ನವದೆಹಲಿ: ನಕ್ಸಲ್ ಪೀಡಿತ ಪ್ರದೇಶಗಳಿಗೆ ಅಕ್ರಮವಾಗಿ ವಿದೇಶಿ ಹಣವನ್ನು ಹರಿಸಲಾಗುತ್ತಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಹೊಸ ತನಿಖೆಯನ್ನು ಪ್ರಾರಂಭಿಸಿದೆ.
ನವೆಂಬರ್ 2025 ರಿಂದ ಏಪ್ರಿಲ್ 2026 ರ ನಡುವೆ ಸುಮಾರು 95 ಕೋಟಿ ರೂ. ವಿದೇಶಿ ಹಣವನ್ನು ಭಾರತೀಯ ಬ್ಯಾಂಕಿಂಗ್ ಹಾಗೂ ನಿಯಂತ್ರಣ ಮಾರ್ಗಗಳನ್ನು ಬೈಪಾಸ್ (ಉಲ್ಲಂಘಿಸಿ) ಮಾಡಿ, ವಿದೇಶಿ ಡೆಬಿಟ್ ಕಾರ್ಡ್‌ಗಳ ಮೂಲಕ ಭಾರತಕ್ಕೆ ತರಲಾಗಿದೆ ಎಂದು ಇಡಿ ಆರೋಪಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಿಬಿಐಗೆ (CBI) ಪತ್ರ ಬರೆದಿದ್ದು, ಯುಎಪಿಎ (UAPA – ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ), ಎಫ್‌ಸಿಆರ್‌ಎ (FCRA) ಮತ್ತು ಭಾರತೀಯ ನ್ಯಾಯ ಸಂಹಿತೆ (BNS, 2023) ನಿಯಮಾವಳಿಗಳ ಅಡಿಯಲ್ಲಿ ತಕ್ಷಣವೇ ಪ್ರಕರಣ ದಾಖಲಿಸುವಂತೆ ವಿನಂತಿಸಿದೆ. ಇದನ್ನೂ ಓದಿ: ಸಿಜೆಪಿ ಪ್ರತಿಭಟನೆಯ ಡ್ರೋನ್ ವಿಡಿಯೋ ವೈರಲ್ — ತನಿಖೆ ಆರಂಭಿಸಿದ ದೆಹಲಿ ಪೊಲೀಸ್
ಅಮೆರಿಕ ಮೂಲದ ‘ಟ್ರೂಯಿಸ್ಟ್ ಬ್ಯಾಂಕ್’ (Truist Bank) ನೀಡಿದ್ದ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಎಟಿಎಂಗಳಿಂದ ಕೋಟ್ಯಂತರ ರೂಪಾಯಿ ನಗದು ಹಿಂಪಡೆಯಲಾಗಿದೆ. ವಿದೇಶಿ ಸಂಸ್ಥೆಯೊಂದು ನಕಲಿ/ಶೆಲ್ ಕಂಪನಿಗಳ ಜಾಲದ ಮೂಲಕ ಕಾರ್ಯಾಚರಿಸುತ್ತಿದ್ದು, ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಅಕ್ರಮ ಜಾಲದ ಸುಳಿವು ದೊರೆತ ನಂತರ ಇಡಿ ನೀಡಿದ್ದ ಲುಕ್‌ಔಟ್ ನೋಟಿಸ್ ಆಧಾರದ ಮೇಲೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ತಡೆಯಲಾಗಿತ್ತು. ಆತನ ಬಳಿ 24 ವಿದೇಶಿ ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿದ್ದವು. ಇದನ್ನೂ ಓದಿ: ಭಾರತದಲ್ಲಿ ನಕ್ಸಲ್ ಚಳವಳಿಯ ಅಂತ್ಯ – ʻರೆಡ್ ಕಾರಿಡಾರ್ʼ ಇತಿಹಾಸದ ಇನ್‌ಸೈಡ್ ಸ್ಟೋರಿ!
