ಶಿವಮೊಗ್ಗ: ತುಂಗಾ ನಾಲೆಯಲ್ಲಿ (Tunga Canal) ಈಜಲು ಹೋಗಿದ್ದ ಬಾಲಕ (Boy) ನೀರುಪಾಲಾಗಿರುವ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಅಬ್ಬಲಗೆರೆ ಬಳಿಯ ತುಂಗಾ ಮೇಲ್ದಂಡೆ ನಾಲೆಯಲ್ಲಿ ನಡೆದಿದೆ.
ಬೊಮ್ಮನಕಟ್ಟೆಯ ನಿವಾಸಿ ಕೃಷ್ಣ (15) ನೀರುಪಾಲಾದ ಬಾಲಕ. ಕೃಷ್ಣ ಶಿವಮೊಗ್ಗ ನಗರದ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಆರು ಜನ ಸ್ನೇಹಿತರ ಜೊತೆ ತುಂಗಾ ನಾಲೆಗೆ ಈಜಲು ತೆರಳಿದ್ದ ವೇಳೆ ನಾಲೆಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ನಿಯಂತ್ರಣ ಕಳೆದುಕೊಂಡು ಕೃಷ್ಣ ಕಣ್ಮರೆಯಾಗಿದ್ದಾನೆ. ಇದನ್ನೂ ಓದಿ: ರಷ್ಯಾ-ಚೀನಾ ಅನಿಲ ಸಂಕೀರ್ಣದಲ್ಲಿ ಭಾರಿ ಸ್ಫೋಟ; 7 ಮಂದಿ ಸಾವು
ಬಾಲಕ ಕೃಷ್ಣನ ರಕ್ಷಿಸಲು ಸ್ನೇಹಿತರ ಯತ್ನ ವಿಫಲವಾಗಿದೆ. ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ಬಾಲಕನಿಗೆ ಶೋಧ ಕಾರ್ಯ ನಡೆಯುತ್ತಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆ ಕೊಡಲೇಬೇಕು: ನಿಖಿಲ್ ಕುಮಾರಸ್ವಾಮಿ
