Bengaluru CityCinemaKarnatakaLatestMain PostSandalwoodTV Shows

ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ

ಬಿಗ್ ಬಾಸ್ ಮನೆಯಲ್ಲಿ ಪ್ರೀತಿ, ಪ್ರೇಮ ಎಲ್ಲಾ ಮಾಮೂಲು. ದೊಡ್ಮನೆಯಲ್ಲಿ ಪ್ರತಿ ಸೀಸನ್‌ನಲ್ಲೂ ಪ್ರೇಮ ಕಥೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮಕಥೆಯೊಂದು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ರಾಕೇಶ್ ಅಡಿಗ ಮೇಲೆ ಇಬ್ಬರು ಹುಡುಗಿಯರಿಗೆ ಮನಸ್ಸಾಗಿದೆ.

ಮನೆಯ ಅಟ್ರಾಕ್ಷನ್ ಆಗಿರುವ ರಾಕೇಶ್‌ಗಾಗಿ ಸ್ಪೂರ್ತಿ ಗೌಡ ಮತ್ತು ಸೋನು ಗೌಡ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ಸ್ಪೂರ್ತಿ ಗೌಡ ಮತ್ತು ರಾಕೇಶ್ ಮಧ್ಯೆ ಏನೋ ನಡೆಯುತ್ತಿದೆ ಎಂದು ಹಲವರಿಗೆ ಅನುಮಾನ ಬಂದಿತ್ತು. ಸ್ಪೂರ್ತಿ ಕೂಡ ತಮಗೆ ಇಷ್ಟವೆಂದು ರಾಕೇಶ್ ಹೇಳಿಕೊಂಡಿದ್ದರು. ನಮ್ಮಿಬ್ಬರ ಜಾತಕ ಹೇಗಿದೆ ಹೊಂದಾಣಿಕೆ ಎಂದು ಗುರೂಜಿಗೆ ಕೇಳಿದ್ದರು. ಈಗ ರಾಕೇಶ್ ಮೇಲೆ ಸೋನು ಗೌಡ ಕಣ್ಣು ಬಿದ್ದಿದೆ. ಇದನ್ನೂ ಓದಿ:ಗಾಯಕ ಶಿವಮೊಗ್ಗ ಸುಬ್ಬಣ್ಣ ವಿಧಿವಶ

ಸೋನು ಗೌಡ ಇದೀಗ ರಾಕೇಶ್‌ಗೆ ಮನಸೋತಿದ್ದಾರೆ. ಈ ವಿಷಯವನ್ನು ಅವರೇ ಬಿಗ್‌ಬಾಸ್ ಮನೆಯಲ್ಲಿ ಕೆಲವರೊಟ್ಟಿಗೆ ಹೇಳಿಕೊಂಡಿದ್ದಾರೆ. ರೂಪೇಶ್ ಜೊತೆ ಮಾತನಾಡುವಾಗ, ಅವಳು ರಾಕೇಶ್ ಜೊತೆ ಅಂಟಿಕೊಂಡು ಕೂತಿದ್ದಳು. ಅದಕ್ಕೆ ನಾನು ಹೇಳಿದೆ ಹೇ ಯಾಕೆ ಅವನೊಟ್ಟಿಗೆ ಹಾಗೆ ಕೂರುತ್ತೀಯ ಅವನು ನನ್ನ ಹುಡುಗ ಎಂದು ಹೇಳಿದೆ ಎಂದು ಹೇಳುತ್ತಾರೆ. ಅದಕ್ಕೆ ರೂಪೇಶ್, ನೀನು ಗಂಭೀರವಾಗಿದ್ದೀಯ ಎಂದು ಕೇಳುತ್ತಾರೆ. ಹೌದು ನಾನು ಸೀರಿಯಸ್ ಆಗಿಯೇ ಹೇಳಿದೆ. ನನಗೆ ನನ್ನ ಹುಡುಗನ ಜೊತೆ ಬೇರೆಯವರು ಸಲುಗೆಯಿಂದ ಇರೋದು ಇಷ್ಟವಿಲ್ಲ ಎಂದಿದ್ದಾರೆ. ರಾಕೇಶ್ ಮಾತ್ರ ಸೋನು ಗೌಡಗೆ ಹೊಟ್ಟೆ ಕಿಚ್ಚು ತರಿಸುವ ಕಾರ್ಯ ಮಾಡುತ್ತಿದ್ದಾರೆ. ಬೇಕೆಂದೇ ಸ್ಪೂರ್ತಿ ಕೈಲಿಂದು ತುತ್ತು ತಿನ್ನಿಸಿಕೊಳ್ಳುವುದು. ಸೋನು ನೋಡಲೆಂದು, ಸ್ಪೂರ್ತಿ ಹಾಗೂ ಅಕ್ಷತಾ ಹೆಗಲ ಮೇಲೆ ಒಟ್ಟಿಗೆ ಕೈ ಹಾಕಿಕೊಂಡು ಆಕೆಯ ಮುಂದೆಯೇ ಓಡಾಡುವುದು ಮಾಡಿದ್ದಾರೆ.

ಕಡೆಗೆ ರಾಕೇಶ್ ಬಳಿಯೇ ತಮ್ಮ ಪ್ರೀತಿಯನ್ನು ಪರೋಕ್ಷವಾಗಿ ಹೇಳಿಕೊಳ್ಳುತ್ತಾರೆ. ಆದರೆ ರಾಕೇಶ್ ಅದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ನಿಜವಾಗಿಯೂ ನನ್ನ ಬಗ್ಗೆ ಫೀಲಿಂಗ್ಸ್ ಇದೆಯಾ ಅಥವಾ ಸುಮ್ಮನೆ ತಮಾಷೆಗೆ ಹೇಳುತ್ತಿದ್ದೀಯ ಎಂದು ರಾಕೇಶ್ ಪ್ರಶ್ನಿಸಿದಾಗ ನಾನು ಸೀರಿಯಸ್ಸಾಗಿದ್ದೀನಿ ಎಂದು ಸೋನು ಹೇಳಿದ್ದಾರೆ. ಹಾಗಿದ್ದರೆ ಇನ್ನು ಮುಂದೆ ನಿನ್ನ ಬಗ್ಗೆ ತಮಾಷೆ ಮಾಡುವುದಿಲ್ಲ ಎನ್ನುತ್ತಾರೆ ರಾಕೇಶ್. ಆದರೆ ಸೋನು ಗೌಡಗೆ ಮಾತ್ರ ಸೂಕ್ತವಾದ ಉತ್ತರವನ್ನು ರಾಕೇಶ್ ನೀಡಿಲ್ಲ. ಈಗ ಸ್ಪೂರ್ತಿ ಗೌಡ ಅಥವಾ ಸೋನು ಗೌಡ ಇಬ್ಬರಲ್ಲಿ ಯಾರ ಪ್ರೀತಿಗೆ ರಾಕೇಶ್ ಅಸ್ತು ಎನುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

Live Tv

Leave a Reply

Your email address will not be published.

Back to top button