ವಿಶ್ವ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗೆ ಎಲ್ಲರಿಗೂ ಕಣ್ಣಿದೆ. ಹಾಗೆಯೇ ಮುಂಬರುವ ಚಿತ್ರದಲ್ಲಿ ಯಾವ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕೂಡ ಇದೆ. ಹಾಗಾದ್ರೆ ಯಶ್ ಮುಂದಿನ ಸಿನಿಮಾ ಯಾವುದು ಎಂಬುದರ ಡಿಟೈಲ್ಸ್ ಇಲ್ಲಿದೆ.
Advertisement
`ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್ ಮುಂದೇನು ಮಾಡುತ್ತಾರೆ. ಯಶ್ ಮುಂದಿನ ನಡೆಯೇನು ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲವಿದೆ. ಈಗಾಗಲೇ ನರ್ತನ್ ಸಿನಿಮಾಗೆ ಯಶ್ ಕೈಜೋಡಿಸಿದ್ದಾರೆ ಎನ್ನಲಾಗುತ್ತಿದೆ. ರಾಕಿಭಾಯ್ ಕೈಯಲ್ಲಿ ಯಾವೆಲ್ಲಾ ಸಿನಿಮಾಗಳಿವೆ ಎಂಬುದನ್ನ ಅಧಿಕೃತವಾಗಿ ತಿಳಿಸಲಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ
Advertisement
Advertisement
ಇನ್ನು ಇತ್ತಿಚೆಗೆ ಮೈಸೂರಿನ ಯುವಜನ ಮಹೋತ್ಸವ ಕಾರ್ಯಕ್ರಮಕ್ಕೆ ಯಶ್ ಭಾಗಿಯಾಗಿದ್ದರು. ಈ ವೇಳೆ ತಮ್ಮ ಹೊಸ ಹೇರ್ ಸ್ಟೈಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಸಿನಿಮಾ ಬಗ್ಗೆ ಕುತೂಹಲವಿರಲಿ, ಯಾವ ಸಿನಿಮಾ, ಯಾವ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ ಎಂಬುದನ್ನ ಕಾದುನೋಡಿ ಎಂದು ಯಶ್ ಮಾತನಾಡಿದ್ದಾರೆ. ಮುಂದಿನ ಚಿತ್ರದ ಬಗ್ಗೆ ಯವುದೇ ರೀತಿಯ ಸುಳಿವು ಕೊಡದೇ, ಡಿಫರೆಂಟ್ ಲುಕ್‌ನಲ್ಲಿ ಬರುತ್ತೇನೆ ಎಂಬ ಸುಳಿವು ನೀಡಿದ್ದಾರೆ.