ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ತಯಾರಿ ಗಡಿಬಿಡಿಯಲ್ಲಿದ್ದ ಜನರು ಪಡಿತರ ಅಕ್ಕಿಗಾಗಿ (Ration) ನ್ಯಾಯಬೆಲೆ ಅಂಗಡಿ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಡೌನ್ ಆಗಿದ್ದು, ಅಕ್ಕಿಗಾಗಿ ಮಹಿಳೆಯರು, ಮಕ್ಕಳು, ವೃದ್ಧರು ಪರದಾಡುವಂತಾಗಿದೆ. ಈ ಅವ್ಯವಸ್ಥೆಗೆ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ – ಗೃಹ ಇಲಾಖೆ ಅಂಕಿಅಂಶ ಬಿಡುಗಡೆ
ಇ-ಕೆವೈಸಿ ಹಾಗೂ ಅನ್ನಭಾಗ್ಯದ (Anna Bhagya) ಅಕ್ಕಿ ನೀಡೋದಕ್ಕೆ ಸರ್ವರ್ ಸಮಸ್ಯೆಯಾಗಿದೆ. ಹೀಗಾಗಿ, ಜನರೇಷನ್ ಅಂಗಡಿ ಮುಂಭಾಗ ಕಾದು ಕಾದು ಸುಸ್ತಾದರು. ನಾಳೆ ವರಮಹಾಲಕ್ಷ್ಮಿ ಹಬ್ಬದ ತಯಾರಿ ಮಾಡಬೇಕಿತ್ತು. ಆದರೆ, ಈಗ ನಾವು ಈ ಕ್ಯೂ ನಲ್ಲಿ ಕಾಯಬೇಕಾಗಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇ-ಕೆವೈಸಿಗೆ ಸೆಪ್ಟೆಂಬರ್ ಗಡುವು ಇದೆ. ಮಗದೊಂದು ಕಡೆ ಅನ್ನಭಾಗ್ಯದ ಅಕ್ಕಿಯ ಸರ್ವರ್ ಡೌನ್ ಆಗಿದ್ದು, ಜನರನ್ನು ಹೈರಾಣಾಗಿಸಿದೆ. ಸರ್ವರ್ ಸಮಸ್ಯೆ ಬಗೆಹರಿಸುವಂತೆ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನ ಇಲ್ಲ ಎನ್ನುವಂತಾಗಿದೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಡಿಗೆ ಶಾಕ್; ಸಂಪರ್ಕಕ್ಕೆ ಸಿಗ್ತಿಲ್ಲ ಕೆಪಿಎಸ್‌ಸಿ ಸದಸ್ಯೆ ಶಾಂತ ಹೊಸಮನಿ

