– ಅಮೆರಿಕದಲ್ಲಿ ನಿವೃತ್ತಿಗೊಂಡಿದ್ದ ವಿಮಾನ ಭಾರತದಲ್ಲಿ ಬಳಸಿದ್ದಾರೆಂದು ಆರೋಪ
ಬೆಂಗಳೂರು: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ದುರಂತ ಪ್ರಕರಣ (Ajit Pawar Plane crash case) ಮತ್ತೆ ಮುನ್ನಲೆಗೆ ಬಂದಿದೆ. ಅಜಿತ್ ಪವಾರ್ ಅವರದ್ದು ವಿಮಾನ ದುರಂತವಲ್ಲ ಅದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ಝೀರೋ ಎಫ್‌ಐಆರ್ (Zero FIR) ದಾಖಲಾಗಿದೆ.
ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ (High Grounds police station) ಅಜಿತ್ ಪವಾರ್ ಅವರ ಅಳಿಯ ರೋಹಿತ್ ರಾಜೇಂದ್ರ ಪವಾರ್ ರಿಂದ ದೂರು ದಾಖಲಾಗಿದೆ. ಪ್ರಕರಣದಲ್ಲಿ ಹಲವು ಆಂಶಗಳನ್ನ ಅಳವಡಿಸುವ ಮೂಲಕ ಇದೊಂದು ದುರಂತವಲ್ಲ ವ್ಯವಸ್ಥಿತ ಕೊಲೆಯೆಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲಾಗಿದೆ.

ಹಾರಾಟದ ಅವಧಿ ಮುಗಿದಿದ್ದರೂ ವಿಮಾನ ಹಾರಾಡಿದ್ದು ಯಾಕೆ..? ಸುಮಾರು 8,000 ಗಂಟೆಗಳ ಕಾಲ ಹಾರಾಟ ನಡೆಸಿದ್ದರೂ ಅದನ್ನ ಮುಚ್ಚಿಡಲಾಗಿದೆ. ಡಿಜಿಸಿಎ ತನಿಖೆಯಲ್ಲಿ ವಿಮಾನವು ಹಾರಾಟಕ್ಕೆ ಯೋಗ್ಯವಾಗಿರಲಿಲ್ಲವೆಂದು ವರದಿ ನೀಡಿದ್ದರೂ ಬಳಸಿರುವುದು ಯಾಕೆ..? ಎಂದು ಎಫ್‌ಐಆರ್ ಉಲ್ಲೇಖಿಸಲಾಗಿದೆ.
ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದ ವಿಮಾನವನ್ನ ಭಾರತಕ್ಕೆ ತಂದು ಬಳಸಿದ್ದಾರೆಂದು ಆರೋಪಿಸಲಾಗಿದೆ. ಅಲ್ಲದೇ, ವಿಮಾನದ ಪೈಲಟ್ ಸುಮಿತ್ ಕಪೂರ್ ಈ ಹಿಂದೆ ಎರಡು ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದ ಅವರನ್ನ ಅಮಾನತು ಮಾಡಿದ್ದರು. ಆದ್ರೂ ಅದೇ ಪೈಲಟ್‌ರನ್ನ ನೇಮಿಸಲಾಗಿದೆ. ಇಂತಹ ಇತಿಹಾಸವಿದ್ದರೂ ಉಪಮುಖ್ಯಮಂತ್ರಿಗಳ ವಿಮಾನಕ್ಕೆ ಅವರನ್ನೇ ಪೈಲಟ್ ಆಗಿ ನೇಮಿಸಿದ್ದು ಯಾಕೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ನಿರ್ಧಾರ ಹಿಂದೆ ಯಾರು ಇದ್ದಾರೆಂಬುದನ್ನು ತನಿಖೆ ಮಾಡಬೇಕೆಂದು ಎಫ್‌ಐಆರ್‌ನಲ್ಲಿ ರೋಹಿತ್ ರಾಜೇಂದ್ರ ಪವಾರ್ ಉಲ್ಲೇಖಿಸಿದ್ದಾರೆ.

ಝೀರೋ ಎಫ್‌ಐಆರ್
ಝೀರೋ ಎಫ್‌ಐಆರ್ (Zero FIR) ಎಂದರೆ ಅಪರಾಧ ನಡೆದ ಸ್ಥಳದ (ನ್ಯಾಯವ್ಯಾಪ್ತಿ) ಮಿತಿಯನ್ನು ಲೆಕ್ಕಿಸದೆ, ದೇಶದ ಯಾವುದೇ ಪೊಲೀಸ್ ಠಾಣೆಯಲ್ಲಿ ತಕ್ಷಣವೇ ದೂರು ದಾಖಲಿಸಬಹುದಾದ ವ್ಯವಸ್ಥೆ. ಇದಕ್ಕೆ ‘0’ ಸಂಖ್ಯೆ ನೀಡಿ, ನಂತರ ತನಿಖೆಗಾಗಿ ಸಂಬಂಧಿತ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ.



