ಚಂಡೀಗಢ: ಹರಿಯಾಣದ ಪಂಚಕುಲದ ಸರ್ಕಾರಿ ಶಾಲೆಯಲ್ಲಿ (Panchkula school) ಬಾಲಕನಿಂದ ಭೀಕರ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ 6 ವರ್ಷದ ವಿಶೇಷ ಚೇತನ ಬಾಲಕಿ ಇದೀಗ ಗುಣಮುಖಳಾಗಿ ಆಸ್ಪತ್ರೆಯಿಂದ (Hospital) ಡಿಸ್ಚಾರ್ಜ್ ಆಗಿದ್ದಾಳೆ.
Not every happy ending makes you emotional, but this one really does! 🥹6yr old little girl from the Panchkula school incident has finally recovered and made it back home. Just look at how many people turned up to welcome her. After everything this little girl has been through, seeing her back home, surrounded by so much love, honestly feels so special. ❤️
— Nikhil saini (@iNikhilsaini) November 4, 2026
ಪುಟ್ಟ ಕಂದಮ್ಮ ಮನೆಗೆ ಮರಳಿದ ಕ್ಷಣ ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರೀತಿಯಿಂದ ಹೂಮಳೆಯ ಸ್ವಾಗತ ನೀಡಿದ್ದು, ಈ ಹೃದಯಸ್ಪರ್ಶಿ ವಿಡಿಯೋ ಕಣ್ಕಟ್ಟುವಂತೆ ಮಾಡಿದೆ. ನೋವು, ಭಯ ಮತ್ತು ಆಸ್ಪತ್ರೆಯ ದಿನಗಳನ್ನು ದಾಟಿ ಮತ್ತೆ ತನ್ನವರ ಮಡಿಲಿಗೆ ಮರಳಿರುವ ಪುಟ್ಟ ಬಾಲಕಿಗೆ ಸಿಕ್ಕ ಈ ಪ್ರೀತಿಯ ಸ್ವಾಗತ ನಿಜಕ್ಕೂ ಮನಕಲಕುವಂತಿದೆ. ಇದನ್ನೂ ಓದಿ: 6ರ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿ ರಾಕ್ಷಸಿ ಕೃತ್ಯ – PUBG ಆಟದ ಪ್ರಭಾವವೇ ಕಾರಣವಾಯ್ತಾ?
ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದ ಬಾಲಕಿಯನ್ನ ಹೂವಿನ ಹಾರ ಹಾಕಿ, ಹೂ ಮಳೆಗರೆದು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ. ಭೀಕರ ಘಟನೆಯ ನೋವಿನ ನಡುವೆಯೂ ಮಗುವಿನ ಮುಖದಲ್ಲಿ ಮತ್ತೆ ನಗು ಮೂಡಿರುವುದು ಕುಟುಂಬಸ್ಥರಿಗೆ ಹೊಸ ಭರವಸೆ ನೀಡಿದೆ. ಪುಟ್ಟ ಕಂದಮ್ಮನನ್ನ ಕಂಡು ಕುಟುಂಬದವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂಬುದು ವಿಡಿಯೋದಲ್ಲಿ ತೋರಿಸಿದೆ.
ಅಷ್ಟಕ್ಕೂ ಬಾಲಕಿಗೆ ಆಗಿದ್ದೇನು?
