ಬೆಂಗಳೂರು: ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗೋವರೆಗೂ ತಮಿಳುನಾಡಿಗೆ (Tamil Nadu) ನೀರು ಬಿಡಲ್ಲ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಖಡಕ್ಕಾಗಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ 15 ದಿನಗಳ ಕಾಲ 3,500 ಕ್ಯೂಸೆಕ್ ನೀರು ಹರಿಸಬೇಕೆಂಬ CWMA ಆದೇಶ ಕುರಿತು ಪ್ರತಿಕ್ರಿಯಿಸಿದರು. ಸದ್ಯಕ್ಕೆ ಕುಡಿಯೋ ನೀರಿಗೆ ಸಮಸ್ಯೆಯಿಲ್ಲ, ಆದ್ರೆ ರೈತರಿಗೆ ಬೆಳೆ ಬೆಳೆಯೋಕೆ ನೀರು ಕೊಡಲು ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: Karnataka Cauvery Protest Live Updates | ಕಾವೇರಿ ಕಿಚ್ಚು – KRS ಡ್ಯಾಮ್ ಬಳಿ ತೀವ್ರಗೊಂಡ ಪ್ರತಿಭಟನೆ

CWMA ನೀರು ಬಿಡೋಕೆ ಹೇಳಿದೆ. ಕಳೆದ 30 ವರ್ಷಗಳಿಂದ ವಾದ ಮಾಡಿದ್ದವರೇ ಈಗಲೂ ವಾದ ಮಾಡಿದ್ದಾರೆ. ಇನ್ನೂ ಭಾನುವಾರ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ. ವಿಪಕ್ಷಗಳ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡ್ತೀವಿ. ಸಭೆ ಆಗೋವರೆಗೂ ನೀರು ಬಿಡಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.
ಇನ್ನೂ ಬಿಜೆಪಿ ಪ್ರತಿಭಟನೆ (BJP Protest) ಕುರಿತು ಮಾತನಾಡಿ, ಬಿಜೆಪಿ ಪ್ರತಿಭಟನೆ ಮಾಡೋ ಅವಶ್ಯಕತೆ ಇರಲಿಲ್ಲ. ನಾವು ರೈತರ ಹಿತಾಸಕ್ತಿ ಗಮನ ಇಟ್ಟುಕೊಂಡು ಮೇಲ್ಮನವಿ ಹೋಗಿದ್ದು, ಸರ್ವಪಕ್ಷಗಳ ಸಭೆ ಕರೆದಿದ್ದೇವೆ. ನೆಲ, ಜಲ, ಭಾಷೆ ಬಂದಾಗ ಒಟ್ಟಾಗಿ ಹೋಗಬೇಕು. ನಾವು ಬಿಜೆಪಿಗೆ ಹಿಂದೆ ಸಹಕಾರ ಮಾಡಿದ್ವಿ. ಮುಂದೆ ಏನ್ ಮಾಡಬೇಕು ಅಂತ ವಿಪಕ್ಷಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ. ವರ್ಷಕ್ಕೆ 40 TMC ನೀರು ಕುಡಿಯೋಕೆ ಬೇಕು. ಮಳೆ ಬಂದರೆ ಸಮಸ್ಯೆ ಇರೊಲ್ಲ. ಕಳೆದ ವರ್ಷ ಮಳೆ ಬಂದಿತ್ತು ಏನೂ ಸಮಸ್ಯೆ ಆಗಿಲ್ಲ. ಈ ವರ್ಷ ಮಳೆ ಕಡಿಮೆ ಇದೆ. ಸ್ವಲ್ಪ ಮಳೆ ಬಂದಿದ್ದು ನಮಗೆ ಅನುಕೂಲ ಆಗಿತ್ತು. ಮೆಟ್ಟೂರು ಡ್ಯಾಂನಲ್ಲಿ ನೀರು ಇದೆ. ಅವರಿಗೆ ಕುಡಿಯೋ ನೀರಿಗೆ ಸಮಸ್ಯೆ ಇಲ್ಲ. ರಾಜ್ಯಕ್ಕೆ ವಿಜಯ್ ಬರ್ತಾರೆ. ಈ ವಿಚಾರ ವೂ ಚರ್ಚೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಮೇಕೆದಾಟು ಅಣೆಕಟ್ಟು ವಿಚಾರಕ್ಕೆ ಪ್ರತಿಕ್ರಿಯಿಸಿ, ಮೇಕೆದಾಟು DPR ವಾಪಸ್ ಕಳಿಸಿದ್ದಾರೆ. ಅಲೋಕೇಶನ್ ಆಗಿರೋದಕ್ಕೆ ನೀವು DPR ಕೊಡಿ ಅಂದಿದ್ದಾರೆ. ಒಂದು ವಾರದಲ್ಲಿ ಇದನ್ನ ಸರಿ ಮಾಡಿ ಕಳಿಸ್ತೀವಿ ಎಂದಿದ್ದಾರೆ. ಇದನ್ನೂ ಓದಿ: Public TV Exclusive | KPSC ಹಗರಣಕ್ಕೆ ಮತ್ತೊಂದು ಸಾಕ್ಷಿ – ದುಡ್ಡು ಕೊಟ್ರೆ ಲಾಕರ್‌ನಲ್ಲಿದ್ದ OMR ಸಹ ತಿದ್ದುಪಡಿನಾ?
