ಲಕ್ನೋ: ಬಾಲಿವುಡ್ (Bollywood) ನಟರು ಮತ್ತು ಡ್ರಗ್ಸ್ (Drugs) ಬಗ್ಗೆ ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ಧ್ವನಿ ಎತ್ತಿದ್ದು, ನಟ ಸಲ್ಮಾನ್ ಖಾನ್ (Salman Khan) ಡ್ರಗ್ಸ್ ಸೇವಿಸುತ್ತಾರೆ. ನಟ ಶಾರೂಖ್ ಖಾನ್ (Shah Rukh Khan) ಪುತ್ರ ಕೂಡ ಡ್ರಗ್ಸ್ ಸೇವಿಸಿ ಸಿಕ್ಕಿ ಹಾಕಿಕೊಂಡಿದ್ದರು ಎಂದು ಹೇಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್‍ನಲ್ಲಿ ನಡೆದ ಡ್ರಗ್ಸ್ ವಿರೋಧಿ ಚಳುವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಮ್‍ದೇವ್ ಅವರು, ಡ್ರಗ್ಸ್ ವಿಚಾರಕ್ಕೆ ಚಿತ್ರರಂಗ ಮತ್ತು ತಾರೆಯರನ್ನು ದೂಷಿಸಿದ್ದಾರೆ. ಇದನ್ನೂ ಓದಿ: ಯತ್ನಾಳಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ, ಅವರಷ್ಟು ಬುದ್ಧಿವಂತಿಕೆಯೂ ನನಗಿಲ್ಲ: ಸವದಿ
Advertisement
Advertisement
ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ (Aryan Khan) ಡ್ರಗ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದು, ಜೈಲಿಗೆ ಹೋಗಿದ್ದರು. ಸಲ್ಮಾನ್ ಖಾನ್ ಕೂಡ ಡ್ರಗ್ಸ್ ಸೇವಿಸುತ್ತಾರೆ. ಅಮೀರ್ ಖಾನ್ (Aamir Khan) ಡ್ರಗ್ಸ್ ಸೇವಿಸುತ್ತಾರೋ ಇಲ್ಲವೋ ಎಂಬುವುದರ ಬಗ್ಗೆ ನನಗೆ ಗೊತ್ತಿಲ್ಲ. ಈ ನಟರ ಬಗ್ಗೆ ಆ ದೇವರಿಗೆ ಗೊತ್ತು. ಎಷ್ಟು ಸಿನಿಮಾ ಸ್ಟಾರ್ಸ್‍ಗಳು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂಬುವುದು ಯಾರಿಗೆ ಗೊತ್ತು? ನಟಿಯರ ಬಗ್ಗೆ ಕೇಳಬೇಕಾಗಿಲ್ಲ. ಚಿತ್ರರಂಗದಲ್ಲೂ ಡ್ರಗ್ಸ್ ಇದೆ, ರಾಜಕೀಯದಲ್ಲೂ ಡ್ರಗ್ಸ್ ಇದೆ. ಚುನಾವಣೆ ಸಂದರ್ಭದಲ್ಲಿ ಮದ್ಯ ಹಂಚಲಾಗುತ್ತದೆ. ಭಾರತವು ಪ್ರತಿಯೊಂದು ಮಾದಕ ವ್ಯಸನದಿಂದ ಮುಕ್ತವಾಗಬೇಕು ಎಂದು ನಾವು ಪ್ರತಿಜ್ಞೆ ಮಾಡಬೇಕು. ಇದಕ್ಕಾಗಿ ಚಳುವಳಿ ನಡೆಸುತ್ತೇವೆ ಎಂದಿದ್ದಾರೆ.
Advertisement
ಸದ್ಯ ರಾಮ್‍ದೇವ್ ಅವರ ಈ ಹೇಳಿಕೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯಾವುದೇ ಆಧಾರವಿಲ್ಲದೆ ಆರೋಪ ಮಾಡಿದ್ದಾರೆ ಎಂದು ಅವರು ನೀಡಿದ ಹೇಳಿಕೆಗೆ ಯಾವುದೇ ಸೆಲೆಬ್ರಿಟಿಗಳು ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಮಳೆಯಿಂದ ಅವಾಂತರ – ಡಿಸಿ ಕಚೇರಿ ಗೇಟ್ ಮುರಿದು ಒಳನುಗ್ಗಿದ ಬೀಡಿ ಕಾಲೋನಿ ನಿವಾಸಿಗಳು