ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸರ್ಚ್ ವಾರೆಂಟ್ ಹಿಡಿದು ಹೋದ ಇಡಿ ಅಧಿಕಾರಿಗಳಿಗೆ ಶಾಕ್ ಎದುರಾಗಿದೆ. ಕೆಪಿಎಸ್‌ಸಿ ಸದಸ್ಯೆ ಶಾಂತ ಹೊಸಮನಿ ಎಸ್ಕೇಪ್ ಆಗಿದ್ದಾರೆ.
ಇಡಿ ದಾಳಿ ಬೆನ್ನಲ್ಲೇ ಶಾಂತಿ ಹೊಸಮನಿ ಅವರು ಪರಾರಿಯಾಗಿದ್ದಾರೆ. ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಗೋವಾ, ಮೈಸೂರಿಗೆ ತೆರಳಿರುವ ಬಗ್ಗೆ ಇಡಿಗೆ ಮಾಹಿತಿ ಸಿಕ್ಕಿದೆ. ಸದ್ಯ ಹುಡುಕಾಟ ನಡೆಸಲಾಗಿದೆ.
ಕೆಪಿಎಸ್‌ಸಿ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಈಚೆಗೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದರು. ಸತತ 42 ಗಂಟೆಗಳ ಕಾಲ ಪರಿಶೀಲನೆ ನಡೆಸಲಾಯಿತು.

