– ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ನೀಡಲಿರುವ ನಟ
ಕಠ್ಮಂಡು: ಭೀಕರ ಜಲಪ್ರಳಯಕ್ಕೆ ತತ್ತರಿಸಿ ಹೋಗಿದ್ದ ನೇಪಾಳದ (Nepal) ನೆರವಿಗೆ ಇದೀಗ ಬಾಲಿವುಡ್ ನಟ ಸೋನು ಸೂದ್ (Sonu Sood) ಆಗಮಿಸಿದ್ದಾರೆ.
ಆ.26ರಂದು ನೇಪಾಳದಲ್ಲಿ ಸಂಭವಿಸಿದ ಪ್ರವಾಹದ ಭೀಕರತೆಯನ್ನು ಕಂಡ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ದುಃಖವನ್ನು ವ್ಯಕ್ತಪಡಿಸಿದ್ದರು. ನೇಪಾಳ, ನೀವು ಒಂಟಿಯಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ನಿಮಗೆ ಆಹಾರ, ಆಶ್ರಯ ಮತ್ತು ನೀವು ಮತ್ತೆ ಎದ್ದು ನಿಲ್ಲಲು ಬೇಕಾದ ಎಲ್ಲ ರೀತಿಯ ಸಹಾಯ ಮಾಡಲು ಬರುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ನಟ ಕಠ್ಮಂಡು ತಲುಪಿದ್ದು, ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ನೀಡಲಿದ್ದಾರೆ.

#WATCH काठमांडू, नेपाल: अभिनेता सोनू सूद ने कहा, “हम यहां सभी पीड़ितों से मिलने आए हैं। हम भारत से बहुत सारा सामान लाए हैं और बस उन लोगों के साथ रहना चाहते हैं जिन्हें मदद की ज़रूरत है। हम उनकी ज़िंदगी को फिर से बसाने की कोशिश कर रहे हैं। अपना योगदान देना हर किसी का फर्ज़… pic.twitter.com/f6HMutNC2D
— ANI_HindiNews (@AHindinews) September 1, 2026
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ಸಹಾಯ ಮಾಡುವುದು ಎಲ್ಲರ ಕರ್ತವ್ಯ. ಅದನ್ನು ನಾವು ಮಾಡುತ್ತಿದ್ದೇವೆ. ಭಾರತದಿಂದ ಅಗತ್ಯ ಸಾಮಾನುಗಳನ್ನು ತಂದಿದ್ದೇವೆ. ಈಗಾಗಲೇ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಕಷ್ಟವನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಅವರೊಂದಿಗೆ ನಾವಿದ್ದು, ಅವರ ಜೀವನವನ್ನು ಮೊದಲಿನಂತಯೇ ಮಾಡಬೇಕು. ಇದು ನಮ್ಮ ಜವಾಬ್ದಾರಿ ಎಂದು ತಿಳಿಸಿದ್ದಾರೆ.
ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಲ್ಲಿ ಈವರೆಗೂ 939 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಜೊತೆಗೆ 2000ಕ್ಕೂ ಮಂದಿ ನಾಪತ್ತೆಯಾಗಿದ್ದಾರೆ.
