ಸ್ಯಾಂಡಲ್‌ವುಡ್‌ಗೆ `ರೂಪಾಂತರ’ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ನಟಿ ಸಂಗೀತಾ ಭಟ್ ಈಗ ಕಿರುತೆರೆಗೆ ವಿಶೇಷ ಪಾತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ನಾಗಿಣಿ ಅವತಾರದಲ್ಲಿ ಸಂಗೀತಾ ಭಟ್ ಬರುತ್ತಿದ್ದಾರೆ.


ಖಾಸಗಿ ವಾಹಿನಿಯ `ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿಯಾಗಿ ನಿರ್ವಹಿಸಿದ್ದಾರೆ. ನಾಗರಪಂಚಮಿ ಪ್ರಯುಕ್ತ ನಾಗಮಣಿ ರಹಸ್ಯ ಎಂಬ ಎಪಿಸೋಡ್‌ಗಾಗಿ ವಿಶೇಷ ಪಾತ್ರ ಮಾಡಿದ್ದಾರೆ. 3 ಗಂಟೆಗಳ ಮಹಾ ಸಂಚಿಕೆ ಇದಾಗಿದೆ. ಈ ಸೀರಿಯಲ್ ಸಂಗೀತಾ ಭಟ್ ನಾಗಿಣಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಜುಲೈ 31ರಂದು ಸಂಜೆ 6 ಗಂಟೆಗೆ ಸಂಚಿಕೆ ಪ್ರಸಾರವಾಗಲಿದೆ. ಸೀರಿಯಲ್ ಪ್ರೋಮೋ ಮೂಲಕ ಹೈಪ್ ಕ್ರಿಯೇಟ್ ಮಾಡಿರುವ ಸೀರಿಯಲ್, ಪ್ರಸಾರದ ನಂತರ ಹೇಗೆಲ್ಲಾ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.

