CinemaDistrictsKarnatakaLatestMain PostSandalwood

ತಿಂಗಳ ಮುತ್ತು: ರಣಬೀರ್ ಕಪೂರ್, ಆಲಿಯಾ ಭಟ್ ಕಿಸ್ಮತ್

ಬಾಲಿವುಡ್ ತಾರಾ ಜೋಡಿಯಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯಾಗಿ ಇಂದಿಗೆ ಒಂದು ತಿಂಗಳು ಕಳೆಯಿತು. ಏಪ್ರಿಲ್ 14 ರಂದು ಹಸೆ ಮಣೆ ಏರಿದ್ದ ಈ ಜೋಡಿಗಳು ಮದುವೆಯ ನಂತರ ತಮ್ಮ ತಮ್ಮ ಸಿನಿಮಾಗಳ ಶೂಟಿಂಗ್ ನಲ್ಲಿ ಪಾಲ್ಗೊಂಡರು. ಬರೋಬ್ಬರಿ ಒಂದು ತಿಂಗಳ ನಂತರ ಮತ್ತೆ ತಮ್ಮ ಮದುವೆ ದಿನವನ್ನು ನೆನಪಿಸಿಕೊಂಡಿದ್ದಾರೆ ಆಲಿಯಾ. ಒಂದು ತಿಂಗಳ ಖುಷಿಗಾಗಿ ಅವರು ತಮ್ಮ ಆತ್ಮಿಯ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

ಮದುವೆಯಾದ ಎರಡ್ಮೂರು ದಿನಗಳ ನಂತರ ರಣಬೀರ್ ಕಪೂರ್ ‘ಅನಿಮಲ್’ ಸಿನಿಮಾದ ಶೂಟಿಂಗ್ ಗಾಗಿ ಮನಾಲೆಗೆ ತೆರೆಳಿದರು. ಆಲಿಯಾ ಭಟ್ ಜೊತೆ ಹನಿಮೂನ್ ಗೆ ಹೋಗಬೇಕಿದ್ದ ರಣಬೀರ್, ರಶ್ಮಿಕಾ ಮಂದಣ್ಣ ಜೊತೆ ಮನಾಲೆಯಲ್ಲಿ ಶೂಟಿಂಗ್ ಮಾಡಬೇಕಾಯಿತು. ಆಲಿಯಾ ಕೂಡ ಅಷ್ಟೇ ಅವರು ಪತಿಯನ್ನು ಬಿಟ್ಟು ಶೂಟಿಂಗ್ ಸ್ಪಾಟ್ ಗೆ ಹೋಗಬೇಕಾಯಿತು. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

ರಣಬೀರ್ ಗಿಂತಲೂ ಆಲಿಯಾ ಇದೀಗ ಬಹುಬೇಡಿಕೆ ಉಳಿಸಿಕೊಂಡಿದ್ದಾರೆ. ಆಲಿಯಾ ನಟನೆಯ ಆರ್.ಆರ್.ಆರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿದೆ. ಗಂಗೂಬಾಯಿ ಸಿನಿಮಾ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ರಣಬೀರ್ ಮತ್ತು ಆಲಿಯಾ ಜೊತೆಯಾಗಿ ನಟಿಸಿರುವ ಬ್ರಹ್ಮಾಸ್ತ್ರ ರಿಲೀಸ್ ಗೆ ರೆಡಿಯಿದ್ದು, ಅದು ಕೂಡ ನಿರೀಕ್ಷೆ ಮೂಡಿಸಿದೆ.

Leave a Reply

Your email address will not be published.

Back to top button