ಅಕ್ಟೋಬರ್ 28ರಂದು ಶಾಲೆಯ ಮೊದಲ ಮಹಡಿಯಲ್ಲಿರುವ ತರಗತಿ ಕೊಠಡಿಯಲ್ಲಿ ಬಾಲಕ, 6 ವರ್ಷದ ಬಾಲಕಿ ಮೇಲೆ ರಾಕ್ಷಸಿ ಕೃತ್ಯ ಎಸಗಿದ್ದ ಘಟನೆ ನಡೆದಿತ್ತು. ಬಾಲಕ ಮೊದಲು ಬಾಲಕಿಯನ್ನು ‘ಹುಚ್ಚಿ’ ಅಂತಾ ಕರೆದು ರೇಗಿಸಿದ್ದ. ಇದಕ್ಕೆ ಕೋಪಗೊಂಡಿದ್ದ ಬಾಲಕಿ, ಈ ದೂರು ನೀಡುವುದಾಗಿ ಹೇಳಿದ್ದಳು. ಆಗ ಬಾಲಕ, ಆಕೆಯ ತಂದೆ ಮೇಲಿನ ಮಹಡಿಯಲ್ಲಿದ್ದಾರೆ ಎಂದು ಹೇಳಿ ತನ್ನೊಂದಿಗೆ ಬರುವಂತೆ ಆಕೆಯನ್ನ ಕರೆದುಕೊಂಡು ಹೋಗಿದ್ದಾನೆ. ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿ ರಾಕ್ಷಸಿ ಕೃತ್ಯ – ಶಾಲೆಯ ಪ್ರಾಂಶುಪಾಲೆ ಸಸ್ಪೆಂಡ್
ನಂತರ ಬಾಲಕಿಯ ಕೂದಲು ಹಿಡಿದು ಬೆಂಚಿಗೆ ತಲೆಯನ್ನ ಗುದ್ದಿಸಿದ್ದಾನೆ. ಅಷ್ಟೇ ಅಲ್ಲದೇ, ಆಕೆಗೆ ಕಾಲಿನಿಂದ ಒದ್ದು, ಕಲ್ಲು ಹೂವಿನ ಕುಂಡವನ್ನ ಎತ್ತಿ ಮುಖಕ್ಕೆ ಅಪ್ಪಳಿಸಿದ್ದಾನೆ. ವಿಕೃತಿ ಮೆರೆದು ರಕ್ತದ ಮಡುವಿನಲ್ಲಿ ಬಾಲಕಿಯನ್ನು ಬಿಟ್ಟು ಹೋಗಿದ್ದಾನೆ. ಸುಮಾರು 30 ನಿಮಿಷಗಳ ಬಳಿಕ ಮತ್ತೆ ತರಗತಿಗೆ ಬಂದ ಬಾಲಕ, ಬಾಲಕಿ ಮೇಲೆ ಮತ್ತೊಮ್ಮೆ ಹಲ್ಲೆ ನಡೆಸಿದ್ದಾನೆ. ಈ ಸಂಪೂರ್ಣ ಘಟನೆ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಶಾಲೆ, ಬಾಲಕನ ವಿರುದ್ಧ ಎಫ್ಐಆರ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ವಿರುದ್ಧ 1 ಎಫ್ಐಆರ್ ಮತ್ತು ಆರೋಪಿ ಬಾಲಕನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಇನ್ನು, ಘಟನೆಗೆ ಸಂಬಂಧಿಸಿದಂತೆ ಹರಿಯಾಣ ಶಿಕ್ಷಣ ಇಲಾಖೆಯು ಇಬ್ಬರು ಜೆಬಿಟಿ ಶಿಕ್ಷಕರಾದ ಸಿಮ್ರನ್ಜೀತ್ ಕೌರ್ ಮತ್ತು ಪೂಜಾ ರಾಣಿ ಅವರನ್ನು ಅಮಾನತುಗೊಳಿಸಿದೆ. ಹರಿಯಾಣ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಪ್ರಕರಣವನ್ನ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದೆ. ಘಟನೆಯ ಬಗ್ಗೆ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಪಂಚಕುಲ ಜಿಲ್ಲಾ ಶಿಕ್ಷಣಾಧಿಕಾರಿಗೆ ಸೂಚಿಸಿದೆ. ಇದನ್ನೂ ಓದಿ: ತಲೆಯನ್ನು ಮೇಜಿಗೆ ಬಡಿದು, ಕಲ್ಲು-ಹೂವಿನ ಕುಂಡದಿಂದ ದಾಳಿ; 6 ವರ್ಷದ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿ ಭೀಕರ ಹಲ್ಲೆ
PUBG ಆಡ್ತಿದ್ದೇ ಕೃತ್ಯಕ್ಕೆ ಕಾರಣವಾಯ್ತಾ?
ಇನ್ನೂ ಆರೋಪಿ ಬಾಲಕ PUBG ಸೇರಿದಂತೆ ಆಕ್ರಮಣಕಾರಿ ಗೇಮ್ಗಳನ್ನ ಆಡುತ್ತಿದ್ದ ಎಂದು ಸಂತ್ರಸ್ತೆಯ ಚಿಕ್ಕಪ್ಪ ಫಾಜಿಲ್ ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ್ದ ಫಾಜಿಲ್, ಬಾಲಕನ ತಂದೆಯೂ ತನ್ನ ಮಗ PUBG ಮತ್ತು ಇತರ ಆಕ್ರಮಣಕಾರಿ ಗೇಮ್ಗಳನ್ನ ಆಡುತ್ತಿದ್ದ ದೃಢಪಡಿಸಿದ್ದಾರೆ. ಈ ಆಟಗಳ ಪ್ರಭಾವದಿಂದಲೇ ಬಾಲಕ ಇಂತಹ ಕೃತ್ಯ ಎಸಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.


