ಮಂಗಳೂರು: ಝೀಬ್ರಾದ ರೀತಿಯ ಬಣ್ಣವನ್ನು ಹೋಲುವ ಅಪರೂಪದ ಹಾವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಪತ್ತೆಯಾಗಿದೆ.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಎಂಬಲ್ಲಿನ ಓಡಿಯಪ್ಪ ಎಂಬವರ ಮನೆ ಹಿತ್ತಿಲಿಗೆ ಆಗಮಿಸಿದ ಈ ಹಾವನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಮೈ ಪೂರ್ತಿ ಝೀಬ್ರಾದಂತೆ ಕಪ್ಪು ಮತ್ತು ಬಿಳಿಯ ಗೆರೆಗಳನ್ನು ಹೊಂದಿರುವ ಈ ಹಾವು, ಎರಡು ಅಡಿ ಉದ್ದ ಇತ್ತು. ಅಪರೂಪದ ಹಾವನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಗಿದೆ.
Advertisement
ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದ ತೋಟದಲ್ಲಿ ನಾಯಿ ಹಾಗೂ ಹಾವಿನ ಕಾಳಗದ ವೇಳೆ ಅಪರೂಪದ ಫೋಟೋ ಪತ್ತೆಯಾಗಿದೆ. ಸೂರ್ಯನ ಕಿರಣಕ್ಕೆ ಹಾವಿನ ತಲೆ ಹೊಳೆಯುತ್ತಿರುವ ಫೋಟೋ ದೇಶಾದ್ಯಂತ ವೈರಲ್ ಆಗಿತ್ತು.
Advertisement
Advertisement
ಅವಿನಾಶ್ ಎಂಬವರ ತೋಟದಲ್ಲಿ ನಾಯಿ ಮತ್ತು ನಾಗರಹಾವು ಮಧ್ಯೆ ಅರ್ಧ ಗಂಟೆಗಳ ಕಾಲ ಜಗಳ ನಡೆದಿತ್ತು. ಶ್ವಾನದ ಮೇಲೆ ನಾಗರಾಜ ರೋಷಾವೇಷವಾಗಿ ಹೋರಾಡಿದೆ. ಇತ್ತ ನಾಗರ ಹಾವು ನಾಯಿಯ ಜಗಳ ಕಂಡು ಮಾಲೀಕರು ದಂಗಾಗಿದ್ದರು. ಸ್ವಲ್ಪ ಹೊತ್ತಾದ ಬಳಿಕ ನಾಯಿ ಸಹವಾಸವೇ ಬೇಡ ಎಂದು ನಾಗರ ಹಾವು ವಾಪಸ್ ಹೋಗಿದೆ. ಈ ಘಟನೆಯನ್ನು ತೋಟದ ಮಾಲೀಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv