ಚಿಂತಾಮಣಿ: ಮದುವೆಯಾಗಿ ಕೇವಲ 9 ತಿಂಗಳಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು 3 ತಿಂಗಳ ಗರ್ಭಿಣಿ (Pregnant Woman) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರತಿಭಾ (24) ಮೃತ ಮಹಿಳೆ. ಮೂರು ತಿಂಗಳ ಗರ್ಭಿಣಿಯಾಗಿದ್ದ ಪ್ರತಿಭಾ ಸಾವಿನ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೆಂಗಳೂರಿನ ಕೆ.ಆರ್.ಪುರಂ ತಾಲೂಕಿನ ಬಿದರಹಳ್ಳಿ ಗ್ರಾಮದ ಪ್ರತಿಭಾ ಅವರನ್ನು ನಾಯನಹಳ್ಳಿ ಗ್ರಾಮದ ಬಚ್ಚನ್ನಗಾರಿ ಕೃಷ್ಣಾರೆಡ್ಡಿ ಅವರ ಪುತ್ರ ರಘು ಎಂಬುವವರಿಗೆ 2026ರ ಜನವರಿ 29ರಂದು ಚಿಂತಾಮಣಿಯ ಸುವರ್ಣ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಪದವೀಧರೆಯಾಗಿದ್ದ ಪ್ರತಿಭಾ ಮೂರು ತಿಂಗಳ ಗರ್ಭಿಣಿಯಾಗಿದ್ದರು ಎಂದು ಪೋಷಕರು ತಿಳಿಸಿದ್ದಾರೆ. ಇದನ್ನೂಓದಿ: 2 ಕೋಟಿ ಲಂಚ ಕೇಳಿದ ಆರೋಪ ಕೇಸ್ – ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆಗೆ ಕೇರಳ ಸರ್ಕಾರ ಆದೇಶ
ಇನ್ನು ಪ್ರತಿಭಾ ಸಾವಿಗೆ ಗಂಡನ ಮನೆಯವರ ಕಿರುಕುಳವೇ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಗಂಡನ ಮನೆಯಲ್ಲಿನ ವ್ಯವಹಾರಗಳ ಬಗ್ಗೆ ತಮ್ಮ ಮಗಳಿಗೆ ತಿಳಿಸುತ್ತಿರಲಿಲ್ಲ. ಸರಿಯಾಗಿ ಊಟ ನೀಡದೆ, ದಿನಕ್ಕೆ ಒಮ್ಮೆ ಮಾತ್ರ ಅಡುಗೆ ಮಾಡಿಸುತ್ತಿದ್ದರು. ಕೊಳೆತ ಆಹಾರ ಪದಾರ್ಥಗಳು ಹಾಗೂ ತರಕಾರಿಗಳನ್ನು ಬಳಸುವಂತೆ ಒತ್ತಾಯಿಸುತ್ತಿದ್ದರು ಎಂಬುದಾಗಿ ಪ್ರತಿಭಾ ಸುಮಾರು ಒಂದು ತಿಂಗಳ ಹಿಂದೆ ಸೂಕ್ಷ್ಮವಾಗಿ ತಮ್ಮ ಬಳಿ ಹೇಳಿಕೊಂಡಿದ್ದಳು ಎಂದು ತಂದೆ ಕೃಷ್ಣಮೂರ್ತಿ ಆರೋಪಿಸಿದ್ದಾರೆ. ಇದನ್ನೂಓದಿ: ಅಗ್ನಿವೀರರಿಗೆ ಕೇಂದ್ರದಿಂದ ಬಂಪರ್ – ಸೇವಾ ಅವಧಿ 2 ವರ್ಷ ವಿಸ್ತರಣೆಗೆ ನಿರ್ಧಾರ
ಸಣ್ಣಪುಟ್ಟ ಕೌಟುಂಬಿಕ ವಿಚಾರವೆಂದು ಭಾವಿಸಿ, ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ಸುಮ್ಮನಾಗಿದ್ದೆವು. ಆದರೆ ಇದೀಗ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ಇನ್ನು ಪ್ರತಿಭಾ ಗಂಭೀರ ಸ್ಥಿತಿಯಲ್ಲಿದ್ದಾಳೆ, ಬೇಗ ಬನ್ನಿ ಎಂದು ಗಂಡನ ಮನೆಯಿಂದ ದೂರವಾಣಿ ಕರೆ ಬಂದಿತ್ತು ಎಂದು ಸಹೋದರ ಪವನ್ ತಿಳಿಸಿದ್ದಾರೆ. ಇದನ್ನೂಓದಿ: ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಮಾಫಿ ಸಾಕ್ಷಿ ಪ್ರದೋಷ್ಗೆ ಹೈಕೋರ್ಟ್ ಅನುಮತಿ
ತಾಯಿ ಕೋಮಲ ನೀಡಿದ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪತಿ ರಘು ಅವರನ್ನು ಬಂಧಿಸಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಹಶೀಲ್ದಾರ್ ಸುದರ್ಶನ ಯಾದವ್ ಅವರ ಮೇಲ್ವಿಚಾರಣೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಡಿವೈಎಸ್ಪಿ ರಘು, ತಹಶೀಲ್ದಾರ್ ಸುದರ್ಶನ ಯಾದವ್ ಹಾಗೂ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂಓದಿ: ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ಬೆದರಿಕೆ – ಬೆಂಗಳೂರಿನ ಟೆಕ್ಕಿ ಬಂಧನ
ಒಂಬತ್ತು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ, ಮೂರು ತಿಂಗಳ ಗರ್ಭಿಣಿಯಾಗಿದ್ದ ಪ್ರತಿಭಾ ಸಾವು ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂಓದಿ: ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಕೇಸ್: 10 ಆರೋಪಿಗಳ ಬಂಧನ
