ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನದ ಕಲೆಕ್ಷನ್ 35 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಬಿಡುಗಡೆಯಾದ ಅಷ್ಟೂ ಭಾಷೆಗಳಲ್ಲೂ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಸಹಿಸಲಾಗದ ಕೆಲವರು ಸಿನಿಮಾದ ಬಗ್ಗೆ ಅಪಪ್ರಚಾರ ಶುರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಹಾಗಾಗಿ ಕಿಚ್ಚನ ಅಭಿಮಾನಿಗಳು ಗರಂ ಆಗಿದ್ದಾರೆ.
Advertisement
ಸುದೀಪ್ ಸಿನಿಮಾಗಳು ರಿಲೀಸ್ ಆದಾಗ ಇಂತಹ ಅಪಪ್ರಚಾರ ನಡೆಯುತ್ತಲೇ ಬಂದಿದೆ. ಪೈಲ್ವಾನ್ ಸಿನಿಮಾ ರಿಲೀಸ್ ಆದಾಗ ಅದನ್ನು ಪೈರಸಿ ಕೂಡ ಮಾಡಲಾಗಿತ್ತು. ಪೈರಸಿ ಮಾಡಿ, ಹಂಚಿದವನನ್ನು ಅರೆಸ್ಟ್ ಮಾಡಿದಾಗ, ಆತ ಕನ್ನಡದ ಮತ್ತೋರ್ವ ನಟನ ಅಭಿಮಾನಿ ಎಂದು ಗುರುತಿಸಲಾಗಿತ್ತು. ಇದೇ ವಿಚಾರವಾಗಿ ಆ ನಟನ ಅಭಿಮಾನಿಗಳು ಮತ್ತು ಸುದೀಪ್ ಅಭಿಮಾನಿಗಳ ಮಧ್ಯೆ ಜಗಳ ಶುರುವಾಗಿತ್ತು. ಈಗ ಮತ್ತದೇ ವಾತಾವರಣ ಉಂಟಾಗಿದೆ. ಇದನ್ನೂ ಓದಿ:ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿಗೆ ಸೀರೆ ಉಡೋದು ಕಷ್ಟವಂತೆ
Advertisement
Advertisement
ಕೆಲ ಕಿಡಿಗೇಡಿಗಳು ವಿಕ್ರಾಂತ್ ರೋಣ ಚೆನ್ನಾಗಿಲ್ಲ, ಅದೊಂದು ಡಬ್ಬಾ ಸಿನಿಮಾ ಹೀಗೆ ನಾನಾ ರೀತಿಯ ಗಾಸಿಪ್ ಕ್ರಿಯೇಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ವಿಮರ್ಶೆಯ ಹೆಸರಿನಲ್ಲಿ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿ, ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ ಶುರುವಾಗಿದೆ. ಅಂತಹ ನೆಗೆಟಿವ್ ಮಾಡುವವರ ವಿರುದ್ಧ ಕಿಚ್ಚನ ಅಭಿಮಾನಿಗಳು ಕೂಡ ಗರಂ ಆಗಿದ್ದಾರೆ.