ಬೆಂಗಳೂರು: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ (B Nagendra) ಅವರು ರಾಜೀನಾಮೆ ನೀಡಲೇಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಾಗೇಂದ್ರ ಅವರ ವಿರುದ್ಧದ ಆರೋಪ ಹೊಸದಲ್ಲ. ಕಳೆದ ವರ್ಷವೇ ಈ ಆರೋಪ ಕೇಳಿಬಂದಿತ್ತು. ಹಿಂದಿನ ಮುಖ್ಯಮಂತ್ರಿ ಅವರೇ ಸದನದಲ್ಲಿ ₹87 ಕೋಟಿ ಅಕ್ರಮ ನಡೆದಿದೆ ಎಂದು ಒಪ್ಪಿಕೊಂಡಿದ್ದರು ಎಂದು ಹೇಳಿದರು.
ಬೇರೆ ಸಮರ್ಥ ವ್ಯಕ್ತಿಗಳಿಗೆ ಸಚಿವ ಸ್ಥಾನ ನೀಡಬಹುದಿತ್ತು. ಹಾಗಿದ್ದರೂ ನಾಗೇಂದ್ರ ಅವರನ್ನೇ ಮತ್ತೆ ಸಚಿವರನ್ನಾಗಿ ಮಾಡಿರುವುದೇಕೆ ಎಂಬುದಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಇನ್ನು ವಿಧಾನಮಂಡಲದ ಕಲಾಪದಲ್ಲಿ ಬರಗಾಲ, ನೈಸ್, ಬಿಡದಿ ಸೇರಿದಂತೆ ರಾಜ್ಯದ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿತ್ತು. ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವಂತಹ ಪರಿಸ್ಥಿತಿಯಲ್ಲಿ ಈ ಸಮಸ್ಯೆಗಳ ಬಗ್ಗೆ ಚರ್ಚೆ ಅಗತ್ಯವಿತ್ತು ಎಂದರು.
ಸರ್ಕಾರದ ಉದ್ದಟತನದಿಂದ ಸದನದ ಅಮೂಲ್ಯ ಸಮಯ ವ್ಯರ್ಥವಾಗಿದೆ. ಸರ್ಕಾರ ಇದುವರೆಗೆ ಏನು ಸಾಧನೆ ಮಾಡಿದೆ? ಕಲಾಪಕ್ಕೆ ಏನು ಬೆಲೆ ಸಿಕ್ಕಿದೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು. ಇದನ್ನೂ ಓದಿ: ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಟಿಟಿ ಮೇಲೆ ಮಗುಚಿದ ಲಾರಿ, 8 ಮಂದಿಗೆ ಗಾಯ
ವಾಲ್ಮೀಕಿ ನಿಗಮದ ಪ್ರಕರಣದ ಹೊಣೆ ಹೊತ್ತು ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಲೇಬೇಕು ಎಂದು ಅವರು ಮತ್ತೊಮ್ಮೆ ಒತ್ತಾಯಿಸಿದರು. ಇದನ್ನೂ ಓದಿ: ನಿಂತಿದ್ದ ಟಾಟಾ ಏಸ್‌ಗೆ ಬೈಕ್ ಡಿಕ್ಕಿ: ಮೂವರು ಸವಾರರು ಸ್ಥಳದಲ್ಲೇ ಸಾವು
