Advertisements

ಬೆಂಗಳೂರು: ನಟ, ಜೆಡಿಎಸ್ ಯುವ ಮೋರ್ಚಾ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ.
Advertisements
ಜೂನ್ 8 ರಂದು ಬುಧವಾರ ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಮಹೋತ್ಸವ ನಡೆಸಲು ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ನಿರ್ಧರಿಸಿದೆ. ಸರಳವಾಗಿ ನಾಮಕರಣ ಮಹೋತ್ಸವ ನಡೆಸಲು ಕುಟುಂಬದವರು ನಿರ್ಧರಿಸಿದ್ದು, ಜೆಪಿ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸಮಾರಂಭ ನಡೆಯಲಿದೆ. ದೇವೇಗೌಡರ ಕುಟುಂಬ ಸದಸ್ಯರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಮೋಹಕತಾರೆ ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್
Advertisements
2020ರ ಏಪ್ರಿಲ್ 17ರಂದು ಬಿಡದಿ ಬಳಿ ಇರುವ ಕುಮಾರಸ್ವಾಮಿ ಅವರ ಫಾರ್ಮ್‍ಹೌಸ್‍ನಲ್ಲಿ ರೇವತಿ ಮತ್ತು ನಿಖಿಲ್ ಅವರ ವಿವಾಹ ಸಮಾರಂಭ ನಡೆದಿತ್ತು. 2021ರ ಸೆ.24 ರಂದು ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ತಂದೆಯನ್ನೂ ಕೊಲ್ಲುವ ಬೆದರಿಕೆ : ಎಫ್.ಐ.ಆರ್ ದಾಖಲು, ಹೆಚ್ಚಿದ ಭದ್ರತೆ
Advertisements
Advertisements