ರಾಯಚೂರು: ಜಿಲ್ಲೆಯ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗೆ ಕೋರ್ಟ್ (Kalaburagi High Court) ತಡೆ ನೀಡಿದೆ.
ಸರ್ಕಾರದಿಂದ ಮಂಜೂರಾಗಿದ್ದ ವಿವಿಯ ಸಹಾಯಕ ಪ್ರಾಧ್ಯಾಪಕರ (Assistant Professor) 24 ಹುದ್ದೆಗಳ ನೇಮಕಾತಿಗೆ ಕಲಬುರಗಿ ಹೈಕೋರ್ಟ್ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರ ನೇಮಕಾತಿಗೆ 16 ಏಪ್ರಿಲ್ 2026 ರಂದು ಮಂಜೂರಾತಿ ನೀಡಿತ್ತು.

ಸರ್ಕಾರದ ಕೆಲ ಮಾರ್ಗಸೂಚಿಗಳು ಯು.ಜಿ.ಸಿ ನಿಯಮಾವಳಿಗಳ ಉಲ್ಲಂಘಿಸಿವೆ ಅಂತ ಆರೋಪಿಸಿ ಸ್ಪರ್ಧಾಕಾಂಕ್ಷಿ ಶ್ರೀಧರ್ ಎಂಬುವವರು ಕಲಬುರಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಪೀಠ ನೇಮಕಾತಿ ಪ್ರಕ್ರಿಯೆಗೆ ಮುಂದಿನ ಆದೇಶದವರೆಗೆ ತಡೆ ನೀಡಿದೆ. ಮೇ 7 ರಿಂದ ವಿವಿಯಲ್ಲಿ ನಡೆಯಬೇಕಿದ್ದ ನೇರ ನೇಮಕಾತಿ ಪ್ರಕ್ರಿಯೆ ಸದ್ಯ ಸ್ಥಗಿತವಾಗಿದೆ.

