾರೀ ಭದ್ರತೆಯಲ್ಲಿ ವಿಜಯ್ ಹೊಟೇಲ್ ಪ್ರವೇಶಿಸಿದ್ದು ಭದ್ರತೆ ನಡುವೆಯೂ ಹೋಟೆಲ್ ಒಳಗೆ ನುಗ್ಗಲು ಅಭಿಮಾನಿಗಳ ನೂಕುನುಗ್ಗಲು ಉಂಟಾಯಿತು. ಈ ವೇಳೆ ಪೊಲೀಸರು ಅಭಿಮಾನಿಗಳನ್ನು ಚದುರಿಸಿದ್ದಾರೆ. ಇನ್ನು ಶಿವಮೊಗ್ಗದಲ್ಲಿಯೇ ಕೆಲವು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
- Advertisement 4
ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಶಿವಮೊಗ್ಗದ ಹಳೆ ಜೈಲು ಆವರಣದಲ್ಲಿ ನಿರ್ಮಿಸಲಾದ ಅತಿ ದೊಡ್ಡ ವಿಶೇಷ ಮಾದರಿಯ ಸೆಟ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಸ್ವಾತಂತ್ರ್ಯ ಪೂರ್ವ ಕಾಲದ ಕಾರಾಗೃಹ ಇದಾಗಿದ್ದು ಈ ಜೈಲನ್ನು ಸಂಪೂರ್ಣವಾಗಿ ವಿಶೇಷ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗುತ್ತಿದೆ.