ಮೆಲ್ಬೋರ್ನ್/ಮುಂಬೈ: ಲಿಂಗ ಪರಿವರ್ತನೆಗೆ ಒಳಗಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ (Anaya Bangar) , 2027ರ ಮಾರ್ಚ್‌ನಿಂದ ಆಸ್ಟ್ರೇಲಿಯಾದ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ (WBBL) ಆಡಲು ಅರ್ಹತೆ ಪಡೆದುಕೊಂಡಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಅವರಿಗೆ ಆಸ್ಟ್ರೇಲಿಯಾದಲ್ಲಿ ಮಾರ್ಚ್‌ನಿಂದ ಆಸ್ಟ್ರೇಲಿಯಾದ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ.
ಈ ಸುದ್ದಿ ಅನಯಾ ಪಾಲಿಗೆ ಭಾವನಾತ್ಮಕ ಕ್ಷಣವಾಗಿದ್ದು, ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವ ಅವಕಾಶ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಅನಯಾ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ನೀಡಿರುವ ನಿರ್ಧಾರದಂತೆ ಅವರು ತಮ್ಮ ಕ್ರಿಕೆಟ್ ಕರಿಯರ್ ಮುಂದುವರಿಸಲಿದ್ದಾರೆ
ನಾನು ಮತ್ತೆ ಕ್ರಿಕೆಟ್ ಆಡಬಲ್ಲೆ ಎಂಬ ವಿಚಾರ ತಿಳಿದ ದಿನ ನನಗೆ ತುಂಬಾ ಖುಷಿಯಾಯಿತು. ಒಂದು ಹಂತದಲ್ಲಿ ನಾನು ಜೀವನದಲ್ಲಿ ಮತ್ತೆ ಕ್ರಿಕೆಟ್ ಆಡುವುದೇ ಇಲ್ಲ ಎಂದುಕೊಂಡಿದ್ದೆ. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾ ನನಗೆ ಮತ್ತೊಂದು ಅವಕಾಶ ನೀಡಿದೆ ಎಂದು ಅನಯಾ ತಿಳಿಸಿದ್ದಾರೆ.
ಅನಯಾ ಈ ಹಿಂದೆ ಸರ್ಫರಾಜ್ ಖಾನ್ ಹಾಗೂ ಮುಶೀರ್ ಖಾನ್ ಅವರ ಜೊತೆಗೆ ಮುಂಬೈ ತಂಡದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಆದರೆ, ಮಹಿಳಾ ಬಿಗ್ ಬ್ಯಾಷ್ ಲೀಗ್‌ನಂತಹ ಎಲೈಟ್ ಕ್ರಿಕೆಟ್‌ನಲ್ಲಿ ಆಡಲು ಪ್ರತ್ಯೇಕ ಅರ್ಹತಾ ನಿಯಮಗಳನ್ನು ಪೂರೈಸಬೇಕಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ನೀತಿಯ ಪ್ರಕಾರ, ಆಟಗಾರ್ತಿಯ ಸೀರಮ್ ಟೆಸ್ಟೋಸ್ಟೆರಾನ್ ಮಟ್ಟ ಕನಿಷ್ಠ 12 ತಿಂಗಳ ಕಾಲ ಪ್ರತಿ ಲೀಟರ್‌ಗೆ 10 ನ್ಯಾನೊಮೋಲ್‌ಗಿಂತ ಕಡಿಮೆ ಇರಬೇಕು.
ಈ ನಡುವೆ 2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪುರುಷ ಪ್ರೌಢಾವಸ್ಥೆ ತಲುಪಿರುವ ಟ್ರಾನ್ಸ್‌ಜೆಂಡರ್ ಆಟಗಾರ್ತಿಯರು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನ ಎಲೈಟ್ ವಿಭಾಗದಲ್ಲಿ ಆಡುವುದಕ್ಕೆ ನಿರ್ಬಂಧ ಹೇರಿತ್ತು.
ಕ್ರಿಕೆಟ್ ಆಸ್ಟ್ರೇಲಿಯಾದ ಸಮಗ್ರತೆಯ ಮುಖ್ಯಸ್ಥ ಜಾಕ್ವಿ ಪಾರ್ಟ್ರಿಡ್ಜ್ ಅವರು ಅನಯಾಗೆ ಬರೆದ ಪತ್ರದಲ್ಲಿ, ಮಾರ್ಚ್ 2027ರವರೆಗೆ ಆಸ್ಟ್ರೇಲಿಯಾದ ಯಾವುದೇ ರಾಜ್ಯ ಅಥವಾ ಪ್ರಾಂತ್ಯದ ಪ್ರೀಮಿಯರ್ ಕ್ರಿಕೆಟ್ ಸ್ಪರ್ಧೆಗಳಲ್ಲಿ ಅವರು ಆಡಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೇಷ್ಮೆ ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನಕ್ಕೇರಲಿ: ಗೋವಿಂದ ಕಾರಜೋಳ
ಪ್ರೀಮಿಯರ್ ಕ್ರಿಕೆಟ್ ಅನ್ನು ಕ್ರಿಕೆಟ್ ಆಸ್ಟ್ರೇಲಿಯಾದ ನೀತಿಯಡಿ ಎಲೈಟ್ ಕ್ರಿಕೆಟ್ ಬದಲಿಗೆ ಸಮುದಾಯ ಕ್ರಿಕೆಟ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅನಯಾ ಸದ್ಯ ಯಾವುದೇ ರಾಜ್ಯ ಅಥವಾ ಪ್ರಾಂತ್ಯದಲ್ಲಿ ಸಮುದಾಯ ಮಟ್ಟದ ಮಹಿಳಾ ಕ್ರಿಕೆಟ್ ಆಡಲು ಅರ್ಹರಾಗಿದ್ದಾರೆ.
ಅನಯಾಗೆ ಈ ಅವಕಾಶ ಸಿಕ್ಕಿರುವುದು ಮತ್ತೆ ಬ್ಯಾಟ್ ಹಿಡಿದು ಮೈದಾನಕ್ಕಿಳಿಯುವ ಕನಸಿಗೆ ಹೊಸ ಭರವಸೆ ನೀಡಿದೆ. ಇದನ್ನೂ ಓದಿ: ಭಾರತೀಯರ ಹೊಸ ಫಿಟ್‌ನೆಸ್, ಕ್ಯಾರಿಯರ್ ಮಂತ್ರವಾದ ಬ್ಯಾಡ್ಮಿಂಟನ್ – ಇಷ್ಟೊಂದು ಜನಪ್ರಿಯವಾಗುತ್ತಿರೋದು ಯಾಕೆ?
