ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ 59ನೇ ಸೆಷನ್ಸ್ ಕೋರ್ಟ್ ಇಂದು (ಆ.24) ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಆದೇಶವನ್ನು ಹೊರಡಿಸಿದೆ.
ಆ.20ರಂದು ವಿಚಾರಣೆ ನಡೆಸಿದ್ದ ಕೋರ್ಟ್, ಜೈಲ್ಲಿನಲ್ಲಿರುವ ಅಧಿಕಾರಿಗಳಿಂದ ಪ್ರದೋಷ್ (Pradosh) ನಡವಳಿಕೆ ಬಗ್ಗೆ ವರದಿ ಕೇಳಿ, ಆ.24ಕ್ಕೆ ಅರ್ಜಿ ಆದೇಶವನ್ನು ಮುಂದೂಡಿಕೆ ಮಾಡಿತ್ತು. ಅದರಂತೆ ಇಂದು ಜೈಲಧಿಕಾರಿಗಳು ಕೋಟ್‌ಗೆ ವರದಿ ಸಲ್ಲಿಸಿದ್ದಾರೆ. ವರದಿ ಪರಿಶೀಲನೆ ಬಳಿಕ ಆರೋಪಿ ಪ್ರದೋಷ್ ಮಾಫಿ ಅರ್ಜಿ ಬಗ್ಗೆ ನ್ಯಾ.ಸುಜತಾ ಮಡಿವಾಳಪ್ಪ ಸಂಬ್ರಾಣಿ ಅವರು ಆದೇಶ ಪ್ರಕಟಿಸಲಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಆರೋಪಿ ಪ್ರದೋಷ್ ಮಾ
ಆದೇಶದ ಬಳಿಕ ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ಆರಂಭವಾಗಲಿದೆ. ಈ ಮಧ್ಯೆ ಮತ್ತೆ ಇಬ್ಬರು ಆರೋಪಿಗಳು ಮಾಫಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಹೀಗಾಗಿ ಕೋರ್ಟ್ ಮಾಫಿ ಸಾಕ್ಷಿಗೆ ಕ್ಷಮಾದಾನ ನೀಡುವಾಗ ಬಿಎನ್‌ಎಸ್‌ನ ಸಂಬಂಧಿತ ಕಾನೂನು ನಿಯಮಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದು, 17 ಆರೋಪಿಗಳ ಪೈಕಿ ಒಬ್ಬರಿಗೆ ಮಾಫಿ ಸಾಕ್ಷಿ ಸ್ಥಾನ ನೀಡಲಿದೆ. ಸದ್ಯ ಪ್ರಾಸಿಕ್ಯೂಷನ್‌ಗೆ ಮಾಫಿ ಸಾಕ್ಷಿ ಹೇಳಿಕೆ ಮಹತ್ವದ ಅಸ್ತ್ರವಾಗಲಿದೆ.

