ಬೆಂಗಳೂರು: ನಟ ಚೇತನ್ ನೀಡಿದ ದೂರಿನ ಆಧಾರದ ಮೇಲೆ ಸಿನಿಮಾ ನಿರ್ಮಾಪಕ ಸಾ.ರಾ ಗೋವಿಂದ್ (Sa Ra Govindu) ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆದರಿಕೆ ಹಾಗೂ ಮನೆ ಮುಂದೆ ಗಲಾಟೆ ಮಾಡಿದ ಆರೋಪದ ಮೇಲೆ ಶೇಷಾದ್ರಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?
ಡಾ.ರಾಜ್‌ಕುಮಾರ್ ಸಮಾಧಿ ಜಾಗದ ಬಗ್ಗೆ ತಗಾದೆ ತೆಗೆದಿದ್ದ ನಟ ಚೇತನ್ (Chetan Ahimsa) ವಿರುದ್ಧ ಆಕ್ರೋಶ ಹೊರಬಿದ್ದಿತ್ತು. ಪೋಸ್ಟ್ ಪ್ರಶ್ನಿಸಿ ಮನೆಗೆ ನುಗ್ಗಿದ್ದವರ ವಿರುದ್ಧ ಇಂದು ನಟ ಚೇತನ್ ಅಹಿಂಸಾ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಾ.ರಾ ಗೋವಿಂದು, ಶಿವರಾಮೇಗೌಡ, ಶಿವಕುಮಾರ್ ನಾಯ್ಕ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿದ್ದರು.
ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಚೇತನ್ ಕಳೆದ ಶನಿವಾರ ಸಾ.ರಾ ಗೋವಿಂದು ಮನೆ ಹತ್ರ ಬಂದಿದ್ರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ರು. ಸಾರಾ ಗೋವಿಂದು ಹಿನ್ನೆಲೆಯೇ ಬೇರೆ ಇದೆ. ಅವರು ದುರಹಂಕಾರದಲ್ಲಿ ಮತ್ತು ಗೂಂಡಾಗಿರಿ ಮಾಡ್ತಿದ್ದಾರೆ. ಎಲ್ಲಾ ಸಂಘಟನೆಗಳು ಸೇರಿ ದಾಖಲೆ ಸಮೇತ ದೂರು ನೀಡಿದ್ದೇವೆ ಅಂತ ನಟ ಚೇತನಾ ಅಹಿಂಸಾ ತಿಳಿಸಿದ್ರು.

