ನವದೆಹಲಿ: ನಗರಗಳಲ್ಲಿ ಬಾರ್ ಹೊಂದಿರುವ ಮಾಲೀಕರಿಗೆ ಗುಡ್ನ್ಯೂಸ್. ನಗರದ ಹೊರವಲಯದಲ್ಲಿ ಬಾರ್ ನಿಷೇಧ ಕಡ್ಡಾಯವಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳು ನಗರದ ವ್ಯಾಪ್ತಿಯ ಒಳಗಡೆ ಇದ್ದರೆ ಅದನ್ನು ಡಿನೋಟಿಫೈ ಮಾಡುವುದು ತಪ್ಪಲ್ಲ ಎನ್ನುವ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ.
ಪಂಜಾಬ್ ಸರ್ಕಾರ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿದ್ದನ್ನು ಪ್ರಶ್ನಿಸಿ ಸರ್ಕಾರೇತರ ಸಂಸ್ಥೆಯೊಂದು(ಎನ್ಜಿಒ) ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನಗರ ವ್ಯಾಪ್ತಿಯಲ್ಲಿ ಹೆದ್ದಾರಿ ಡಿನೋಟಿಫೈ ಮಾಡಿದ್ರೆ ತಪ್ಪೇನು ಎಂದು ಪ್ರಶ್ನಿಸಿದೆ.
Advertisement
ಮದ್ಯ ಸೇವಿಸಿ ಹೆದ್ದಾರಿಗಳಲ್ಲಿ ವೇಗವಾಗಿ ಸಂಚರಿಸುವ ಹಿನ್ನೆಲೆಯಲ್ಲಿ ನಾವು ನಾವು ಮದ್ಯ ಮಾರಾಟವನ್ನು ನಿಷೇಧಿಸಿದ್ದೇವೆ. ಆದರೆ ನಗರದಲ್ಲಿರುವ ರಸ್ತೆಯಲ್ಲಿ ಈ ರೀತಿಯ ಸಮಸ್ಯೆ ಆಗುವುದಿಲ್ಲ. ಅಷ್ಟೇ ಅಲ್ಲದೇ ನಗರ ವ್ಯಾಪ್ತಿಯಲ್ಲಿ ಹೆದ್ದಾರಿಗಳಲ್ಲಿ ವೇಗ ನಿಯಂತ್ರಣ ಇರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟು ಈ ಡಿನೋಟಿಫೈ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.
Advertisement
ವಿಚಾರಣೆ ವೇಳೆ ನಗರದ ಒಳಗಡೆ ಇರುವ ಟ್ರಾಫಿಕ್ ಮತ್ತು ನಗರದ ಹೊರಗಡೆ ಇರುವ ಟ್ರಾಫಿಕ್ ಬೇರೆ. ಎರಡು ನಗರಗಳ ಮಧ್ಯೆ ಸಂಚರಿಸುವಾಗ ಡ್ರೈವರ್ಗಳು ಮದ್ಯ ಸೇವನೆ ಮಾಡದೇ ಇರಲು ಈ ನಿಷೇಧವನ್ನು ಹೇರಲಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟು ಅರ್ಜಿಯ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದೆ.
Advertisement
ಬೆಂಗಳೂರಿನಲ್ಲಿ ಸಭೆ: ಬಾರ್ ನಿಷೇಧಗೊಂಡ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ಕರೆದಿದ್ದಾರೆ. ಲೋಕೋಪಯೋಗಿ ಇಲಾಖೆ, ಅಬಕಾರಿ ಇಲಾಖೆ, ಕಾನೂನು ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
Advertisement
ಈಗಾಗಲೇ ರಾಜ್ಯದಲ್ಲಿ 3500 ಮದ್ಯದಂಗಡಿಗಳನ್ನ ಮುಚ್ಚಲಾಗಿದ್ದು, ಬೆಂಗಳೂರಲ್ಲೇ 850 ಮದ್ಯದಂಗಡಿಗಳನ್ನ ಬಂದ್ ಮಾಡಲಾಗಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಮದ್ಯದಂಗಡಿಗಳನ್ನ ಮುಚ್ಚಿದ್ದು, ಹೆದ್ದಾರಿ ಡಿನೋಟಿಫೈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಹಾಗಾಗಿ ಮುಂದಿನ ನಿರ್ಧಾರಗಳ ಬಗ್ಗೆ ಇವತ್ತು ಸಿಎಂ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಸುಪ್ರೀಂ ಹೇಳಿದ್ದು ಏನು?
ಮದ್ಯಪಾನದಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 20 ಸಾವಿರ ಜನಸಂಖ್ಯೆ ಇರುವ ಪಟ್ಟಣಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ 200 ಮೀಟರ್ ಹಾಗೂ 20 ಸಾವಿರ ಮೇಲ್ಪಟ್ಟು ಜನಸಂಖ್ಯೆ ಇರುವ ನಗರಗಳಲ್ಲಿ 500 ಮೀಟರ್ ವರೆಗಿರುವ ಮದ್ಯ ದಂಗಡಿಗಳನ್ನು ಸ್ಥಳಾಂತರಿಸಬೇಕು. ಇಲ್ಲವೇ ಬಂದ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅಷ್ಟೇ ಅಲ್ಲದೇ ಈ ಮದ್ಯದ ಅಂಗಡಿಗಳ ಪರಾವನಗಿಗಳನ್ನು ಮಾರ್ಚ್ 31ರ ಬಳಿಕ ನವೀಕರಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ನೇತೃತ್ವದ ಪೀಠ ಹೇಳಿತ್ತು.